
ಪುತ್ತೂರು: ಕೆ.ಪಿ.ಎಸ್. ಕೆಯ್ಯೂರು ನಲ್ಲಿ ನಡೆದ ಸವಣೂರು ವಲಯ ಮಟ್ಟದ ಕ್ರೀಡಾಕೂಟದಲ್ಲಿ ಮುಂಡೂರು ಶಾಲೆಯ ವಿದ್ಯಾರ್ಥಿಗಳು ಶ್ರೇಷ್ಠತೆ ಪ್ರದರ್ಶಿಸಿ ಹಲವು ವಿಭಾಗಗಳಲ್ಲಿ ಪ್ರಶಸ್ತಿ ಪಡೆದು ತಾಲೂಕು ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
14ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಅಂಬಟ ಅಬ್ದುಲ್ ಝಿಯಾದ್ ಎಂ.ಐ ಮತ್ತು ಆತಿಕಾ ದಂಪತಿಗಳ ಪುತ್ರಿ ಕುಮಾರಿ ತಶ್‌ರೀಫಾ ಉದ್ದ ಜಿಗಿತ ಹಾಗೂ 100 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಪಾಲಾಜೆ ಚಂದ್ರಹಾಸ ಮತ್ತು ಜಯಶ್ರೀ ದಂಪತಿಗಳ ಪುತ್ರಿ ತೃಷಾ ಚಕ್ರ ಎಸೆತದಲ್ಲಿ ಪ್ರಥಮ ಸ್ಥಾನ ಪಡೆದು ಕೀರ್ತಿ ತಂದಿದ್ದಾರೆ.
ಕೊಡೆಜಾಲು ಧರ್ಣಪ್ಪ ಗೌಡ ಮತ್ತು ಗೀತಾ ದಂಪತಿಗಳ ಪುತ್ರ ಭವಿತ್ ಕೆ ಉದ್ದ ಜಿಗಿತದಲ್ಲಿ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿಗಳಿಗೆ ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ವನಿತಾ ಬಿ ಅವರ ತರಬೇತಿ ಹಾಗೂ ಸಮಗ್ರ ಶಿಕ್ಷಕ ವೃಂದದ ಸಹಕಾರ ದೊರೆತಿದೆ ಎಂದು ಶಾಲಾ ಮುಖ್ಯಗುರು ವಿಜಯ ಪಿ ತಿಳಿಸಿದ್ದಾರೆ.






