src="https://vidyamaana.com/wp-content/uploads/2024/09/gl-today-1.jpeg" alt="" width="1810" height="2560" />

ಕೆ.ಆರ್.ಎಸ್ ಡ್ಯಾಂ ನಲ್ಲಿ ಮತ್ತೊಂದು ಅಚಾತುರ್ಯ ನಡೆದಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜ ಸಾಗರ ಜಲಾಶಯದ ಗೇಟ್ ಏಕಾಏಕಿ ಓಪನ್ ಆಗಿದೆ. ಅಪಾರ ಪ್ರಮಾಣದ ಕಾವೇರಿ ನೀರು ವ್ಯರ್ಥವಾಗಿ ಹರಿದು ಹೋಗಿದೆ.

ಭಾನುವಾರ ರಾತ್ರಿ ಇದ್ದಕ್ಕಿದಂತೆ ಕೆ.ಆರ್.ಎಸ್ ಡ್ಯಾಂ +80 ಗೇಟ್ ಗಳು ತೆರೆದಿದ್ದು 24 ಗಂಟೆಗಳ ಕಾಲ ಬರೋಬ್ಬರಿ 2000 ಕ್ಯೂಸೆಕ್ ನೀರು ವ್ಯರ್ಥವಾಗಿದೆ.

ಭಾನುವಾರದಿಂದ ಸೋಮವಾರದವರೆಗೆ ಈ ಅವಾಂತರ ನಡೆದಿದ್ದರು ಅಧಿಕಾರಿಗಳಿಗೆ ಗಮನಕ್ಕೆ ಬಂದಿಲ್ಲ.

ಬಳಿಕ ಸೋನವಾರ ರಾತ್ರಿ ಕಾವೇರಿ ನಿಗಮದ ಅಧಿಕಾರಿಗಳು ಗೇಟ್ ಬಂದ್ ಮಾಡಿದ್ದಾರೆ. ಜಲಾಶಯದ ಗೆಟ್ ಏಕಾಏಕಿ ತೆರೆಯಲು ಕಾರಣವೇನು? ಅಧಿಕರಿಗಳ ನಿರ್ಲಕ್ಷ್ಯವೇ? ಕಾರಣವೇನೆಂಬುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಗೇಟ್ ನ ಮೋತರ್ ರಿವರ್ಸ್ ಆಗಿ ಗೇಟ್ ತೆರೆದಿರಬಹುದೇ? ಅಥವಾ ಸಿಬ್ಬಂದಿಗಳೇ ಗೇಟ್ ತೆರೆದಿದ್ದಾರೆಯೇ ಎಂದು ಅಧಿಕಾರಿಗಳು ಕೂಡ ಸಂಶಯ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!