ಎಲೋನ್ ಮಸ್ಕ್ ಅವರ ಸ್ಪೇಸ್‌ಎಕ್ಸ್ ಗುರುವಾರ ಸ್ಟಾರ್‌ಶಿಪ್‌ನ ರಾಕೆಟ್‌ ಅನ್ನು ಉಡಾವಣೆಗೊಳಿಸಿದ್ದು, ಆದರೆ ಇದಾದ ಕೆಲವೇ ನಿಮಿಷಗಳಲ್ಲಿ ರಾಕೆಟ್‌ ಬಾಹ್ಯಾಕಾಶದಲ್ಲಿ ಸ್ಫೋಟಗೊಂಡಿದೆ. ರಾಕೆಟ್‌ನ ಅವಶೇಷಗಳು ಬೆಂಕಿಯ ಉಂಡೆಗಳಾಗಿ ಭೂಮಿಯ ಕಡೆಗೆ ವೇಗವಾಗಿ ಬರುತ್ತಿರುವಂತಹ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣಲ್ಲಿ ಕಾಣಿಸಿಕೊಂಡಿದೆ

ವರದಿಗಳ ಪ್ರಕಾರ ಸ್ಪೇಸ್‌ ಎಕ್ಸ್ ಇದುವರೆಗೆ ನಿರ್ಮಿಸಲಾದ ಅತ್ಯಂತ ಶಕ್ತಿಶಾಲಿ ಎಂದು ವಿನ್ಯಾಸಗೊಳಿಸಲಾದ ಸ್ಟಾರ್‌ಶಿಪ್ ರಾಕೆಟ್, ನಾಲ್ಕು ನಕಲಿ ಸ್ಟಾರ್‌ಲಿಂಕ್ ಉಪಗ್ರಹಗಳನ್ನು ಕೊಂಡೊಯ್ಯುವ ಮತ್ತು ಕುಶಲತೆಯನ್ನು ಪರೀಕ್ಷಿಸುವ ಸಬ್‌ಆರ್ಬಿಟಲ್ ಹಾರಾಟವನ್ನು ನಡೆಸಿತ್ತು. ಅದರ ಎಂಟನೇ ಪರೀಕ್ಷಾ ಹಾರಾಟದ ಸಮಯದಲ್ಲಿ ಅದರ ಸ್ಟಾರ್‌ಶಿಪ್ ರಾಕೆಟ್ ಬಾಹ್ಯಾಕಾಶದಲ್ಲಿ ಸ್ಫೋಟಗೊಂಡಿದೆ. ಅದರ ಅವಶೇಷಗಳು ಫ್ಲೋರಿಡಾ ಮತ್ತು ಬಹಾಮಾಸ್‌ನ ಕೆಲವು ಭಾಗಗಳಲ್ಲಿ ಬಿದ್ದಿದೆ.

ರಾಕೆಟ್‌ ಸ್ಫೋಟಗೊಂಡು ಅದರ ಭಾಗಗಳು ಛಿದ್ರವಾಗಿ ಬೆಂಕಿಯ ಉಂಡೆಗಳಾಗಿ ಭೂಮಿಯ ಕಡೆಗೆ ವೇಗವಾಗಿ ಬರುತ್ತಿರುವುದು ಹಲವೆಡೆ‌ ಆಕಾಶದಲ್ಲಿ ಕಾಣಿಸಿಕೊಂಡಿದೆ. ಇಂತಹುದೇ ಘಟನೆ ಜನವರಿಯಲ್ಲಿಯೂ ನಡೆದಿತ್ತು. ಆದರೆ ಈ ಬಾರಿ ಸಮಸ್ಯೆಗಳನ್ನು ಪರಿಹರಿಸಲು ಎಲ್ಲಾ ರೀತಿಯ ಮಾರ್ಪಾಡುಗಳನ್ನು ಸ್ಪೇಸ್‌ಎಕ್ಸ್‌ ಮಾಡಿತ್ತು. ಈ ಪ್ರಯತ್ನಗಳ ಹೊರತಾಗಿಯೂ ಮತ್ತೆ ಉಂಟಾಗಿರುವ ವೈಫಲ್ಯ ಸ್ಪೇಸ್‌ಎಕ್ಸ್‌ಗೆ ದೊಡ್ಡ ಹಿನ್ನಡೆಯಾಗಿದೆ.

ಸ್ಟಾರ್‌ಶಿಪ್ ಬಾಹ್ಯಾಕಾಶವನ್ನು ತಲುಪಿದ ನಂತರ ಸ್ಫೋಟ ಸಂಭವಿಸಿದೆ. ಅದರ ಭಾಗಗಳು ಛಿದ್ರವಾಗಿ ಭೂಮಿಯ ಕಡೆಗೆ ಬರುತ್ತಿದ್ದಂತೆ ಸ್ಥಳೀಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗಿದೆ. ಮತ್ತು ಫ್ಲೋರಿಡಾ ಮತ್ತು ಬಹಾಮಾಸ್‌ನ ನಿವಾಸಿಗಳಿಗೆ ಜಾಗರೂಕರಾಗಿರಲು ಸೂಚಿಸಲಾಗಿದೆ.

ಇದೀಗ ರಾಕೆಟ್‌ ವೈಫಲ್ಯದ ಕಾರಣವನ್ನು ತನಿಖೆ ಮಾಡಲು ಮತ್ತು ಸಾರ್ವಜನಿಕ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸ್ಪೇಸ್‌ಎಕ್ಸ್ ನಿಯಂತ್ರಕ ಸಂಸ್ಥೆಗಳೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ ಎನ್ನಲಾಗಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!