ಜಿಲ್ಲೆಯ ಚನ್ನಗಿರಿ ಪಟ್ಟಣದಲ್ಲಿ ಮಹಿಳೆ, ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಅದನ್ನು ವೀಡಿಯೊ ಮಾಡಿ ಹರಿಬಿಡುತ್ತಿದ್ದ ವ್ಯಕ್ತಿಯೊಬ್ಬನನ್ನು ದಾವಣಗೆರೆ ಸಿಇಎನ್ ಪೊಲೀಸರು ಬಂಧಿಸಿದ್ದಾರೆ.
ದಾವಣಗೆರೆಯ ದೇವರಾಜ್ ಅರಸ್ ಲೇಔಟ್‌ನ ನಿವಾಸಿ ಅಮ್ಜದ್ (56) ಬಂಧಿತ ಆರೋಪಿ
ಚನ್ನಗಿರಿಯಲ್ಲಿ ಮೆಡಿಕಲ್ ಶಾಪ್ ಇಟ್ಟುಕೊಂಡಿದ್ದ ಅಮ್ಜದ್ ಮಹಿಳೆಯರು, ಬಾಲಕಿಯರನ್ನು ಹಣದ ಆಮಿಷ ತೋರಿಸಿ ಬಳಸಿಕೊಂಡು ವೀಡಿಯೊ ಚಿತ್ರೀಕರಿಸಿಕೊಂಡು ಸ್ನೇಹಿತರಿಗೆ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದ ಎನ್ನಲಾಗಿದೆ.
ಇತ್ತೀಚೆಗೆ ಬಾಲಕಿಯ ವೀಡಿಯೊ ಜಾಲತಾಣದಲ್ಲಿ ಕಂಡು ಬಂದ ಹಿನ್ನೆಲೆಯಲ್ಲಿ ಚನ್ನಗಿರಿಯ ಎಎಸೈ ಶಶಿಧರ್ ಅವರು ಸಿಇಎನ್ ಪೊಲೀಸರಿಗೆ ದೂರು ನೀಡಿದ್ದು, ತಕ್ಷಣ ಸಿಇಎನ್ ಪೊಲೀಸರು ಅಮ್ಜದ್‌ನನ್ನು ಬಂಧಿಸಿ ಆತನ ಮೇಲೆ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಎಸ್ಪಿ ಉಮಾ ಪ್ರಶಾಂತ್, ಸಿಇಎನ್ ಅಪರಾಧ ಠಾಣೆಯ ಡಿವೈಎಸ್ಪಿ ಪದ್ಮಶ್ರೀ ಗುಂಜೀಕರ್ ಮಾರ್ಗದರ್ಶನದಲ್ಲಿ ಸಿಬ್ಬಂದಿ ಪ್ರಕಾಶ್, ಗೋವಿಂದರಾಜು ಅವರನ್ನೊಳಗೊಂಡ ತಂಡ ಅಮ್ಜದ್‌ನನ್ನು ಪತ್ತೆ ಮಾಡಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಂತರ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.