ತಾಲ್ಲೂಕಿನ ಕಾವೇರಿ ಗ್ರಾಮದದಲ್ಲಿ ಪ್ರಸವದ ನಂತರದ ರಕ್ತಸ್ರಾವದಿಂದ ಬಾಣಂತಿಯೊಬ್ಬರು ಭಾನುವಾರ ಚಿಕಿತ್ಸೆ ಮೃತಪಟ್ಟಿದ್ದಾರೆ.

ಗ್ರಾಮದ ಮಂಜುಳಾ (25) ಮೃತಪಟ್ಟವರು. ಅವರು ಇಲ್ಲಿನ ಸರ್ಕಾರಿ ಜೆಸಿ ಆಸ್ಪತ್ರೆಯಲ್ಲಿ ಫೆ.10ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು.ಪ್ರಸವದ ನಂತರ ತೀವ್ರ ರಕ್ತಸ್ರಾವ ಕಂಡುಬಂದಿದ್ದರಿಂದ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.

‘ಚಿಕಿತ್ಸೆಯ ವೇಳೆ ವಿವಿಧ ಅಂಗಾಂಗ ವೈಫಲ್ಯ ಕಂಡುಬಂದಿತ್ತು. ಭಾನುವಾರ ಮೆದುಳು ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ’ ಎಂದು ವೈದ್ಯರು ತಿಳಿಸಿದ್ದಾರೆ.

11 ತಿಂಗಳ ಹಿಂದೆ ಅವರು ಆಶ್ರಿತ್ ಎಂಬುವವರನ್ನು ಮಂಜುಳಾ ಪ್ರೀತಿಸಿ ಮದುವೆಯಾಗಿದ್ದರು. ಫೆಬ್ರವರಿ 9ರಂದು ಹೆರಿಗೆಗಾಗಿ ತೀರ್ಥಹಳ್ಳಿಯ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು.

Leave a Reply

Your email address will not be published. Required fields are marked *

Join WhatsApp Group
error: Content is protected !!