ಪುತ್ತೂರು; ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರವಾಗಿರುವ ಪುತ್ತೂರಿನ ಖಾಸಗಿ ಶಾಲೆಯೊಂದರಲ್ಲಿ ಪ್ರೀ ವೆಡ್ಡಿಂಗ್ ಶೂಟಿಂಗ್ ನಡೆಯುತ್ತಿದ್ದು, ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಪುತ್ತೂರು ಕ್ಷೇತ್ರಶಿಕ್ಷಣಾಧಿಕಾರಿ ಲೊಕೇಶ್ ಎಸ್ ಆರ್ ಅವರು ಶೂಟಿಂಗ್ ಮಾಡುತ್ತಿದ್ದವರನ್ನು ಗಂಟುಮೂಟೆ ಕಟ್ಟಿಸಿ ಕಳುಹಿಸಿದ ಘಟನೆ ಬುಧವಾರ ನಡೆದಿದೆ.
ಪುತ್ತೂರು ಸಂತ ವಿಕ್ಟರ್ಸ್ ಪ್ರೌಢಶಾಲೆ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರವಾಗಿದ್ದು, ಇಂದು ಮಕ್ಕಳು ಪರೀಕ್ಷೆಗಾಗಿ ಶಾಲೆಗೆ ಬಂದಾಗ ಶಾಲಾ ಗೇಟು ತೆರೆಯಲು ನಿರಾಕರಿಸಲಾಯಿತು. ಇದರಿಂದ ಪೋಷಕರಿಗೆ ಈ ಮಾಹಿತಿ ತಿಳಿದು ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು. ತಕ್ಷಣ ಸ್ಥಳಕ್ಕೆ ಪೊಲೀಸರು ಮತ್ತು ಶಿಕ್ಷಣಾಧಿಕಾರಿ ಧಾವಿಸಿ ಬಂದು ಶೂಟಿಂಗ್ ನಿಲ್ಲಿಸಿದ್ದಾರೆ.
ಇನ್ನೊಂದು ಸುದ್ದಿ
ಆರ್ಯನ್ ನಟನೆಯ `ಲವ್ ಟು ಲಸ್ಸಿ’ ಕನ್ನಡ ಸಿನಿಮಾದ ಶೂಟಿಂಗ್ ಇದಾಗಿದ್ದು, ಈ ಸಿನಿಮಾ ಶೂಟಿಂಗ್ ಗಾಗಿ ಕಳೆದ ಒಂದೂವರೆ ತಿಂಗಳ ಹಿಂದೆ ಶಾಲೆಯ ಸಂಚಾಲಕರಿAದ ಅನುಮತಿ ಪಡೆಯಲಾಗಿತ್ತು. ಈ ಬಗ್ಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಯಾವುದೇ ಮಾಹಿತಿ ಇರಲಿಲ್ಲ. ಆದರೆ ಪರೀಕ್ಷಾ ಕೇಂದ್ರವಾಗಿದ್ದ ಪ್ರೌಢಶಾಲೆಯಲ್ಲಿ ಪರೀಕ್ಷಾ ದಿನದಂದು ಶೂಟಿಂಗ್ ಗೆ ಅವಕಾಶ ನೀಡಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಪೋಷಕರಿಂದ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!