ಡೊಮಿನಿಕನ್ ರಿಪಬ್ಲಿಕ್‌ನ ಕಡಲತೀರದಲ್ಲಿ ಭಾರತೀಯ ವಿದ್ಯಾರ್ಥಿನಿ ಸುದೀಕ್ಷಾ ಕೊಣಂಕಿ ನಾಪತ್ತೆಯಾಗಿರುವ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಸುದೀಕ್ಷಾಳ ಬಟ್ಟೆಗಳು ಕಡಲತೀರದ ಲಾಂಜ್ ಕುರ್ಚಿಯ ಮೇಲೆ ಪತ್ತೆಯಾಗಿವೆ. ಒಂದು ವಾರದ ಹಿಂದೆ ಸುದೀಕ್ಷಾ ತನ್ನ ಐವರು ಸ್ನೇಹಿತರೊಂದಿಗೆ ಡೊಮಿನಿಕನ್ ರಿಪಬ್ಲಿಕ್‌ಗೆ ಪ್ರವಾಸಕ್ಕೆ ಹೋಗಿದ್ದರು.

ಮಾರ್ಚ್ 6ರಂದು ಸಂಜೆ 4 ಗಂಟೆಯಿಂದ ಆಕೆ ನಾಪತ್ತೆಯಾಗಿದ್ದಾಳೆ ಎಂದು ವರದಿಯಾಗಿದೆ.

ಸುದೀಕ್ಷಾಳ ಬಟ್ಟೆಗಳು ಪತ್ತೆಯಾಗಿರುವ ಕುರಿತು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಆಕೆ ಸಮುದ್ರಕ್ಕೆ ಹೋಗುವ ಮೊದಲು ತನ್ನ ಬಟ್ಟೆಗಳನ್ನು ಕುರ್ಚಿಯ ಮೇಲೆ ಬಿಟ್ಟಿರಬಹುದು ಎಂದು ಶಂಕಿಸಲಾಗಿದೆ. ಸಿಸಿ ಟಿವಿ ದೃಶ್ಯಾವಳಿಗಳಲ್ಲಿ ಸುದೀಕ್ಷಾ ತನ್ನ ಸ್ನೇಹಿತರೊಂದಿಗೆ ಕಡಲತೀರಕ್ಕೆ ಹೋಗುತ್ತಿರುವುದು ಕಂಡುಬಂದಿದೆ. ಆಕೆಯೊಂದಿಗೆ ಹೋಗಿದ್ದ ಜೋಶುವಾ ರೀಬ್ ಎಂಬಾತನನ್ನು ವಿಚಾರಣೆಗೆ ಒಳಪಡಿಸಲಾಗಿದೆ.

ಸುದೀಕ್ಷಾಳ ತಂದೆ ಇದು ಅಪಹರಣ ಪ್ರಕರಣವಾಗಿರಬಹುದು ಎಂದು ಶಂಕಿಸಿದ್ದಾರೆ. ಸುದೀಕ್ಷಾ ಯಾವಾಗಲೂ ತನ್ನ ಫೋನ್ ಮತ್ತು ಪರ್ಸ್ ಅನ್ನು ತನ್ನೊಂದಿಗೆ ಇಟ್ಟುಕೊಳ್ಳುತ್ತಿದ್ದಳು. ಆದರೆ, ಅವಳ ಫೋನ್ ಮತ್ತು ಪರ್ಸ್ ಅನ್ನು ಅವಳ ಸ್ನೇಹಿತರ ಬಳಿ ಬಿಟ್ಟಿದ್ದು ಅನುಮಾನಗಳಿಗೆ ಕಾರಣವಾಗಿದೆ.

ಈ ಪ್ರಕರಣದ ತನಿಖೆಗೆ ಡ್ರೋನ್‌ಗಳು ಮತ್ತು AI-ಸಹಾಯದ ಕಣ್ಗಾವಲುಗಳನ್ನು ಬಳಸಲಾಗುತ್ತಿದೆ. ಇಂಟರ್‌ಪೋಲ್ ಕೂಡಾ ತನಿಖೆಗೆ ನೆರವಾಗುತ್ತಿದೆ. ಪಿಟ್ಸ್‌ಬರ್ಗ್ ವಿಶ್ವವಿದ್ಯಾಲಯವು FBI, DEA ಮತ್ತು ಹೋಮ್‌ಲ್ಯಾಂಡ್ ಸೆಕ್ಯುರಿಟಿಗಳೊಂದಿಗೆ ತನಿಖೆಯಲ್ಲಿ ಭಾಗಿಯಾಗಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!