
ದು ಬೈ ರನ್ ಮಷಿನ್, ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (100*ರನ್, 111 ಎಸೆತ, 7 ಬೌಂಡರಿ) ಏಕದಿನ ಕ್ರಿಕೆಟ್‌ನಲ್ಲಿ ಸಿಡಿಸಿದ 51ನೇ ಶತಕ ಹಾಗೂ ಬೌಲರ್‌ಗಳ ಸಂಘಟಿತ ನಿರ್ವಹಣೆಯ ಬಲದಿಂದ ಭಾರತ ತಂಡ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಹಾಗೂ ಆತಿಥೇಯ ಪಾಕಿಸ್ತಾನ ಎದುರು 6 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ.
ಇದರೊಂದಿಗೆ ರೋಹಿತ್ ಶರ್ಮ ಪಡೆ ಟೂರ್ನಿಯಲ್ಲಿ ಸೆಮಿೈನಲ್ ಸ್ಥಾನ ಬಹುತೇಕ ಖಾತ್ರಿಪಡಿಸಿಕೊಂಡಿದೆ. 29 ವರ್ಷಗಳ ಬಳಿಕ ಐಸಿಸಿ ಟೂರ್ನಿ ಆತಿಥ್ಯ ಹಕ್ಕು ಪಡೆದುಕೊಂಡಿರುವ ಹಾಲಿ ಚಾಂಪಿಯನ್ ಪಾಕಿಸ್ತಾನ ಉಪಾಂತ್ಯದ ಆಸೆಯನ್ನು ಬಹುತೇಕ ಕೈಚೆಲ್ಲಿದೆ.
₹7 ಕೋಟಿ ಮೌಲ್ಯದ ವಾಚ್
ಭಾರತ ಹಾಗೂ ಪಾಕಿಸ್ತಾನ ನಡುವಿನ ಜಿದ್ದಾಜಿದ್ದಿನ ಸೆಣಸಾಟದ ನಡುವೆಯೂ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಧರಿಸಿದ್ದ ಕೈ ಗಡಿಯಾರ (ವಾಚ್) ಕ್ರೀಡಾಭಿಮಾನಿಗಳನ್ನು ಹುಬ್ಬೇರಿಸುವಂತೆ ಮಾಡಿದೆ. ಹೌದು! ಪಾಕ್ ವಿರುದ್ಧ ಬೌಲಿಂಗ್ ವೇಳೆ ಹಾರ್ದಿಕ್ ಧರಿಸಿದ್ದ ಕೇಸರಿ ಬಣ್ಣದ ಕೈ ಗಡಿಯಾರ ಬರೋಬ್ಬರಿ 7 ಕೋಟಿ ರೂಪಾಯಿ ಮೌಲ್ಯದ್ದಾಗಿದೆ. ರಿಚರ್ಡ್ ಮಿಲ್ಲೆ ಕಂಪನಿಯ ಅರ್‌ಎಂ 27-02 ಟೂರ್‌ಬಿಲ್ಲನ್ ರಾೆಲ್ ನಡಾಲ್ ಲಿಮಿಟೆಡ್ ಆವೃತ್ತಿಯ ವಾಚ್ ಇದಾಗಿದ್ದು, ಕೇವಲ 50 ವಾಚ್‌ಗಳನ್ನು ಮಾತ್ರ ತಯಾರಿಸಿ ಕಂಪನಿಯೂ ಮಾರಾಟ ನಡೆಸಿದೆ ಎನ್ನಲಾಗಿದೆ.
