
ನಿಗೂಢ ನಾಪತ್ತೆಯಾಗಿದ್ದ ವಿದ್ಯಾರ್ಥಿ ದಿಗಂತ್ ಪತ್ತೆ ವಿಚಾರವಾಗಿ ಮಂಗಳೂರಿನಲ್ಲಿ ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಸುದ್ದಿಗೋಷ್ಟಿ ನಡೆಸಿದ್ದಾರೆ.
ದಿಗಂತ್ ನಾಪತ್ತೆ ಕೇಸ್ ನಲ್ಲಿ ಹಲವು ಆಯಾಮಗಳಲ್ಲಿ ನಾವು ತನಿಖೆ ನಡೆಸ್ತಿದ್ದೆವು. ಆದರೆ ನಿನ್ನೆ ಅವನು ಉಡುಪಿಯಲ್ಲಿ ನಮಗೆ ಪತ್ತೆಯಾಗಿದ್ದೇನೆ.
ಅವನನ್ನು ಕರೆದುಕೊಂಡು ಬಂದು ವಿಚಾರಣೆ ನಡೆಸಿದಾಗ ಪರೀಕ್ಷೆ ಭಯ ಇರೋದು ಗೊತ್ತಾಗಿದೆ ಎಂದರು.
ಅವನು ಪರೀಕ್ಷೆ ಕಾರಣಕ್ಕೆ ಮನೆ ಬಿಟ್ಟು ಹೋಗಿದ್ದಾಗಿ ಹೇಳಿಕೆ ಕೊಟ್ಟಿದ್ದಾನೆ. ಅವನು ಮನೆಯಿಂದ ರೈಲ್ವೇ ಟ್ರಾಕ್ ಬಂದು ಬೈಕ್ ಹಿಡಿದು ಮಂಗಳೂರಿಗೆ ಬಂದಿದ್ದಾನೆ. ಅಲ್ಲಿಂದ ಶಿವಮೊಗ್ಗ ಹೋಗಿ ಅಲ್ಲಿಂದ ಮೈಸೂರು ಹೋಗಿದ್ದಾನೆ. ಬಳಿಕ ಕೆಂಗೇರಿ ಹೋಗಿ ರೆಸಾರ್ಟ್ ನಲ್ಲಿ ಕೆಲಸ ಮಾಡಿದ್ದಾನೆ. ಬಳಿಕ ಬೆಂಗಳೂರು ತಿರುಗಿ ಮತ್ತೆ ಮೈಸೂರು ಬಂದು ರೈಲಿನಲ್ಲಿ ಉಡುಪಿಗೆ ಬಂದಿದ್ದಾನೆ ಎಂದರು.
ಉಡುಪಿಯಲ್ಲಿ ಬಟ್ಟೆ ತೆಗೆದುಕೊಳ್ಳಲು ಡಿ ಮಾರ್ಟ್ ಗೆ ಹೋಗಿ ಅಲ್ಲಿ ಸಿಕ್ಕಾಕಿಕೊಂಡಿದ್ದಾನೆ. ಅಲ್ಲಿ ದುಡ್ಡು ಕೊಡದೇ ಎಸ್ಕೇಪ್ ಆಗುವ ವೇಳೆ ತಗಲಾಕಿಕೊಂಡಿದ್ದಾನೆ. ಹೋಗುವಾದ 500 ರೂ ತೆಗೆದುಕೊಂಡು ಹೋಗಿದ್ದಾನೆ. ಆ ಬಳಿಕ ಕೆಲವು ಕಡೆ ಟಿಕೆಟ್ ಕೊಡದೇ ಪ್ರಯಾಣ ಮಾಡಿದ್ದಾನೆ. ಅವನ ಪಾದದಲ್ಲಿ ಗಾಯ ಆಗಿದ್ದು, ಅದೇ ರಕ್ತ ಚಪ್ಪಲಿಯಲ್ಲಿ ಅಂಟಿಕೊಂಡಿದೆ ಅಂತ ಅವನೇ ಹೇಳಿದ್ದಾನೆ. ಅವನನ್ನ ಯಾರೂ ಎತ್ತಿಕೊಂಡು ಹೋಗಿರಲಿಲ್ಲ, ಅವನೇ ಹೋಗಿದ್ದನು.
ಅವನ ಇಡೀ ಪ್ರಮಾಣದಲ್ಲಿ ಅವನು ಯಾರನ್ನೂ ಸಂಪರ್ಕ ಮಾಡಿಲ್ಲ. ಕಲಿಯೋದ್ರಲ್ಲಿ ಅವನು ಹುಷಾರಿದ್ದ, ಕೆಲ ದಿನಗಳಿಂದ ಸ್ವಲ್ಪ ಡಲ್ ಇದ್ದ. ಸದ್ಯ ಹೈಕೋರ್ಟ್ ಹೆಬಿಯಸ್ ಕಾರ್ಪಸ್ ದಾಖಲಾಗಿರೋ ಕಾರಣ ಹೈಕೋರ್ಟ್ ಹಾಜರು ಪಡಿಸ್ತೇವೆ. ಸದ್ಯ ಅವನು ಬೊಂದೇಲ್ ನ ಬಾಲ ಮಂದಿರದಲ್ಲಿ ಇದಾನೆ ಎಂದರು.
