ಪುತ್ತೂರು:ಸ್ಕರಿಯ ಎಂ.ಎ., ಫಾರೂಕ್ ಶೇಖ್ ಮುಕ್ವೆ ಹಾಗೂ ಪ್ರಶಾಂತ್ ರೈ ನೇತೃತ್ವದಲ್ಲಿ, ಬಾಂಧವ್ಯ ಫ್ರೆಂಡ್ಸ್ ಪುತ್ತೂರು ಹಾಗೂ ವಿವಿಧ ಇಲಾಖೆಗಳ ಸಹಭಾಗಿತ್ವದಲ್ಲಿ 8ನೇ ವರ್ಷದ ನಾಕೌಟ್ ಮಾದರಿಯ 16 ತಂಡಗಳ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ ನೆಹರೂನಗರ ವಿವೇಕಾನಂದ ಕಾಲೇಜು ಮೈದಾನದಲ್ಲಿ ನಡೆಯಿತು.

ಟ್ರೋಫಿಯ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಹೆಸರೇ ಸೂಚಿಸುವಂತೆ ಪ್ರೀತಿ – ಬಾಂಧವ್ಯ ಎಂದಿಗೂ ಉಳಿಯಬೇಕು ಎಂದು ಆಯೋಜಿಸಿರುವ ಕ್ರೀಡಾಕೂಟ ಇದು. ಖಂಡಿತವಾಗಿಯೂ ಬಹುಮಾನಕ್ಕಾಗಿ ನಡೆಸುತ್ತಿರುವ ಪಂದ್ಯ ಇದಲ್ಲ. ಅಮರ್, ಅಕ್ಬರ್, ಅಂತೋನಿ ರೀತಿಯೇ ಇರುವ ಸ್ಕರಿಯ ಎಂ.ಎ., ಫಾರೂಕ್ ಶೇಖ್ ಮುಕ್ವೆ ಹಾಗೂ ಪ್ರಶಾಂತ್ ರೈ ಅವರ ಆಶಯದಂತೆ ಕ್ರೀಡಾಕೂಟ ಯಶಸ್ವಿಯಾಗಿ ನಡೆಯಲಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಡಿವೈಎಸ್ಪಿ ಅರುಣ್ ನಾಗೇಗೌಡ ಅವರು ಪಂದ್ಯಾಟಕ್ಕೆ ಶುಭಹಾರೈಸಿದರು.

ಪೊಲೀಸ್ ನಿರೀಕ್ಷಕ ಜಾನ್ಸನ್ ಕಿರಣ್ ಡಿಸೋಜ, ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೃಷ್ಣ ಭಟ್, ಪೊಲೀಸ್ ಉಪನಿರೀಕ್ಷಕರಾದ ಸೇಸಮ್ಮ, ಸವಿತಾ, ಎಸಿಸಿಇ(ಐ) ಪುತ್ತೂರು ಸೆಂಟರ್ ಅಧ್ಯಕ್ಷ ಪ್ರಮೋದ್ ಕುಮಾರ್, ಉದ್ಯಮಿ ಸಹಜ್ ರೈ ಬಳಜ್ಜ, ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಉದ್ಯಮಿ ಶಿವರಾಮ ಆಳ್ವ ಮುಖ್ಯ ಅತಿಥಿಗಳಾಗಿದ್ದರು.

ಸಮಾರೋಪ:

ಸಂಜೆ ನಡೆದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿದ್ದ ಸುಳ್ಯ ವೃತ್ತ ನಿರೀಕ್ಷಕ ತಿಮ್ಮಪ್ಪ ನಾಯ್ಕ್ ಮಾತನಾಡಿ, ಕಳೆದ ಎಂಟು ವರ್ಷಗಳಿಂದ ಯಶಸ್ವಿಯಾಗಿ ಪಂದ್ಯವನ್ನು ಆಯೋಜಿಸುತ್ತಿದ್ದಾರೆ. ಮುಂದೆ ಇನ್ನಷ್ಟು ಹೆಚ್ಚು ತಂಡಗಳೊಂದಿಗೆ ಯಶಸ್ವಿಯಾಗಿ ಕ್ರೀಡಾಕೂಡ ಆಯೋಜಿಸುವಂತಾಗಲಿ. ಇಲ್ಲಿ ಆಟವಾಡಿದ ಕ್ರೀಡಾಳುಗಳು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಮಿಂಚುವಂತಾಗಲಿ ಎಂದರು.

ಪೊಲೀಸ್ ಉಪನಿರೀಕ್ಷಕ ಜಂಬೂರಾಜ್ ಮಹಾಜನ್ ಮಾತನಾಡಿ, ದೈನಂದಿನ ಕೆಲಸದ ಒತ್ತಡವನ್ನು ದೂರ ಮಾಡಲು ಇಂತಹ ಕ್ರೀಡೆ ಅಗತ್ಯ. ಇದನ್ನು ಈ ಮೂವರು ಕಳೆದ ಎಂಟು ವರ್ಷಗಳಿಂದ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಪ್ರಮೋದ್ ಮಾತನಾಡಿ, ಬಾಂಧವ್ಯ ಜೀವನಪೂರ್ತಿ ನಮ್ಮೊಂದಿಗಿರಲಿ. ಪ್ರಪಂಚಕ್ಕೆ ಸೌಹಾರ್ದತೆಯನ್ನು ಸಾರುವ ಕೆಲಸ ಮಾಡೋಣ. ಅಧಿಕಾರಿಗಳು ಸೌಹಾರ್ದತೆಯಿಂದ ಜೀವನ ನಡೆಸಿದಾಗ ತನ್ನಿಂದ ತಾನಾಗೇ ನಾಗರಿಕರು ಇದನ್ನು ಅನುಸರಿಸುತ್ತಾರೆ ಎಂದರು.

ಪೊಲೀಸ್ ಉಪನಿರೀಕ್ಷಕ ಆಂಜನೇಯ ರೆಡ್ಡಿ ಮಾತನಾಡಿ, ಬಾಂಧವ್ಯ ಟ್ರೋಫಿ ರಾಜ್ಯಕ್ಕೆ ಮಾದರಿ. ಈ ಪಂದ್ಯ ಆಯೋಜನೆ ಮಾಡಿರುವ ಮೂವರು ಕೂಡ ಸಾಮಾನ್ಯ ವ್ಯಕ್ತಿಗಳೇ. ಆದರೆ ಅವರು ಆಯೋಜನೆ ಮಾಡಿರುವ ಈ ಕ್ರೀಡಾಕೂಟ ವಿಶೇಷತೆಯಿಂದ ಕೂಡಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ. ಯು.ಪಿ. ಶಿವಾನಂದ್ ಮಾತನಾಡಿ, ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಎಲ್ಲರೂ ಜಯಶಾಲಿಗಳೇ ಆಗಿದ್ದಾರೆ. ಪುತ್ತೂರಿನ ಮಟ್ಟಿಗೆ ಬಾಂಧವ್ಯ ಟ್ರೋಫಿಯನ್ನು ಉತ್ತಮ ರೀತಿಯಲ್ಲಿ ಆಯೋಜನೆ ಮಾಡಲಾಗುತ್ತಿದೆ. ಎಲ್ಲರಿಗೂ ಅಭಿನಂದನೆ ಎಂದರು.

ಪೊಲೀಸ್ ಉಪನಿರೀಕ್ಷಕರಾದ ಅವಿನಾಶ್, ಉದಯ ರವಿ, ಕುಟ್ಟಿ ಎಂ.ಕೆ., ಪದ್ಮ ಸೋಲಾರ್ ಮಾಲಕ ಸೀತಾರಾಮ ರೈ, ದರ್ಬೆ ಪ್ರೇಮ ಬೇಕರಿ ಮಾಲಕರ ಪುತ್ರಿ ಅಮೃತಾ, ಉದ್ಯಮಿ ಸುರೇಶ್ ನಾಡಾಜೆ, ಮಂಗಳೂರು ಶ್ರೀ ಕಟೀಲ್ ಲಾಜಿಸ್ಟಿಕ್’ನ ಜನಾರ್ದನ ಪೂಜಾರಿ, ಪಿಡಬ್ಲ್ಯೂಡಿ ಕಾಂಟ್ರಾಕ್ಟರ್ ಜುನೈದ್ ಬಿ.ಜಿ., ಎಸ್.ಡಿ.ಎಂ. ಕನ್’ಸ್ಟ್ರಕ್ಷನ್’ನ ಸಂದೀಪ್ ಮುಖ್ಯ ಅತಿಥಿಗಳಾಗಿರುವರು.

ಇದೇ ಸಂದರ್ಭ ತಾಲೂಕು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಜಾಕ್ ಬಪ್ಪಳಿಗೆ, ಪುತ್ತೂರು ತಾಲೂಕು ಯುವ ಪ್ರಶಸ್ತಿ ಪುರಸ್ಕೃತ ಬಾಲಕೃಷ್ಣ ಪೊರ್ದಾಲ್, ರಾಷ್ಟ್ರೀಯ ಈಜುಪಟು ಪ್ರಾಧಿ ಕ್ಲೇರ್ ಪಿಂಟೊ, ಬೀರಮಲೆ ಪ್ರಜ್ಆ ಆಶ್ರಮದ ಅನ್ನಪ್ಪ ವಿ.ಎಂ. ಅವರನ್ನು ಸನ್ಮಾನಿಸಲಾಯಿತು.

ಒಟ್ಟು 10 ತಂಡಗಳು ಪಂದ್ಯದಲ್ಲಿ ಭಾಗವಹಿಸಿದ್ದು, ಇಂಜಿನಿಯರ್ಸ್ ಇಲೆವೆನ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು.
ಪಿಇಟಿ ಇಲೆವೆನ್ ರನ್ನರ್ ಅಪ್ ಟ್ರೋಫಿ ಪಡೆದುಕೊಂಡರು. ತೃತೀಯ ಸ್ಥಾನವನ್ನು ವರ್ತಕರ ಸಂಘ, ಚತುರ್ಥ ಸ್ಥಾನವನ್ನು ಕ್ಯಾಂಪ್ಕೋ ಇಲೆವೆನ್ ಪಡೆದುಕೊಂಡಿತು.
ಪ್ರಥಮ ಸ್ಥಾನ ಪಡೆದ ತಂಡಕ್ಕೆ 15025 ರೂ. ನಗದು ಹಾಗೂ ಬಾಂಧವ್ಯ ಟ್ರೋಫಿ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ 10025 ರೂ. ಹಾಗೂ ಬಾಂಧವ್ಯ ಟ್ರೋಫಿ, ತೃತೀಯ ಸ್ಥಾನ ತಂಡಕ್ಕೆ 8025 ರೂ. ಹಾಗೂ ಬಾಂಧವ್ಯ ಟ್ರೋಫಿ, ಚತುರ್ಥ ಸ್ಥಾನ ಪಡೆದ ತಂಡಕ್ಕೆ 6025 ರೂ. ಹಾಗೂ ಬಾಂಧವ್ಯ ಟ್ರೋಫಿ ನೀಡಿ ಗೌರವಿಸಲಾಯಿತು.

ಇದರೊಂದಿಗೆ ಬೆಸ್ಟ್ ಬೌಲರ್ ಪಿಇಟಿ ಇಲೆವೆನ್ ತಂಡದ ಲೊಕೇಶ್, ಸರಣಿ ಶ್ರೇಷ್ಠ ಇಂಜಿನಿಯರ್ ಇಲೆವೆನ್ ತಂಡದ ಲೋಕೇಶ್, ಅತ್ಯುತ್ತಮ ಬ್ಯಾಟ್ಸ್‌ಮನ್ ಅಕ್ಷಯ್, ಮ್ಯಾನ್ ಆಫ್ ದ ಮ್ಯಾಚ್ ಇಂಜಿನಿಯರ್ಸ್ ಇಲೆವೆನ್ ತಂಡದ ಮಿಥುನ್ ಪಡೆದುಕೊಂಡರು.

ಮಹಿಳಾ ತಂಡಗಳ ನಡುವಿನ ತ್ರೋಬಾಲ್ ಪಂದ್ಯಾಟದ ಬಹುಮಾನವಾಗಿ ಪ್ರಥಮ ಸ್ಥಾನ ಪಡೆದ ವಿವೇಕಾನಂದ ಕಾಲೇಜು ತಂಡಕ್ಕೆ 3025 ರೂ. ಹಾಗೂ ಬಾಂಧವ್ಯ ಟ್ರೋಫಿ, ದ್ವಿತೀಯ ಸ್ಥಾನ ಪಡೆದ ಪೊಲೀಸ್ ಇಲೆವೆನ್ ತಂಡಕ್ಕೆ 2025  ರೂ. ಹಾಗೂ ಬಾಂಧವ್ಯ ಟ್ರೋಫಿ ನೀಡಲಾಯಿತು.

Leave a Reply

Your email address will not be published. Required fields are marked *

Join WhatsApp Group
error: Content is protected !!