
ಪುತ್ತೂರು; ರಾಜ್ಯ ರಾಜಕೀಯದಲ್ಲಿ ತನ್ನದೇ ಛಾಪು ಮೂಡಿಸುತ್ತಿರುವ ಪುತ್ತೂರಿನ ಶಾಸಕ ಅಶೋಕ್ ರೈ ಅವರು ನಾನು ಕೇವಲ ರಾಜಕೀಯ, ಧಾರ್ಮಿಕ ಕ್ಷೇತ್ರಕ್ಕೆ ಮಾತ್ರ ಮೀಸಲಲ್ಲ. ಕ್ರೀಡಾ ಕ್ಷೇತ್ರದಲ್ಲಿಯೂ ಸಮರ್ಥನಿದ್ದೇನೆ ಎಂಬುವುದನ್ನು ಸಾಬೀತು ಪಡಿಸಿದ್ದು, ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆದ ಬಂಟ ಜವನೆರೆ ಗೊಬ್ಬು ಕಾರ್ಯಕ್ರಮದಲ್ಲಿ.
ಬಿಡುವಿರದ ಕಾರ್ಯಕ್ರಮಗಳ ನಡುವೆಯೂ ಬಿಳಿ ಸಮವಸ್ತç ಧರಿಸಿ ಕ್ರಿಕೆಟ್ ಅಂಗಣದಲ್ಲಿ ಮಿಂಚಿದ ಶಾಸಕರು ರನ್ ಗಳಿಕೆಗಾಗಿ ಓಡಿದಾಗ ಜಾರಿ ಬಿದ್ದರೂ ಆಟದ ಹುಮ್ಮಸ್ಸು ಕಳೆದುಕೊಳ್ಳಲಿಲ್ಲ. ಬ್ಯಾಟಿಂಗ್ ಹಾಗೂ ಬೌಲಿಂಗ್, ಫೀಲ್ಡಿಂಗ್ ನಲ್ಲಿ ಸಖತ್ ಚಟುವಟಿಕೆಯನ್ನು ತೋರ್ಪಡಿಸಿದ ಶಾಸಕರು ತಾನು ಕ್ರಿಕೆಟ್ ಆಟಕ್ಕೂ ಸೈ ಎನಿಸಿಕೊಂಡರು.
ಬAಟರ ಸಂಘದ ಆಶ್ರಯದಲ್ಲಿ ನಡೆದ ಬಂಟ್ಸ್ ಪ್ರೀಮಿಯರ್ ಲೀಗ್ ಮ್ಯಾಚ್ ಶಾಸಕರ ಆಟದೊಂದಿಗೆ ಹೆಚ್ಚು ರೋಚಕತೆಯನ್ನು ಪಡೆದುಕೊಂಡಿತು. ಆಟಕ್ಕಾಗಿಯೇ ಸಜ್ಜಾಗಿ ಬಂದ ಅವರು ಕ್ರೀಸಿಗಿಳಿದು ಬ್ಯಾಟಿಂಗ್ ನಲ್ಲಿ ಬೌಲರ್ ಗಳ ದಾಳಿಯನ್ನು ಸಮರ್ಥವಾಗಿ ಎದುರಿಸಿದರು. ಅಷ್ಟೇ ಅಲ್ಲ ತನಗೆ ಬೌಲಿಂಗ್ ಕೂಡಾ ಇಷ್ಟ ಎಂಬAತೆ ಬೌಲಿಂಗ್ ನಲ್ಲಿಯೂ ತನ್ನ ಚಾಕಚಕ್ಯತೆಯನ್ನು ತೋರ್ಪಡಿಸಿದರು. ಫೀಲ್ಡಿಂಗ್ ನಲ್ಲಿ ಯುವಕರನ್ನೂ ನಾಚುವಂತೆ ಓಡಾಡಿದ ಅಶೋಕ್ ರೈ ಆಟದ ಗಮ್ಮತ್ತನ್ನು ಸವಿದರು. ಇದು ನೋಡುಗರಿಗೂ ಅತ್ಯಂತ ಖುಷಿ ಕೊಟ್ಟಿತು.
ಜಾರಿ ಬಿದ್ದ ಜಾಣ
ರನ್ ಗಳಿಕೆಗೆಗಾಗಿ ಓಡುತ್ತಿರುವಾಗ ರನ್ನೌಟ್ ಆಗುವುದನ್ನು ತಪ್ಪಿಸಲು ಪ್ರಯತ್ನ ಪಟ್ಟ ಶಾಸಕರು ಅಂಗಣದಲ್ಲಿ ಜಾರಿ ಬಿದ್ದರು. ಆಗ ತಕ್ಷಣ ಅವರ ನೆರವಿಗೆ ಬಂದ ಎದುರಾಳಿ ತಂಡದ ಫೀಲ್ಡರ್ ಗಳು ಶಾಸಕರಿಗೆ ಕೈಕೊಟ್ಟು ಎಬ್ಬಿಸಿದರು. ರನ್ನೌಟ್ ನಿಂದ ತಪ್ಪಿಸಿಕೊಂಡ ಬಳಿಕ ರಕ್ಷಣಾತ್ಮಕವಾಗಿ ಆಟ ಆಡುವ ಮೂಲಕ ಕ್ರಿಕೆಟ್ ಆಟದ ಖುಷಿಯನ್ನು ಹೆಚ್ಚಿಸಿದರು. ಅಶೋಕ್ ರೈ ಅವರ ಈ ಕ್ರಿಕೆಟ್ ಆಟದ ನಾನಾ ಭಂಗಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ
