ಶನಿವಾರ ನಸುಕಿನ ವೇಳೆ (ಭಾರತೀಯ ಕಾಲಮಾನ) ಫಿಲಡೆಲ್ಫಿಯಾದ (Philadelphia) ಶಾಪಿಂಗ್ ಮಾಲ್‌ನ (Shopping Mall) ಸಮೀಪದಲ್ಲಿ ವಿಮಾನವೊಂದು ಪತನಗೊಂಡಿದೆ (Plane Crash). ಮಾಧ್ಯಮ ವರದಿಗಳ ಪ್ರಕಾರ, ಅನೇಕ ಮನೆಗಳು ಬೆಂಕಿಗೆ ಆಹುತಿಯಾಗಿವೆ ಮತ್ತು ಸಾವುನೋವುಗಳ ಭಯವಿದೆ.

ಫಿಲಡೆಲ್ಫಿಯಾ ವಿಮಾನ ಅಪಘಾತದಲ್ಲಿ ಕನಿಷ್ಠ ಆರು ಜನರು ಸಾವನ್ನಪ್ಪಿದ್ದಾರೆ ಎಂದು BNO ನ್ಯೂಸ್ ಹೇಳಿದೆ. ಆದರೆ ಸಾವಿನ ಸಂಖ್ಯೆಯ ಬಗ್ಗೆ ಅಧಿಕೃತವಾದ ಯಾವುದೇ ಮಾಹಿತಿ ಘೋಷಣೆಯಾಗಿಲ್ಲ

ನ್ಯೂಸ್ ಏಜೆನ್ಸಿ ರಾಯಿಟರ್ಸ್ ಫಿಲಡೆಲ್ಫಿಯಾ ಇನ್ಕ್ವೈರರ್ ಪತ್ರಿಕೆಯನ್ನು ಉಲ್ಲೇಖಿಸಿ ಈಶಾನ್ಯ ಫಿಲಡೆಲ್ಫಿಯಾದ ರೂಸ್ವೆಲ್ಟ್ ಮಾಲ್ ಬಳಿ ಸಂಜೆ 6 ಗಂಟೆಗೆ ನಂತರ ಅಪಘಾತ ಸಂಭವಿಸಿದೆ ಎಂದು ಹೇಳಿದೆ. ಅಪಘಾತದ ಸಮಯದಲ್ಲಿ ಇಬ್ಬರು ವಿಮಾನದಲ್ಲಿದ್ದರು ಎಂದು ಸಿಬಿಎಸ್ ನ್ಯೂಸ್ ಹೇಳಿದೆ.

ಘಟನೆಯ ವಿಡಿಯೋಗಳು ವೈರಲ್

ವಿಮಾನ ಅಪಘಾತಕ್ಕೀಡಾಗುತ್ತಿದ್ದಂತೆ ಕ್ಯಾಮೆರಾದಲ್ಲಿ ಸೆರೆಯಾದ ಭಾರಿ ಪ್ರಮಾಣದ ಬೆಳಕು ಕಂಡುಬಂದ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ಮತ್ತೊಂದು ವೀಡಿಯೊದಲ್ಲಿ ವಿಮಾನ ಅಪಘಾತದ ಸ್ಥಳದಲ್ಲಿ ದಟ್ಟವಾದ ಹೊಗೆ ಕಾಣಿಸಿಕೊಂಡಿತು ಮತ್ತು ಅನೇಕ ಕಾರುಗಳಿಗೆ ಬೆಂಕಿ ಹೊತ್ತಿಕೊಂಡಿದೆ.

ಟೇಕ್ ಆಫ್ ಆದ 30 ಸೆಕೆಂಡುಗಳ ನಂತರ ಪತನ

ಅಪಘಾತದ ನಂತರ ಆ ಪ್ರದೇಶದ ರಸ್ತೆಗಳನ್ನು ಮುಚ್ಚಲಾಗಿದೆ ಎಂದು ಫಿಲಡೆಲ್ಫಿಯಾದ ತುರ್ತು ನಿರ್ವಹಣಾ ಕಚೇರಿ ತಿಳಿಸಿದೆ. ಟೇಕ್ ಆಫ್ ಆದ ಸುಮಾರು 30 ಸೆಕೆಂಡುಗಳ ನಂತರ ವಿಮಾನ ಪತನಗೊಂಡಿದೆ ಎಂದು ದೃಢೀಕರಿಸದ ವರದಿಗಳು ತಿಳಿಸಿವೆ. ಫಿಲಡೆಲ್ಫಿಯಾ ಆಫೀಸ್ ಆಫ್ ಎಮರ್ಜೆನ್ಸಿ ಮ್ಯಾನೇಜ್‌ಮೆಂಟ್ ವರದಿಯಾದ ಅಪಘಾತದ ಪ್ರದೇಶದಲ್ಲಿ “ಪ್ರಮುಖ ಘಟನೆ” ನಡೆದಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ದೃಢಪಡಿಸಿದೆ, ಆದರೆ ಯಾವುದೇ ಇತರ ವಿವರಗಳನ್ನು ಒದಗಿಸಿಲ್ಲ.

Leave a Reply

Your email address will not be published. Required fields are marked *

Join WhatsApp Group
error: Content is protected !!