ಪುತ್ತೂರು :ಮುಸುಕುಧಾರಿಗಳಿಂದ ಕೆಡವಲ್ಪಟ್ಟ ರಾಜೇಶ್ ಬನ್ನೂರುಮನೆಯಲ್ಲಿ ಪೋಲೀಸ್ ಮಹಜರು ಸಂದರ್ಭದಲ್ಲಿ ಚಿನ್ನಾಭರಣ ಪತ್ತೆಯಾಗಿದೆ. ಪುತ್ತೂರಿನ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ಹೆಸರಿನಲ್ಲಿ ದೇವಸ್ಥಾನದ ಆವರಣದಲ್ಲಿರುವ ಮನೆಗಳ ತೆರವು ಕಾರ್ಯಾಚರಣೆ ನಡೆಯುತ್ತಿದೆ.

ಈ ನಡುವೆ ದೇವಸ್ಥಾನದ ಜಾಗದಲ್ಲಿ  ರಾಜೇಶ್ ಬನ್ನೂರು ಎಂಬವರ ಮನೆಯಲ್ಲಿ ಜ. 5 ರಂದು ತಡರಾತ್ರಿ ಮುಸುಕುಧಾರಿಗಳ ತಂಡ ನುಗ್ಗಿ ಜೆಸಿಬಿ ಮೂಲಕ ಮನೆಯನ್ನು ನೆಲಸಮ ಮಾಡಿತ್ತು. ಈ ಸಂಬಂಧ ಮನೆ ಯಜಮಾನ ರಾಜೇಶ್ ಬನ್ನೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಮತ್ತು ಇತರರ ವಿರುದ್ಧ ಪುತ್ತೂರು ನಗರ ಪೋಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಿಸಿದ್ದರು‌.

ಫೆ.6ರಂದು ಪುತ್ತೂರು ನಗರ ಪೊಲೀಸ್ ಠಾಣೆ ನಿರೀಕ್ಷಕ ಜಾನ್ಸನ್ ಡಿ’ಸೋಜ ಅವರ ನೇತೃತ್ವದಲ್ಲಿ ಸ್ಥಳ ಮಹಜರು ನಡೆದಿದ್ದು, ಈ ಸಂದರ್ಭ ಚಿನ್ನದ ಚೈನ್, ಚಿನ್ನದ ಓಲೆ ಮಣ್ಣಿನಡಿಯಿದ್ದ ಮಂಚದ ಮೇಲಿನ ಹಾಸಿಗೆಯ ಅಡಿಯಲ್ಲಿ ಪತ್ತೆಯಾಗಿದೆ. ಚಿಲ್ಲರೆ ನಗದು ಅವರ ಶೆಡ್ ನಲ್ಲಿದ್ದ ಪ್ಯಾಂಟ್ ಕಿಸೆಯಲ್ಲಿತ್ತು. ಉಳಿದಂತೆ ಫ್ರಿಡ್ಜ್. ಎರಡು ಗೋದ್ರೇಜ್ ಕಪಾಟುಗಳು ಹಾನಿಯಾಗಿರುವುದು ಕಂಡು ಬಂದಿದೆ. ಇನ್ನು ಕೆಲವು ದಾಖಲೆ ಪತ್ರಗಳು ಲಭ್ಯವಾಗಿದೆ. ಸ್ಥಳ ಮಹಜರು ಸಂದರ್ಭ ರಾಜೇಶ್ ಬನ್ನೂರು, ಅವರ ಪುತ್ರ ಮತ್ತು ಸಾಕ್ಷಿದಾರರು ಉಪಸ್ಥಿತರಿದ್ದರು.

ಪ್ರಕರಣದ ತನಿಖೆ ಆರಂಭಿಸಿದ ಪೋಲೀಸರು ಘಟನಾ ಸ್ಥಳದಲ್ಲಿ ಮಹಜರು ನಡೆಸುವ ಸಂದರ್ಭದಲ್ಲಿ ಮನೆ ಅವಶೇಷದಡಿ ಚಿನ್ನಾಭರಣ ಪತ್ತೆಯಾಗಿದೆ. ಘಟನೆ ನಡೆಸಿದ ಸಂದರ್ಭದಲ್ಲಿ ಮನೆಯಲ್ಲಿದ್ದ ಚಿನ್ನಾಭರಣ ಮತ್ತು ನಗದು ಹಣವಿದ್ದು, ಮನೆಯ ಜಗಲಿಯಲ್ಲಿದ್ದ ನಾಯಿ ಮರಿಗಳನ್ನೂ ಕೊಂದು‌ ಹಾಕಲಾಗಿದೆ ಎಂದು ಪೋಲೀಸ್ ದೂರಿನಲ್ಲಿ ರಾಜೇಶ್ ಬನ್ನೂರು ಉಲ್ಲೇಖಿಸಿದ್ದರು.

Leave a Reply

Your email address will not be published. Required fields are marked *

Join WhatsApp Group
error: Content is protected !!