
ಇಲ್ಲಿನ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ಫೈನಲ್ ಪಂದ್ಯದಲ್ಲಿ ಕಿವೀಸ್ ವಿರುದ್ಧ ಟೀಮ್ ಇಂಡಿಯಾ 4 ವಿಕೆಟ್‌ಗಳ ಗೆಲುವು ಕಂಡು ಚಾಂಪಿಯನ್ ಆಗಿ ಹೊರಹೊಮ್ಮಿದೆ.
50 ಒವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 251 ರನ್ ಕಲೆಹಾಕಿರುವ ನ್ಯೂಜಿಲೆಂಡ್ ಭಾರತಕ್ಕೆ 252 ರನ್‌ಗಳ ಗುರಿಯನ್ನು ನೀಡಿತ್ತು.
ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದ ಭಾರತ 49 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 254ರನ್ ಬಾರಿಸಿತು.
ನ್ಯೂಜಿಲೆಂಡ್ ಇನ್ನಿಂಗ್ಸ್: ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ವಿಲ್ ಯಂಗ್ 15 ರನ್ ಗಳಿಸಿದರೆ, ರಚಿನ್ ರವೀಂದ್ರ 37 ರನ್ ಗಳಿಸಿದರು. ವಿಲಿಯಮ್ಸನ್ 11 ರನ್, ಜವಾಬ್ದಾರಿಯುತ ಆಟವನ್ನಾಡಿದ ಡೇರಿಲ್ ಮಿಚೆಲ್ 63 ರನ್ ಗಳಿಸಿದರು. ಟಾಮ್ ಲೇಥಮ್ 14 ರನ್ ಬಾರಿಸಿದರೆ, ಗ್ಲೆನ್ ಫಿಲಿಪ್ಸ್ 34 ರನ್, ಮಿಚೆಲ್ ಸ್ನಾಂಟ್ನರ್ 8 ರನ್ ಕಲೆಹಾಕಿದರು. ಅಂತಿಮ ಹಂತದಲ್ಲಿ ತಂಡದ ಕೈ ಹಿಡಿದ ಮಿಚೆಲ್ ಬ್ರೇಸ್‌ವೆಲ್ 40 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಅಜೇಯ 53 ರನ್ ಚಚ್ಚಿದರು. ಯಾವುದೇ ರನ್ ಗಳಿಸಿದ ನೇಥನ್ ಸ್ಮಿತ್ ಅಜೇಯರಾಗಿ ಉಳಿದರು.
ಭಾರತದ ಪರ ವರುಣ್ ಚಕ್ರವರ್ತಿ ಹಾಗೂ ಕುಲ್‌ದೀಪ್ ಯಾದವ್ ತಲಾ ಎರಡೆರಡು ವಿಕೆಟ್ ಪಡೆದರೆ, ರವೀಂದ್ರ ಜಡೇಜಾ ಹಾಗೂ ಮೊಹಮ್ಮದ್ ಶಮಿ ತಲಾ ಒಂದೊಂದು ವಿಕೆಟ್ ಪಡೆದರು.
ಭಾರತದ ಇನ್ನಿಂಗ್ಸ್: ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಗಿಲ್ 31 ರನ್ ಬಾರಿಸಿದರೆ, ರೋಹಿತ್ ಶರ್ಮಾ 76 ರನ್ ಬಾರಿಸಿದರು. ಗಿಲ್ ಔಟ್ ಆದ ಬಳಿಕ ಕಣಕ್ಕಿಳಿದ ಕೊಹ್ಲಿ ಕೇವಲ ಒಂದು ರನ್‌ಗೆ ಪೆವಿಲಿಯನ್ ಸೇರಿಕೊಂಡರು. ಹೀಗೆ ಒಂದೆಡೆ ಗಿಲ್ ಹಾಗೂ ಕೊಹ್ಲಿ ಬ್ಯಾಕ್ ಟು ಬ್ಯಾಕ್ ಔಟ್ ಆಗುತ್ತಿದ್ದಂತೆ ಜತೆಯಾದ ರೋಹಿತ್ ಶರ್ಮಾ ಹಾಗೂ 61 ರನ್‌ಗಳ ಜತೆಯಾಟವನ್ನಾಡಿದರು. ಬಳಿಕ ರೋಹಿತ್ ಶರ್ಮಾತೆರಳಿದರೂ ಶ್ರೇಯಸ್ ಐಯ್ಯರ್ ಜೊತೆ ಸೇರಿ ಉತ್ತಮ ಆಟವನ್ನಾಡಿದರು. ಅಕ್ಷರ್ ಪಟೇಲ್ ಹಾಗೂ ಐಯ್ಯರ್ ನಿರ್ಗಮಿಸಿದ ಬಳಿಕ ಹಾರ್ದಿಕ್ ಪಾಂಡ್ಯ ಹಾಗೂ ಕೆಎಲ್ ರಾಹುಲ್ ಆಸರೆಯಾದರು. ಹೀಗೆ ಪ್ರತಿಯೊಬ್ಬ ಆಟಗಾರನೂ ಸಹ ಗೆಲುವಿಗೆ ಕೊಡುಗೆ ನೀಡಿದ್ದು ಅಂತಿಮ ಹಂತದಲ್ಲಿ ಕೆಎಲ್ ರಾಹುಲ್ ಹಾಗೂ ಜಡೇಜಾ ತಂಡವನ್ನು ಗೆಲುವಿನ ದಡ ಸೇರಿಸಿದರು.
ತಂಡದ ಪರ ಕೊಹ್ಲಿ 1, ಶ್ರೇಯಸ್ ಐಯ್ಯರ್ 48, ಅಕ್ಷರ್ ಪಟೇಲ್ 29, ಹಾರ್ದಿಕ್ ಪಾಂಡ್ಯ 18, ರವೀಂದ್ರ ಜಡೇಜಾ ಅಜೇಯ 9 ರನ್ ಕೆಎಲ್ ರಾಹುಲ್ ಅಜೇಯ 34 ರನ್ ಕಲೆಹಾಕಿದರು.
ನ್ಯೂಜಿಲೆಂಡ್ ಪರ ಮಿಚೆಲ್ ಸ್ಯಾಂಟ್ನರ್ ಹಾಗೂ ಬ್ರೇಸ್‌ವೆಲ್ ತಲಾ ಎರಡು ವಿಕೆಟ್ ಪಡೆದರೆ, ರಚಿನ್ ರವೀಂದ್ರ ಹಾಗೂ ಕೈಲ್ ಜೆಮಿಸನ್ ತಲಾ ಒಂದೊಂದು ವಿಕೆಟ್ ಪಡೆದರು.
