Author: Vidyamaana

ಕುಂದಾಪುರ: ಹನಿ ಟ್ರ್ಯಾಪ್ ಖೆಡ್ಡಾ – ವ್ಯಕ್ತಿಗೆ ಹಲ್ಲೆ, ಲಕ್ಷಾಂತರ ಸುಲಿಗೆ; ಮಹಿಳೆ ಸೇರಿ ಆರು ಖದೀಮರ ಬಂಧನ

ಉಡುಪಿ: ವ್ಯಕ್ತಿಯೊಬ್ಬನನ್ನು ಹನಿ ಟ್ರ್ಯಾಪ್‌ಗೆ ಸೆಳೆದು, ಹಲ್ಲೆಗೈದು ಲಕ್ಷಾಂತರ ರೂಪಾಯಿ ಸುಲಿಗೆ ಮಾಡಿದ ಪ್ರಕರಣದಲ್ಲಿ ಕುಂದಾಪುರ ಪೊಲೀಸರು ಮಹಿಳೆ ಸೇರಿ ಆರು ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರ ಬಳಿಯಿಂದ ಎರಡು ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರು:ಬೈಂದೂರು ನಾವುಂದ ಗ್ರಾಮದ ಸವದ್ (28), ಕುಂದಾಪುರ ಗುಲ್ವಾಡಿ…

ಬೆಳ್ತಂಗಡಿ ಬುರುಡೆ ಪ್ರಕರಣ – ಆರೋಪಿ ಚಿನ್ನಯ್ಯನ SIT ಕಸ್ಟಡಿ ವಿಸ್ತರಣೆ..!!

ಬೆಳ್ತಂಗಡಿ:ಬುರುಡೆ ಪ್ರಕರಣದ ಆರೋಪಿ ಚಿನ್ನಯ್ಯನ 12 ದಿನಗಳ ಕಸ್ಟಡಿ ಅವಧಿ ಸೆಪ್ಟೆಂಬರ್ 3ರಂದು ಅಂತ್ಯಗೊಂಡ ಹಿನ್ನಲೆಯಲ್ಲಿ ಸಂಜೆ 3 ಗಂಟೆಗೆ ಬೆಳ್ತಂಗಡಿ ಹೆಚ್ಚುವರಿ ವ್ಯವಹಾರಿಕ ಹಾಗೂ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ವಿಜಯೇಂದ್ರ.ಹೆಚ್‌.ಟಿ ಅವರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಲಯ ವಿಚಾರಣೆ ನಡೆಸಿ,…

ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾದ ದೂರುದಾರ

ಬೆಳ್ತಂಗಡಿ: ದೂರುದಾರನ 12 ದಿನಗಳ ಎಸ್.ಐ.ಟಿ ಕಸ್ಟಡಿ ಅಂತ್ಯಗೊಂಡ ಹಿನ್ನೆಲೆ ಅಧಿಕಾರಿಗಳು ಸೆ.3 ರಂದು 3 ಗಂಟೆಗೆ ಬೆಳ್ತಂಗಡಿ ನ್ಯಾಯಾಲಯದ ಹೆಚ್ಚುವರಿ ವ್ಯವಹಾರಿಕ ನ್ಯಾಯಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ವಿಜಯೇಂದ್ರ‌‌‌ ಎಚ್.ಟಿ. ಮುಂದೆ ಹಾಜರುಪಡಿಸಿದ್ದಾರೆ‌. ತನಿಖಾಧಿಕಾರಿ ಜಿತೇಂದ್ರ ಕುಮಾರ್…

ಸೌಜನ್ಯ ತಾಯಿ ಕುಸುಮಾವತಿ ಅವರನ್ನು ಭೇಟಿ ಮಾಡಿ ಮಾತುಕತೆ – ಬಿಜೆಪಿ ಒಳಗಿನ ಅಸಮಾಧಾನ..!!

ಧರ್ಮಸ್ಥಳ ಚಲೋ’ ಹಮ್ಮಿಕೊಂಡಿದ್ದ ಬಿಜೆಪಿ (BJP) ಕೊನೆಯ ಕ್ಷಣದಲ್ಲಿ ಹತ್ಯೆಗೀಡಾಗಿದ್ದ ಸೌಜನ್ಯ ನಿವಾಸಕ್ಕೆ ಭೇಟಿ ಕಾರ್ಯಕ್ರಮ ನಿಗದಿಪಡಿಸಿತ್ತು. ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಮತ್ತು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಜೊತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ‌ (BY Vijayendra)…

7 ವರ್ಷಗಳಿಂದ ಚಿಕ್ಕಮ್ಮನ ಮೇಲೆ ನಿರಂತರ ಅತ್ಯಾಚಾರ; ಪೇದೆ ಮತ್ತು ಜೆಸ್ಕಾಂ ಉದ್ಯೋಗಿ ವಿರುದ್ಧ ದೂರು ದಾಖಲು!

ರಾಜ್ಯದಲ್ಲಿ ಅಸಹ್ಯಕರ ಘಟನೆಯೊಂದು ನಡೆದಿದೆ. ಕಳೆದ 7 ವರ್ಷಗಳಿಂದ ಜೀವ ಬೆದರಿಕೆ ಹಾಕಿ ಚಿಕ್ಕಮ್ಮನ ಮೇಲೆ ಯುವಕರಿಬ್ಬರು ಮೃಗೀಯವಾಗಿ ನಡೆದುಕೊಂಡಿದ್ದಾರೆ. ಹೌದು… ಪೊಲೀಸ್ ಪೇದೆ ಹಾಗೂ ಜೆಸ್ಕಾಂ ಉದ್ಯೋಗದಲ್ಲಿರುವ ಯುವಕರು ಪದೇ ಪದೇ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಯಾದಗಿರಿ ಜಿಲ್ಲೆಯ ಗಿರುಮಿಠಕಲ್…

ಅಮೆರಿಕನ್ ಕಂಪನಿಗಳು ಭಾರತದಿಂದ ವಾಪಸ್ಸಾಗಲಿವೆ – ಡೊನಾಲ್ಡ್ ಟ್ರಂಪ್

ಅಮೆರಿಕದ (America) ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಮತ್ತೆ ಭಾರತದ (India) ವ್ಯಾಪಾರ ನೀತಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನವದೆಹಲಿ ಈ ಮೊದಲೇ ವಿಶ್ವದಲ್ಲೇ ಅತ್ಯಂತ ಹೆಚ್ಚಿನ ಸುಂಕ (Tariffs) ವಿಧಿಸಿತ್ತು. ಭಾರತದ ವ್ಯಾಪಾರ ಪದ್ಧತಿಗಳು ಅಮೆರಿಕದ ಉತ್ಪಾದಕರಿಗೂ ತುಂಬಾ…

ಸಿ ಎ ಪರೀಕ್ಷೆಯಲ್ಲಿ ಉತ್ತೀರ್ಣರಾದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಶಾಸಕರಿಂದ ಸನ್ಮಾನ

ಪ್ರತೀಯೊಬ್ಬ ಪ್ರತಿಭಾವಂತರೂ ಪುತ್ತೂರಿನ ಆಸ್ತಿಯಾಗಿದ್ದಾರೆ; ಶಾಸಕ ಅಶೋಕ್ ರೈ

ಪುತ್ತೂರು: ಯಾರಲ್ಲಿ ಯಾವ ಪ್ರತಿಭೆ ಇದೆ ಎಂದು ಯಾರಿಗೂ ಹೇಳಲು ಸಾಧ್ಯವಿಲ್ಲ, ಪ್ರತೀಯೊಬ್ಬರಲ್ಲೂ ಒಂದೊಂದು ಪ್ರತಿಭೆಗಳಿದ್ದು ಅದಕ್ಕೆ ಪ್ರೋತ್ಸಾಹ ನೀಡುವ ಮೂಲಕ ಅದನ್ನು ಬೆಳೆಸುವ ಜವಾಬ್ದಾರಿ ಪೋಷಕರು ಹಾಗೂ ನಮ್ಮೆಲ್ಲರ ಮೇಲಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು. ಅವರು…

ಮೂಡುಬಿದಿರೆ:ದೂರುದಾರ ಮಹಿಳೆಗೆ ಕಿರುಕುಳ ಆರೋಪ: ಪೊಲೀಸ್‌ ಸಿಬ್ಬಂದಿ ಅಮಾನತು

ಮೂಡುಬಿದಿರೆ: ಠಾಣೆಗೆ ದೂರು ನೀಡಲು ಬಂದಿದ್ದ ಮಹಿಳೆಗೆ ಕರೆ ಮಾಡಿ ಅಶ್ಲೀಲವಾಗಿ ಮಾತನಾಡುತ್ತಿದ್ದ ಹಾಗೂ ಸಂದೇಶಗಳನ್ನು ರವಾನಿಸಿದ ಆರೋಪದ ಮೇಲೆ ಮೂಡುಬಿದಿರೆಯ ಪೊಲೀಸ್‌ ಸಿಬ್ಬಂದಿ ಕೊಪ್ಪಳ ಮೂಲದ ಶಾಂತಪ್ಪ ಮೇಲೆ ಪ್ರಕರಣ ದಾಖಲಾಗಿದ್ದು, ಮಂಗಳವಾರ ಸೇವೆಯಿಂದ ಅಮಾನತುಗೊಳಿಸಲಾಗಿದೆ. ತೋಡಾರು ಬಳಿಯ ವಿವಾಹಿತೆಯೋರ್ವರು…

ಸ್ವತಃ ಗಾಯ ಮಾಡಿಕೊಂಡು ಸುಳ್ಳು ದೂರು ನೀಡಿದ ಆಟೋ ಚಾಲಕ – ಪೊಲೀಸ್ ತನಿಖೆಯಿಂದ ಆಟೋ ಚಾಲಕನ ನಾಟಕ ಬಹಿರಂಗ

ಮಂಗಳೂರು:ಪಾಳ್ನಿರ್ ಪ್ರದೇಶದಲ್ಲಿ ಆಟೋ ಚಾಲಕನೊಬ್ಬ ತನ್ನ ಮೇಲೆ ದಾಳಿ ನಡೆದಿದೆ ಎಂದು ಸುಳ್ಳು ವದಂತಿ ಹಬ್ಬಿಸಿದ ಘಟನೆ ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ. ಆಗಸ್ಟ್ 31ರ ರಾತ್ರಿ, ಬಶೀರ್ ಎಂಬ ಆಟೋ ಚಾಲಕ ಮೂತ್ರ ವಿಸರ್ಜನೆಗಾಗಿ ಆಟೋ ನಿಲ್ಲಿಸಿದ್ದ ವೇಳೆ ತಂಡವೊಂದು ಹಲ್ಲೆ…

ಪ್ರಜ್ಞಾ ನಾಪತ್ತೆ..!!

ಸುರತ್ಕಲ್: ಇಲ್ಲಿನ ಕಾಟಿಪಳ್ಳ ಗ್ರಾಮದ ಗಣೇಶಕಟ್ಟೆನಿವಾಸಿ ಪ್ರಜ್ಞಾ(18) ಎಂಬವರು ಕಾಲೇಜಿಗೆಂದು ಹೋದವರು ನಾಪತ್ತೆಯಾಗಿದ್ದಾರೆ ಎಂದು ಸುರತ್ಕಲ್ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಜ್ಞಾ ಅವರು ಅಲೋಶಿಯಸ್‌ ಕಾಲೇಜಿನಲ್ಲಿ ಪ್ರಥಮವರ್ಷದ ಬಿ.ಸಿ.ಎ. ವ್ಯಾಸಂಗ ಮಾಡುತ್ತಿದ್ದು, ಸೆ.1 ರಂದು ಕಾಲೇಜು ಸಮವಸ್ತ್ರ ಧರಿಸಿ ಕಾಲೇಜಿಗೆ…

Join WhatsApp Group
error: Content is protected !!