
ರೈಲ್ವೆ ಪ್ಲಾಟ್‌ಫಾರ್ಮ್‌ಗಳಲ್ಲಿ ಜನದಟ್ಟಣೆ ನಿಯಂತ್ರಿಸಲು ಬೆಂಗಳೂರು ಸೇರಿ ಜನನಿಬಿಡ 60 ನಿಲ್ದಾಣಗಳಲ್ಲಿ ದೃಢೀಕೃತ ಟಿಕೆಟ್ ಹೊಂದಿರುವ ಪ್ರಯಾಣಿಕರಿಗೆ ಮಾತ್ರ ಪ್ಲಾಟ್‌ಫಾರ್ಮ್‌ಗಳಿಗೆ ಪ್ರವೇಶಿಸಲು ಅವಕಾಶ ನೀಡಲು ಭಾರತೀಯ ರೈಲ್ವೆ ನಿರ್ಧರಿಸಿದೆ.
ಶುಕ್ರವಾರ ಇಲ್ಲಿ ರೈಲ್ವೆ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಭಾರಿ ಜನದಟ್ಟಣೆ ಇರುವ ದೇಶದ ಪ್ರಮುಖ ನಿಲ್ದಾಣಗಳಲ್ಲಿ ಜನಸಂದಣಿ ನಿಯಂತ್ರಣ ಕ್ರಮಗಳನ್ನು ಜಾರಿಗೆ ತರಲಾಗುವುದು ಎಂದು ಘೋಷಿಸಿದರು.
ನವದೆಹಲಿ, ಆನಂದ್ ವಿಹಾರ್, ವಾರಾಣಸಿ, ಅಯೋಧ್ಯೆ ಮತ್ತು ಪಟ್ನಾ ನಿಲ್ದಾಣಗಳಲ್ಲಿ ಪ್ರವೇಶ ನಿಯಂತ್ರಣದ ಪ್ರಾಯೋಗಿಕ ಯೋಜನೆಗಳು ಪ್ರಾರಂಭವಾಗಿವೆ. 60 ನಿಲ್ದಾಣಗಳಲ್ಲಿ ಸಂಪೂರ್ಣ ಪ್ರವೇಶ ನಿಯಂತ್ರಣವನ್ನು ಪ್ರಾರಂಭಿಸಲಾಗುವುದು. ದೃಢೀಕೃತ ಟಿಕೆಟ್ ಹೊಂದಿರುವ ಪ್ರಯಾಣಿಕರಿಗೆ ಪ್ಲಾಟ್‌ಫಾರ್ಮ್‌ಗಳಿಗೆ ನೇರ ಪ್ರವೇಶ ನೀಡಲಾಗುವುದು. ಟಿಕೆಟ್ ಇಲ್ಲದವರು ಅಥವಾ ಕಾಯುವ ಪಟ್ಟಿ ಟಿಕೆಟ್ ಹೊಂದಿರುವವರು ಹೊರಗಿನ ಕಾಯುವ ಪ್ರದೇಶದಲ್ಲಿ ಕಾಯಬೇಕು. ನಿಲ್ದಾಣಗಳಲ್ಲಿನ ಎಲ್ಲ ಅನಧಿಕೃತ ಪ್ರವೇಶ ದ್ವಾರಗಳನ್ನು ಮುಚ್ಚಲಾಗುತ್ತದೆ ಎಂದು ತಿಳಿಸಿದ್ದಾರೆ.
