ಸಿಲಿಕಾನ್ ಸಿಟಿಯಲ್ಲಿ (Bangalore) ಕಳ್ಳರ (Thieves) ಹಾವಳಿ ಹೆಚ್ಚಾಗುತ್ತಲೇ ಇದೆ. ಮನೆಗೆ ನುಗ್ಗಿ ಕಳ್ಳತನ (Home Theft) ಮಾಡುವುದು. ಅಂಗಡಿಗೆ ನುಗ್ಗಿ ಕನ್ನ (Shop Theft) ಹಾಕುವುದು ಎಲ್ಲಾ ಮಾಡ್ತಿದ್ದಾರೆ. ಆದರೆ ಈಗ ರಸ್ತೆಯಲ್ಲಿ ನಿಲ್ಲಿಸಿದ್ದ ಕಾರಿನ ನಾಲ್ಕು ಚಕ್ರ (Car Tire) ಕದ್ದು ಖದೀಮರು ಎಸ್ಕೇಪ್ (Thieves Escape) ಆಗಿದ್ದಾರೆ.

ಇನ್ನೋವಾ ಕಾರಿನಲ್ಲಿ ಬಂದು ರಸ್ತೆಯಲ್ಲಿ ನಿಲ್ಲಿಸಿದ್ದ ಹ್ಯುಂಡೈ ಕ್ರೆಟಾ (Hyundai Creta) ಕಾರಿನ ನಾಲ್ಕು ಚಕ್ರ ಕದ್ದು ಕಳ್ಳರು ಪರಾರಿಯಾಗಿದ್ದಾರೆ.

ಬೆಂಗಳೂರು ನಗರದ ಗಾಂಧಿನಗರ ಹೊಟೇಲ್ ಬಳಿ ಈ ಘಟನೆ ನಡೆದಿದೆ. ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ಕಳ್ಳತನ ನಡೆದಿದೆ. ಕಳ್ಳರ ಕಂಪ್ಲೀಟ್ ಕರಾಮತ್ತು ಮೊಬೈಲ್ ನಲ್ಲಿ ಸೆರೆಯಾಗಿದೆ. ಇನ್ನೋವಾ ಕಾರಿನಲ್ಲಿ ಬಂದ ಖದೀಮರು, ಮೊದಲಿಗೆ ಸುತ್ತಲೂ ಯಾರು ಇಲ್ಲದನ್ನ ಗಮನಸಿದ್ದಾರೆ. ನಂತರ ಸೀದಾ ಬಂದು ಹೋಟೆಲ್ ಮುಂದೆ ನಿಲ್ಲಿಸಿದ್ದ ಕಾರಿಗೆ ಕನ್ನ ಹಾಕಿದ್ದಾರೆ. ಕಾರಿಗೆ ಜಾಕ್ ಹಾಕಿ ಖದೀಮರು ನಾಲ್ಕು ಚಕ್ರ ಬಿಚ್ಚಿದ್ದಾರೆ. ನಂತರ ನಾಲ್ಕು ಚಕ್ರಗಳಿಗೆ ಕಲ್ಲುಗಳನ್ನ ಇಟ್ಟು ವೀಲ್ ಬಿಚ್ಚಿ ಎಸ್ಕೇಪ್ ಕಾರಿನೊಳಗಡೆ ಹಾಕೊಂಡು ಎಸ್ಕೇಪ್ ಆಗಿದ್ದಾರೆ.

ಇನ್ನೋವಾ ಕಾರಿನಲ್ಲಿ ಬಂದು ಕಳ್ಳತನ

ಇನ್ನೋವಾ ಕಾರಿನಲ್ಲಿ ದೊಡ್ಡವರ ರೀತಿ ಬಂದು ರಸ್ತೆಯಲ್ಲಿ ನಿಂತಿದ್ದ ಹ್ಯುಂಡೈ ಕ್ರೆಟಾ ಕಾರಿನ ಟೈರ್ ಕದ್ದಿದ್ದಾರೆ. ನಾವು ಆಟೋ, ಬೈಕ್ಗಳನ್ನ ಕದಿಯುತ್ತಿದ್ದದ್ದನ್ನು ಮತ್ತು ಕೆಲವೊಂದು ಭಾಗಗಳನ್ನು ಕದ್ದು ಎಸ್ಕೇಪ್ ಆಗುತ್ತಿದ್ರು. ಇದೀಗ ಕಾರಿನ ನಾಲ್ಕು ಚಕ್ರವನ್ನ ಸಲೀಸಾಗಿ ಬಂದು ಕದ್ದು ಎಸ್ಕೇಪ್ ಆಗಿದ್ದಾರೆ.
ಗಾಂಧಿನಗರ ಹೋಟೆಲ್ ಬಳಿ ನಿಲ್ಲಿಸಿದ್ದ ಕಾರಿನ ಚಕ್ರ ಕಳ್ಳತನ

ಇನ್ನೋವಾ ಕಾರಿನಲ್ಲಿ ಬಂದ ಮೂವರು ಖದೀಮರಿಂದ ಈ ಕಳ್ಳತನ ನಡೆದಿದೆ. ಮೂವರು ಖದೀಮರು ಸೇರಿ ಈ ಕೃತ್ಯ ಎಸಗಿದ್ದಾರೆ. ಹುಬ್ಬಳ್ಳಿ ಮೂಲದ ಗೋವಿಂದಗೌಡ ಎಂಬುವರಿಗೆ ಸೇರಿದ ಕಾರಿನ ಚಕ್ರವನ್ನ ಬಿಚ್ಚಿಕೊಂಡು ಎಸ್ಕೇಪ್ ಆಗಿದ್ದಾರೆ. ವೈಯಕ್ತಿಕ ಕೆಲಸ ನಿಮಿತ್ತ ಶನಿವಾರ ಬೆಂಗಳೂರಿಗೆ ಬಂದಿದ್ದ ಗೋವಿಂದಗೌಡ, ಗಾಂಧಿನಗರ ಹೋಟೆಲ್ ಬಳಿ ಕಾರು ನಿಲ್ಲಿಸಿದ್ದರು. ಈ ವೇಳೆ ಖದೀಮರು ಎಂಟ್ರಿ ಕೊಟ್ಟು ರಾತ್ರಿ ಗಾಂಧಿನಗರ ಹೋಟೆಲ್ ಬಳಿ ನಿಲ್ಲಿಸಿದ್ದ ಕಾರಿನ ಚಕ್ರ ಕದ್ದು ಪರಾರಿಯಾಗಿದ್ದಾರೆ.

ಗಾಂಧಿನಗರ ಹೋಟೆಲ್ ಬಳಿ ನಡೆದ ಕಳ್ಳತನ ಸಂಬಂಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಕ್ರಗಳನ್ನು ಕದ್ದ ಕಳ್ಳರಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಮೊಬೈಲ್ನಲ್ಲಿರುವ ವಿಡಿಯೋ ಆಧರಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕಾರಿನ ಮಾಲೀಕ ಠಾಣೆಗೆ ದೂರು ಕೊಟ್ಟು ಕಳ್ಳರನ್ನ ಆದಷ್ಟು ಬೇಗ ಪತ್ತೆ ಹಚ್ಚುವಂತೆ ಆಗ್ರಹಿಸಿದ್ದಾರೆ.

ವಾಹನ ಚಾಲಕರು, ಮಾಲೀಕರಿಗೆ ಗಾಬರಿ

ಕಳ್ಳರ ಈ ಕೃತ್ಯ ಕಂಡು ಬೆಂಗಳೂರಿನ ವಾಹನ ಚಾಲಕರು ಮತ್ತು ಮಾಲೀಕರು ಬೆಚ್ಚಿಬಿದ್ದಿದ್ದಾರೆ. ರಸ್ತೆಯಲ್ಲಿ ತಮ್ಮ ವಾಹನಗಳನ್ನ ನಿಲ್ಲಿಸುವುದು ಎಷ್ಟು ಸುರಕ್ಷಿತ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ವಾಹನ ಖರೀದಿ ಮಾಡಿದ್ರೆ, ಹೀಗೆ ಬಂದು ಕಳ್ಳರು ವಾಹನದ ಭಾಗಗಳನ್ನ ಕಳ್ಳತನ ಮಾಡ್ತಿದ್ದಾರೆ ಎಂದು ಗರಂ ಆಗಿದ್ದಾರೆ. ಕಾನೂನು ಸುವ್ಯವಸ್ಥೆ ಮತ್ತು ಪೊಲೀಸರ ವಿರುದ್ಧ ಕಿಡಿ ಕಾರಿದ್ದಾರೆ. ರಾತ್ರಿ ವೇಳೆ ಪೊಲೀಸರ ಗಸ್ತು ಹೆಚ್ಚಿಸಬೇಕು. ಆಗ ಇಂಥಹ ಕೃತ್ಯಗಳಿಗೆ ಕಡಿವಾಣ ಹಾಕಬಹುದು. ಇಲ್ಲವಾದಲ್ಲಿ ಕಳ್ಳರ ಹಾವಳ ಇನ್ನೂ ಹೆಚ್ಚುತ್ತೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ

Leave a Reply

Your email address will not be published. Required fields are marked *

Join WhatsApp Group
error: Content is protected !!