ಪುತ್ತೂರು: ಕಳೆದ ೧೪ ವರ್ಷಗಳಿಂದ ಖಾತಾ ಪಡೆಯಲು ಪರದಾಡುತ್ತಿದ್ದ ಪುತ್ತೂರು ನಗರಸಭಾ ವ್ಯಾಪ್ತಿಯ ಮಂದಿ ಸರ್ಕಾರ ಸಿಹಿ ಸುದ್ದಿ ನೀಡಿದೆ. ನಗರದಲ್ಲಿ ಕಟ್ ಕನ್ವರ್ಶನ್ ಮತ್ತು ಅನಿಧಿಕೃತವಾಗಿ ನಿರ್ಮಿಸಿದ ಕಟ್ಟಡಗಳಿಗೆ ಬಿ ಖಾತಾ ನೀಡಲು ಸರ್ಕಾರ ಅಧಿಸೂಚನೆ ನೀಡಿದೆ. ಈ ಮೂಲಕ ಪುತ್ತೂರಿನ ೧೨೦೦ ಮಂದಿ ಅಲೆದಾಟಕ್ಕೆ ಕೊನೆಯಾಗಲಿದ್ದು, ಅವರು ಸಮಾಧಾನದ ನಿಟ್ಟುಸಿರು ಬಿಡುವಂತೆ ಮಾಡಿದೆ. ಈ ನಿಟ್ಟಿನಲ್ಲಿ ಹೋರಾಟ ನಡೆಸಿದ ಶಾಸಕ ಅಶೋಕ್ ರೈ ಅವರ ಪ್ರಯತ್ನಕ್ಕೆ ಇದೀಗ ಮಾನ್ಯತೆ ದೊರಕಿದೆ.
೨೦೧೪ ರಿಂದ ಕಟ್‌ಕನ್ವರ್ಶನ್ ಮಾಡಿಸಿದವರಿಗೆ ಮತ್ತು ತನ್ನ ಸ್ವಂತ ಜಮೀನಿನಲ್ಲಿ ಪರವಾನಿಗೆ ಇಲ್ಲದೆ ಮನೆ ನಿರ್ಮಾಣ ಮಾಡಿದವರಿಗೆ ಖಾತಾ ಮಾಡಲು ಅವಕಾಶ ಇರಲಿಲ್ಲ. ಖಾತಾ ನೀಡುವಂತೆ ಹಲವು ಬಾರಿ ಸರ್ಕಾರದ ಮುಂದೆ ಪ್ರಸ್ತಾಪ ಮಾಡಲಾಗಿತ್ತು. ಇದು ಪುತ್ತೂರು ನಗರ ಸೇರಿದಂತೆ ರಾಜ್ಯಾದ್ಯಂತ ಇದೇ ವಿಚಾರಕ್ಕೆ ಸಂಬAದಿಸಿದAತೆ ಹೋರಾಟಗಳು ನಡೆಯುತ್ತಿತ್ತು.
ಏನಿದು ಅನಧಿಕೃತ ಕಟ್ಟಡಗಳು:
ನಗರಸಭಾ ವ್ಯಾಪ್ತಿಯಲ್ಲಿ ತನ್ನ ಸ್ವಂತ ಜಮೀನಿನಲ್ಲಿ ಮನೆ ಅಥವಾ ಕಟ್ಟಡ ನಿರ್ಮಾಣ ಮಾಡಿಕೊಂಡವರು, ಕಟ್ಟಡ ಅಥವಾ ಮನೆ ನಿರ್ಮಾಣದ ವೇಳೆ ನಗರಸಭೆಯಿಂದ ಪರವಾನಿಗೆ ಪಡೆಯದೆ ಕಟ್ಟಡ ನಿರ್ಮಾಣ ಮಾಡಿಕೊಡಿದ್ದರು. ನಗರಸಭಾ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣ ಮಾಡುವಲ್ಲಿ ಪಾಲಿಸಬೇಕಾದ ನಿಯಮಗಳನ್ನು ಪಾಲಿಸದೇ ಇದ್ದು ಅಂಥಹ ಮನೆಗಳು ಅನಧಿಕೃತ ಮನೆಗಳ ಪಟ್ಟಿಗೆ ಸೇರ್ಪಡೆಯಾಗಿತ್ತು. ಕಾನೂನು ಉಲ್ಲಂಘಿಸಿ ತನ್ನ ಸ್ವಂತ ಜಾಗದಲ್ಲಿ ಕಟ್ಟಡ ನಿರ್ಮಾಣ ಮಾಡಿದರೂ ಅದನ್ನು ತೆರವು ಮಾಡುವ ಅಧಿಕಾರ ನಗರಸಭೆಗೆ ಇದೆ. ಈಗಾಗಲೇ ಅನಧಿಕೃತ ಮನೆಗಳ ತೆರವಿಗೆ ನೊಟೀಸ್ ಕೂಡಾ ಜಾರಿಯಾಗಿತ್ತು. ಇಂತಹ ಮನೆಗಳಿಗೆ ಇನ್ನು ಬಿ ಖಾತಾ ಮಾಡಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ.  ಅನಧಿಕೃತ ಮನೆ ನಿರ್ಮಾಣ ಅಥವಾ ಕಟ್ಟಡ ನಿರ್ಮಾಣ ಮಾಡಿದವರು ದುಪ್ಪಟ್ಟು ತೆರಿಗೆ ಪಾವತಿಸಿ ಬಿ ಖಾತಾ ಮಾಡಿಸಿಕೊಳ್ಳಬಹುದಾದರೂ ಪರವಾನಿಗೆಯೇ ಮಾಡಿಸಿಕೊಳ್ಳಲು ಅಶಕ್ತರಾಗಿದ್ದ ಬಡ ಕುಟುಂಬಗಳಿಗೆ ಇದು ಸಂಕಷ್ಟವನ್ನು ತಂದೊಡ್ಡಿತ್ತು.
ಕಟ್ ಕನ್ವರ್ಶನ್ :
ಕಟ್ ಕನ್ವರ್ಶನ್ ಮಾಡಿಸಿಕೊಂಡವರಿಗೂ ಖಾತೆ ನೀಡಲು ಕಾನೂನಿನಲ್ಲಿ ಅವಕಾಶ ಇರಲಿಲ್ಲ. ಉದಾ: ಎರಡು ಎಕ್ರೆ ಜಾಗವಿದ್ದಲ್ಲಿ ಅದರಲ್ಲಿ ೧೦ ಸೆಂಟ್ಸ್ ಮಾತ್ರ ಕನ್ವರ್ಶನ್ ಮಾಡಿಸಿಕೊಂಡು ಅದಕ್ಕೆ ಖಾತಾ ಮಾಡಲು ಅರ್ಜಿ ಸಲ್ಲಿಸಿದವರಿಗೆ ಖಾತಾ ನೀಡುತ್ತಿರಲಿಲ್ಲ. ಖಾತಾ ನೀಡಬೇಕಾದಲ್ಲಿ ೨ ಎಕ್ರೆ ಜಾಗವನ್ನೂ ಕನ್ವರ್ಶನ್ ಮಾಡಿಸಬೇಕಾದ ಅನಿವಾರ್ಯತೆ ಇತ್ತು. ಈ ಪ್ರಕರಣವೂ ೨೦೧೪ ರಿಂದ ಪೆಂಡಿAಗ್ ಇತ್ತು. ಕಟ್ ಕನ್ವರ್ಶನ್ ಮಾಡಿಸಿಕೊಂಡವರಿಗೂ ಈ ಕಾನೂನಿನಡಿ ಬಿ ಖಾತಾ ಪಡೆಯಲು ಅವಕಾಶ ದೊರೆತಂತಾಗಿದೆ.
ಅರ್ಜಿ ಸಲ್ಲಿಸಲು ಅವಕಾಶ
೨೦೨೪ ಸೆಪ್ಟಂಬರ್ ತಿಂಗಳಿಗಿAತ ಮೊದಲು ಕಟ್‌ಕನ್ವರ್ಶನ್ ಮಾಡಿಸಿಕೊಂಡವರು ಮತ್ತು ಅನಧಿಕೃತ ಮನೆ ಅಥವಾ ಕಟ್ಟಡ ನಿರ್ಮಾಣ ಮಾಡಿಕೊಂಡವರು ಬಿ ಖಾತೆಗೆ ನಗರಸಭೆಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಮೇ. ೨೦೨೫ ಅರ್ಜಿ ಸಲ್ಲಿಸಲು ಕೊನೇ ದಿನವಾಗಿರುತ್ತದೆ.

ನಾನು ಶಾಸಕನಾದ ಪ್ರಾರಂಭದಲ್ಲೇ ಹಲವಾರು ಮಂದಿ ನನ್ನ ಕಚೇರಿಗೆ ಬಂದು ಖಾತೆಯ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದರು. ಇದರ ಬಗ್ಗೆ ನಾನು ಅಧಿವೇಶನದಲ್ಲೂ ಸರ್ಕಾರದ ಗಮನಕ್ಕೆ ತಂದಿದ್ದೆ. ಅನೇಕ ಬಡವರು ತಮ್ಮ ಸ್ವಂತ ಜಾಗದಲ್ಲಿ ನಗರಸಭೆಯ ಪರವಾನಿಗೆ ಇಲ್ಲದೆ ಮನೆ ಮಾಡಿಕೊಂಡಿದ್ದು ಅವರಿಗೆ ಬಿ ಖಾತೆ ನೀಡುವಂತೆ ವಿನಂತಿಸಿದ್ದೆ. ಇದೀಗ ಸರ್ಕಾರ ನನ್ನ ಮನವಿಗೆ ಮಾನ್ಯತೆಯನ್ನು ನೀಡಿ ಪುತ್ತೂರಿಗೆ ಮಾತ್ರವಲ್ಲ ಇಡೀ ರಾಜ್ಯಕ್ಕೆ ಅನ್ವಯವಾಗುವಂತೆ ಬಿ ಖಾತಾ ನೀಡಲು ಆದೇಶ ಮಾಡಿದೆ, ಇದು ನನಗೆ ಅತ್ಯಂತ ಖುಷಿ ತಂದಿದೆ- ಅಶೋಕ್ ರೈ ಶಾಸಕರು ಪುತ್ತೂರು

Leave a Reply

Your email address will not be published. Required fields are marked *

Join WhatsApp Group
error: Content is protected !!