
ತನ್ನ ಪತಿಯನ್ನು ಕೊಂದು ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಸಿಮೆಂಟ್ ತುಂಬಿದ ಪ್ಲಾಸ್ಟಿಕ್ ಡ್ರಮ್‌ನೊಳಗೆ ಮುಚ್ಚಿಟ್ಟು ಕ್ರೌರ್ಯ ಮೆರೆದ ಆರೋಪಿ ಮೀರತ್ ನ ಮಹಿಳೆಯ ತಂದೆ ತನ್ನ ಮಗಳು ಮಾದಕ ವ್ಯಸನಿಯಾಗಿದ್ದಳು.ಡ್ರಗ್ಸ್ ತೆಗೆದುಕೊಳ್ಳದಂತೆ ಆಕೆಯನ್ನು ತಡೆದ ಕಾರಣ ತನ್ನ ಪತಿಯನ್ನು ಕೊಲೆ ಮಾಡಿದ್ದಾಳೆ ಎಂದು ಹೇಳಿದ್ದಾರೆ.ಈ ರೀತಿ ಡ್ರಗ್ಸ್ ದಾಸಿಯಾಗಿ ಗಂಡನನ್ನೇ ಕೊಲ್ಲುವ ಹಂತಕ್ಕೆ ಹೋದವಳು,ನೀಚ ಅಪರಾಧ ಮಾಡಿದ ಮಗಳು ಬದುಕಲು ಅರ್ಹಳಲ್ಲ,ಆಕೆಯನ್ನು ಗಲ್ಲಿಗೇರಿಸುವಂತೆ ಸ್ವತಃ ಆಗ್ರಹಿಸಿದ್ದಾರೆ.
ಸೌರಭ್ ರಜಪೂತ್ 2016 ರಲ್ಲಿ ಮುಸ್ಕಾನ್ ರಸ್ತೋಗಿಯನ್ನು ಪ್ರೇಮ ವಿವಾಹವಾಗಿದ್ದರು.ಕಳೆದ ಮೂರು ವರ್ಷಗಳಿಂದ ಮೀರತ್‌ನ ಬಾಡಿಗೆ ಮನೆಯಲ್ಲಿ ಪತ್ನಿ ಮತ್ತು ತಮ್ಮ ಐದು ವರ್ಷದ ಮಗಳೊಂದಿಗೆ ವಾಸಿಸುತ್ತಿದ್ದರು.ಸೌರಭ್ ಕೊನೆಯದಾಗಿ ಮಾರ್ಚ್ 4 ರಂದು ಕೊಲೆಯಾಗಿರುತ್ತಾರೆ.ಪತ್ನಿ ಮುಸ್ಕಾನ್ ತನ್ನ ಪ್ರಿಯಕರ ಸಾಹಿಲ್ ಶುಕ್ಲಾ ಜೊತೆ ಸೇರಿ ಸೌರಭ್ ನನ್ನು ಕೊಲೆ ಮಾಡಿರುವ ಆರೋಪ ಹೊತ್ತಿದ್ದಾಳೆ.
ಪತಿ ಸೌರಭ್ ತನಗೆ ಡ್ರಗ್ಸ್ ಸೇವಿಸಲು ಬಿಡುವುದಿಲ್ಲ ಎನ್ನುವ ಕಾರಣಕ್ಕೆ ಮಗಳು ಆತನನ್ನು ಕೊಂದಿದ್ದಾಳೆ ಎಂದು ಮುಸ್ಕಾನ್ ತಂದೆ ಪ್ರಮೋದ್ ರಸ್ತೋಗಿ ಹೇಳಿದ್ದಾರೆ. ತನಗೆ ಡ್ರಗ್ಸ್ ಇಲ್ಲದೆ ಬದುಕಲು ಸಾಧ್ಯವಿಲ್ಲ ಎಂದು ಆಕೆ ಹೇಳಿಕೊಂಡಿದ್ದು ಬದುಕಲು ಅರ್ಹಳಲ್ಲ ಎಂದು ಆಕೆಯ ತಂದೆ ಆಕೃಷ ವ್ಯಕ್ತಪಡಿಸಿದ್ದಾರೆ.
ಇನ್ನು ಸೌರಭ್ ತನ್ನ ಮಗನಿದ್ದಂತೆ ಎಂದು ಒತ್ತಿ ಹೇಳಿದ ಆರೋಪಿಯ ತಂದೆ, ಮುಸ್ಕಾನ್ ಬದುಕುವ ಹಕ್ಕನ್ನು ಕಳೆದುಕೊಂಡಿದ್ದಾಳೆ.ಅವಳು ತಪೋಯಿಗೆ ಪ್ರತಿಯಾಗಿ ಆಕೆಯನ್ನು ಗಲ್ಲಿಗೇರಿಸಬೇಕು ಎಂದು ಹೇಳಿದ್ದಾರೆ. ನನ್ನ ಮಗಳಿಗೆ ಬದುಕುವ ಹಕ್ಕಿಲ್ಲ, ಆಕೆಯನ್ನು ಗಲ್ಲಿಗೇರಿಸಿ ಎಂದು ತಂದೆ ಆಗ್ರಹಿಸಿದ್ದಾರೆ.






