ವಾಟ್ಸಪ್ ಗ್ರೂಪ್ ನಲ್ಲಿ ಹಂಚಿಕೊಳ್ಳಲಾಗಿದ್ದ ವಿಡಿಯೋ ಒಂದಕ್ಕೆ ನಗುವಿನ ಎಮೋಜಿ ಹಾಕಿದ ವಿಚಾರಕ್ಕೆ ರಾಯಚೂರಿನಲ್ಲಿ ದೊಡ್ಡ ರಾದ್ಧಾಂತವೇ ನಡೆದುಹೋಗಿದೆ
ರಾಯಚೂರಿನ ನಿವಾಸಿ ಮಹೇಶ್ ರೆಡ್ಡಿ ಎಂಬಾತನ ಮೇಲೆ ಹಲ್ಲೆ ನಡೆದಿದ್ದು ಸ್ಥಳೀಯ ನಗರಸಭೆಯ ಸದಸ್ಯ ಪತಿ ಮಗ ಹಾಗೂ ಅವರ ಬೆಂಬಲಿಗರು ಮಹೇಶ್ ಮನೆಗೆ ನುಗ್ಗಿ ದಾಂಗುಡಿ ಎಬ್ಬಿಸಿದ್ದಲ್ಲದೆ ಮನೆ ಮೇಲೆ ಕಲ್ಲು ತೂರಿದ್ದಾರೆ
ಈ ವಿಚಾರವಾಗಿ ಮಹೇಶ್ ರೆಡ್ಡಿ ಪೋಲಿಸರಿಗೆ ದೂರು ನೀಡಿದ್ದು ದೂರಿನ ಅನ್ವಯ ಆಂಧ್ರಪ್ರದೇಶದ ಸಾಮಾಜಿಕ ಕಾರ್ಯಕರ್ತ ಬಾಯಿರೆಡ್ಡಿಯ 26 ಸೆಕೆಂಡ್ ನ ವಿಡಿಯೋ ಮುನ್ನೂರುವಾಡಿ ಎಂಬ ವಾಟ್ಸಾಪ್ ಗ್ರೂಪ್ ನಲ್ಲಿ ಶೇರ್ ಆಗಿತ್ತು. ಇದಕ್ಕೆ ನಗರಸಭೆಯ ಸದಸ್ಯೆಯ ಮಗ ಸಂತೋಷ್ ರೆಡ್ಡಿ ನಗುವಿನ ಎಮೋಜಿ ಹಾಕಿ ಪ್ರತಿಕ್ರಿಯಿಸಿದ್ದಾನೆ. ಇದನ್ನು ಗಮನಿಸಿದ ಮಹೇಶ್ ಎಮೋಜಿ ಡಿಲೀಟ್ ಮಾಡುವಂತೆ ಸಂತೋಷ್ ರೆಡ್ಡಿಗೆ ಆಗ್ರಹಿಸಿದ್ದಾನೆ.
ಇದೇ ವಿಚಾರವಾಗಿ ದೊಡ್ಡ ವಾಗ್ವಾದವೇ ನಡೆದು ವಿಚಾರ ಹಲ್ಲೆಯವರೆಗೂ ಬಂದು ನಿಂತಿದೆ
ಸಂತೋಷ್ ರೆಡ್ಡಿ ತಂದೆ ತಿಮ್ಮಾರೆಡ್ಡಿ ಹಾಗೂ ಬೆಂಬಲಿಗರು ಮಹೇಶ್ ರೆಡ್ಡಿ ಮನೆಗೆ ನುಗ್ಗಿ ಕುಟುಂಬಸ್ಥರ ಮೇಲೆ ಹಲ್ಲೆ ಮಾಡಿದ್ದಲ್ಲದೆ ಮಹೇಶ್ ಪತ್ನಿಯನ್ನು ಎಳೆದಾಡಿ ಕಪಾಳಮೋಕ್ಷ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ
ಘಟನೆಯ ಕುರಿತು ಇಲ್ಲಿನ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ














