ವಿಟ್ಲ: ಕೇರಳ ಮೂಲದ ಉದ್ಯೋಗಿಯಾಗಿರುವ ಅಶ್ರಫ್ ಎಂಬಾತನಿಗೆ ಹನಿ ಟ್ರ್ಯಾಪ್ ಮಾಡಿ ಸುಮಾರು 45 ಲಕ್ಷ ರೂಪಾಯಿ ಸುಲಿಗೆ ಮಾಡಲಾಗಿದೆ ಎಂಬ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿದ್ದ ಪ್ರಮುಖ ಮೂರು ಆರೋಪಿಗಳಿಗೆ ಜಿಲ್ಲಾ ನ್ಯಾಯಾಲಯವು ಷರತ್ತುಬದ್ಧ ನಿರೀಕ್ಷಣಾ ಜಾಮೀನನ್ನು ಮಂಜೂರು ಮಾಡಿದೆ.

ವಿಟ್ಲ ಪೊಲೀಸ್ ಠಾಣೆಯಲ್ಲಿ ಕ್ರಂ: 145/2025ರಂತೆ ದಾಖಲಾಗಿರುವ ಈ ಪ್ರಕರಣದಲ್ಲಿ ಕಡಂಬು ಬಶೀರ್, ಮಾಣಿ ಸೆಫಿಯಾ, ಸರಪುದ್ಧೀನ್ ಸೇರಿದಂತೆ ಒಟ್ಟು ಆರು ಜನರ ವಿರುದ್ಧ ಆರೋಪ ದಾಖಲಾಗಿತ್ತು.

ಆರೋಪಿಗಳ ಪರವಾಗಿ ವಾದ ಮಂಡಿಸಿದ ವಕೀಲ ಚೇತನಾ ಶೆಟ್ಟಿ ದಂಡೆ ಅವರ ವಾದವನ್ನು ನ್ಯಾಯಪೀಠ ಪುರಸ್ಕರಿಸಿದ್ದು, 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ನಿರೀಕ್ಷಣಾ ಜಾಮೀನಿಗೆ ಅನುಮತಿ ನೀಡಿದೆ.

ಹನಿ ಟ್ರ್ಯಾಪ್ ಸಂತ್ರಸ್ತ ಅಶ್ರಫ್ ಪರವಾಗಿ ಖಾಸಗಿ ವಕೀಲರೂ ವಾದ ಮಂಡಿಸಿದ್ದರು.

Leave a Reply

Your email address will not be published. Required fields are marked *

Join WhatsApp Group
error: Content is protected !!