
ಪ್ರತಿಷ್ಠಿತ ಭೀಮಾ ಜ್ಯುವೆಲ್ಲರ್ಸ್ ಮಾಲೀಕರ ಪುತ್ರ ವಿಷ್ಣು ಭಟ್ ರನ್ನ ಬೆಂಗಳೂರಿನ ಹೆಚ್ ಎಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಹೋಟೆಲ್ ಸಿಬ್ಬಂದಿಯ ಮೇಲೆ ವಿಷ್ಣು ಭಟ್ ಹಲ್ಲೆ ಮಾಡಿದ್ದಾರೆ ಯರ್ಮ್ಬ ಆರೋಪದಲ್ಲಿ ಅರೆಸ್ಟ್ ಮಾಡಲಾಗಿದೆ
ವಿಷ್ಣು ಭಟ್ ಫೆಬ್ರವರಿ 7ರಂದು ಹೋಟೆಲ್ ಒಂದರ ಬಳಿ ಗಲಾಟೆ ಮಾಡಿದ್ದರು ಎನ್ನಲಾಗಿದೆ.ಆ ನಂತರ ಫೆಬ್ರವರಿ 26ರ ಹೋಟೆಲ್ ಗೆ ಬಂದು ಮತ್ತೆ ವಿನಾಕಾರಣ ಜಗಳ ಮಾಡಿದ್ದರಂತೆ. ಈ ವೇಳೆ ಕಬ್ಬಿಣದ ವಸ್ತುವಿನಿಂದ ಹೋಟೆಲ್ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿದ್ದರು.
ಈ ಘಟನೆ ನಂತರ ವಿಷ್ಣು ಭಟ್ ವಿರುದ್ಧ ಸಂಬಂಧ ಹೋಟೆಲ್ ಸಿಬ್ಬಂದಿ ಹೆಚ್ ಎಸ್ ಆರ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.ಈ ದೂರಿನ ಆಧಾರದ ಭೀಮಾ ಜ್ಯೂವೆಲ್ಲರ್ಸ್ ಮಾಲೀಕರ ಪುತ್ರ ವಿಷ್ಣು ಭಟ್ ರನ್ನು ಪೊಲೀಸರು ಬಂಧಿಸಿದ್ದಾರೆ.
