ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಘಟನೆ ಆಂಧ್ರಪ್ರದೇಶದ ಕೊನವಾನಿಪಲೆಂ ಗ್ರಾಮದಲ್ಲಿ ನಡೆದಿದೆ.

ವಿದ್ಯಾರ್ಥಿನಿಯನ್ನು ಜಯಪ್ರಿಯ (17) ಎಂದು ಗುರುತಿಸಲಾಗಿದೆ. ಈಕೆ ಟುನಿ ಚೈತನ್ಯ ಕಾಲೇಜಿನ ವಿದ್ಯಾರ್ಥಿನಿ.

ಬುಧವಾರ ಇಂಗ್ಲಿಷ್ ಪರೀಕ್ಷೆ ಬರೆದು ಬಂದಿದ್ದಳು. ಬಳಿಕ ಆಕೆ ಯಾರೊಂದಿಗೂ ಹೆಚ್ಚು ಮಾತನಾಡುತ್ತಿರಲಿಲ್ಲ. ಇತ್ತ ಆಕೆಯ ಪೋಷಕರು ಗುರುವಾರ ಮಧ್ಯಾಹ್ನ ಕಾರ್ಯಕ್ರಮವೊಂದಕ್ಕೆ ತೆರಳಿದರು. ಇದೇ ಸಮಯ ಉಪಯೋಗಿಸಿಕೊಂಡ ಜನಪ್ರಿಯ, ಡೆತ್ನೋಟ್ ಪತ್ರ ಬರೆದಿಟ್ಟು ನೇಣು ಬಿಗಿದುಕೊಂಡಿದ್ದಾಳೆ. ಮಗಳ ಸಾವು ಕುಟುಂಬ ಸದಸ್ಯರನ್ನು ದುಃಖದ ಸಾಗರದಲ್ಲಿ ಮುಳುಗಿಸಿದೆ.

ಡೆತ್ ನೋಟ್ ನಲ್ಲಿ ಏನಿದೆ?: ಅಮ್ಮ, ಅಪ್ಪ, ದಯವಿಟ್ಟು ನನ್ನನ್ನು ಕ್ಷಮಿಸಿ, ನನ್ನ ಸಾವಿಗೆ ನನ್ನ ಆರೋಗ್ಯವೇ ಕಾರಣ. ನನಗೆ ಈ ನೋವನ್ನು ಸಹಿಸಲಾಗುತ್ತಿಲ್ಲ. ನಾನು ಯಾವುದರ ಮೇಲೂ ಗಮನಹರಿಸಲು ಸಾಧ್ಯವಾಗದ ಕಾರಣ ತುಂಬಾ ದುಃಖಿತನಾಗಿದ್ದೆ. ನನ್ನೊಳಗೆ ನಾನು ತುಂಬಾ ನೋವು ಅನುಭವಿಸಿದ್ದೇನೆ. ನನ್ನ ಆಸೆಯನ್ನು ಪೂರೈಸಲು ಸಾಧ್ಯವಿಲ್ಲ ಎಂದು ಭಾವಿಸಿದೆ. ಕ್ಷಮಿಸಿ, ಅಮ್ಮ ನಾನು ಸತ್ತ ಕಾರಣವನ್ನು ಯಾರಿಗೂ ಹೇಳಬೇಡ.

ನಾನು ಬದುಕಿರುವುದರಲ್ಲಿ ಅರ್ಥವಿಲ್ಲ. ಸಹೋದರ ಚರಣ್ ಪುಟ್ಟ ಚೆನ್ನಾಗಿರು. ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ. ಅಮ್ಮನನ್ನು ಚೆನ್ನಾಗಿ ನೋಡಿಕೊ. ಅಪ್ಪನನ್ನು ನೋಯಿಸಬೇಡ. ಅಪ್ಪ ಹೇಳುವುದನ್ನು ಕೇಳು. ನಾನು ಸಾಯುತ್ತಿದ್ದೇನೆ ಎಂದು ನನಗೆ ತುಂಬಾ ದುಃಖವಾಗಿದೆ. ನಿಮ್ಮನ್ನು ಪ್ರೀತಿಸುತ್ತೇನೆ ಅಮ್ಮ, ಅಪ್ಪ ಮತ್ತು ನನ್ನ ಸಹೋದರನಿಗೆ ವಿದಾಯ.

Leave a Reply

Your email address will not be published. Required fields are marked *

Join WhatsApp Group
error: Content is protected !!