Month: January 2025

ಶಾಲೆಯನ್ನೇ ಕಾಮದಡ್ಡೆಯಾಗಿ ಮಾಡಿಕೊಂಡ ಪ್ರಾಂಶುಪಾಲ; ಶಿಕ್ಷಕಿ ಜೊತೆ ಹಗಲಲ್ಲೇ ಚಕ್ಕಂದ

ಚಿ ತ್ತೋರ್ಗಢ ಜಿಲ್ಲೆಯ ಗಂಗರಾರ್ ಬ್ಲಾಕ್‌ನ ಅಜೋಲಿಯಾ ಖೇಡಾ ಗ್ರಾಮ ಪಂಚಾಯತಿಯ ಸಲೇರದ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಘಟನೆ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಶಾಲೆಯ ಕಚೇರಿಯಲ್ಲಿ ಪ್ರಾಂಶುಪಾಲ ಶಿಕ್ಷಕಿ ಜೊತೆ ಅಶ್ಲೀಲವಾಗಿ ವರ್ತಿಸುತ್ತಿರುವ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್…

ಕೋಟೆಕಾರು ಸಹಕಾರಿ ಬ್ಯಾಂಕ್ ದರೋಡೆ :ಮುರುಗಂಡಿ ದೇವರ್ ಸಹಿತ ಮೂವರ ಬಂಧನ

ಭಾರೀ ಸದ್ದು ಮಾಡಿದ್ದ ಉಲ್ಲಾಳದ ಕೋಟೆಕಾರು ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಬ್ಯಾಂಕ್ನಲ್ಲಿ ಸುಮಾರು 10ರಿಂದ 12 ಕೋಟಿಯನ್ನು ದರೋಡೆ ಮಾಡಿದ ಬಳಿಕ ಆರೋಪಿಗಳು ತಿರುವನ್ವೇಲಿಗೆ ಪರಾರಿಯಾಗಿದ್ದರು. ಇದೀಗ ಮಂಗಳೂರು ಪೊಲೀಸರು ಕಾರ್ಯಚರಣೆ ನಡೆಸಿ ಮೂವರನ್ನು…

ಉದ್ಘಾಟಕರ ಗೈರಿನೊಂದಿಗೆ ಆರಂಭಗೊಂಡ ಮುಕ್ವೆ ಮಖಾಂ ಉರೂಸ್!! ಅನಾಚಾರಗಳು ಅಂತ್ಯ ದಿನದ ಲಕ್ಷಣ: ಇರ್ಶಾದ್ ಫೈಝಿ

ಪುತ್ತೂರು: ಇತಿಹಾಸ ಪ್ರಸಿದ್ದ ಮುಕೈ ಮಖಾಂ ಉರೂಸ್, ಮತಪ್ರಭಾಷಣ ಉದ್ಘಾಟನೆ ಜ.19ರಂದು ರಾತ್ರಿ ನಡೆಯಿತು. ಅಸ್ಸಯ್ಯದ್ ಅಹ್ಮದ್ ಪೂಕೋಯ ತಂಜಳ್ ಪುತ್ತೂರು ದುವಾ ನೆರವೇರಿಸಿದರು. ಮುಕ್ವೆ ಮಸೀದಿಯ ಅಧ್ಯಕ್ಷ ಇಬ್ರಾಹಿಂ ಮುಲಾರ್‌ ಅಧ್ಯಕ್ಷತೆ ವಹಿಸಿದ್ದರು. ಉದ್ಘಾಟನೆ ನೆರವೇರಿಸಬೇಕಿದ್ದ ಸಯ್ಯಿದುಲ್ ಉಲಮಾ ಸಯ್ಯದ್…

ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ

ಮೂಲ್ಕಿ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷ ಡಾ.ರಾಜಶೇಖರ ಕೋಟ್ಯಾನ್ ರವರ ನೇತೃತ್ವದಲ್ಲಿ ಮುದರಂಗಡಿಯಲ್ಲಿ ಸನ್ಮಾನ

ಸನ್ಮಾನ ಸ್ವೀಕರಿಸಿದ ಸಂಘದ ಅಧ್ಯಕ್ಷ ಸಂತೋಷ್ ಪಿ ಕೋಟ್ಯಾನ್ ಬಳಂಜ ಹಾಗೂ ನಿರ್ದೇಶಕರು

ಬಳಂಜ:ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತಗೊಂಡಿರುವ ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯನ್ನು ಮೂಲ್ಕಿ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದಿಂದ ಮುದರಂಗಡಿಯಲ್ಲಿ ಜ. 19 ರಂದು ಗೌರವಿಸಿ ಸನ್ಮಾನಿಸಲಾಯಿತು. ಬಳಂಜ ಸಂಘದ ಅಧ್ಯಕ್ಷ ಸಂತೋಷ್ ಪಿ ಕೋಟ್ಯಾನ್ ಅವರನ್ನು ಮೂಲ್ಕಿ ರಾಷ್ಟ್ರೀಯ…

ನನ್ನ ಮಗ ತಪ್ಪಿತಸ್ಥನಾಗಿದ್ದರೆ ಗಲ್ಲಿಗೇರಿಸಿ: ಸಂಜಯ್‌ ರಾಯ್‌ ತಾಯಿ

ಕಳೆದ ವರ್ಷ ಆಗಸ್ಟ್ 09ರಂದು ಇಡೀ ಜಗತ್ತನ್ನೇ ಬೆಚ್ಚಿಬೇಳಿಸಿದ್ದ ಕೋಲ್ಕತದ ಆರ್ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ಟ್ರೈನಿ ವೈದ್ಯೆಯ ಅತ್ಯಾಚಾರ-ಕೊಲೆ ಪ್ರಕರಣದ ಆರೋಪಿ ಸಂಜಯ್ ರಾಯ್ನನ್ನು ಕೋರ್ಟ್ ನಿನ್ನೆ (ಜ.18) ಅಪರಾಧಿ ಎಂದು ತೀರ್ಪು ನೀಡಿತು. ಯುವ…

ಪ್ಯಾರಾಗ್ಲೈಡಿಂಗ್‌ ವೇಳೆ ಅಪಘಾತ: ಪ್ರವಾಸಿ ಮಹಿಳೆ ಸೇರಿ ಇಬ್ಬರು ಸಾವು

ಪ್ಯಾರಾಗ್ಲೈಡಿಂಗ್‌ ಮಾಡುತ್ತಿದ್ದ ವೇಳೆ ಕಮರಿಗೆ ಬಿದ್ದ ಪರಿಣಾಮ ಇಬ್ಬರು ಮೃತಪಟ್ಟ ಘಟನೆ ಉತ್ತರ ಗೋವಾದಲ್ಲಿ ನಡೆದಿದೆ. ಪ್ರವಾಸಕ್ಕೆ ಬಂದಿದ್ದ ಪುಣೆಯ ನಿವಾಸಿ ಶಿವಾನಿ ಡೇಬಲ್ ಮತ್ತು ಪ್ಯಾರಾಗ್ಲೈಡಿಂಗ್‌ ವೇಳೆ ಜತೆಗಿರುವ ತರಬೇತುದಾರ ನೇಪಾಳಿ ಪ್ರಜೆ ಸುಮಲ್‌ ಮೃತಪಟ್ಟಿದ್ದಾರೆ ಶನಿವಾರ ಸಂಜೆ ಕೇರಿ…

ಎಸ್.ಡಿ.ಪಿ.ಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿಯ  ನೂತನ ಪದಾಧಿಕಾರಿಗಳ ಆಯ್ಕೆ-ಅದ್ಯಕ್ಷರಾಗಿ ಅಶ್ರಫ್ ಬಾವು,ಉಪಾಧ್ಯಕ್ಷರಾಗಿ ಅಬ್ದುಲ್ ಹಮೀದ್ ಸಾಲ್ಮರ, ಕೋಶಾಧಿಕಾರಿಯಾಗಿ ಮುಸ್ತಫಾ ಡಿ.ಬಿ ವಿಟ್ಲ

ಪುತ್ತೂರು : ಎಸ್.ಡಿ.ಪಿ.ಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿಯ 2025-27ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಕ್ಷೇತ್ರ ಸಮಿತಿ ಕಚೇರಿಯಲ್ಲಿ ನಡೆಯಿತು.ಕ್ಷೇತ್ರ ಸಮಿತಿ ಅಧ್ಯಕ್ಷರಾಗಿದ್ದ ಅಬೂಬಕ್ಕರ್ ಸಿದ್ದೀಕ್ ಕೆ ಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೆರವಾದ ಕೆಲವು ಸ್ಥಾನಗಳಿಗೆ ಮರು…

ರಾಯಚೂರು ಜಿಲ್ಲಾಧಿಕಾರಿಯಾಗಿದ್ದ ಐ.ಆರ್ ಪೆರುಮಾಳ್ ಸನ್ಯಾಸಿಯಾಗಿ ಪ್ರತ್ಯಕ್ಷ, ಫೋಟೋ ವೈರಲ್!

ಅತ್ಯುನ್ನತ ವ್ಯಾಸಂಗ, ಐಎಎಸ್-ಐಪಿಎಸ್ ಗಳೇ ಭವಬಂಧನಗಳನ್ನು ತೊರೆದು ಸನ್ಯಾಸಿಗಳಾಗುತ್ತಿದ್ದರೆ. ಅದೇ ರೀತಿ ರಾಯಚೂರಿನ ಜಿಲ್ಲಾಧಿಕಾರಿಯಾಗಿದ್ದ ಐಆರ್ ಪೆರಮಾಳ್ ಅವರು ಮಹಾಕುಂಭ ಮೇಳದಲ್ಲಿ ಪ್ರತ್ಯಕ್ಷರಾಗಿದ್ದು ಅವರ ಫೋಟೋ ವೈರಲ್ ಆಗಿದೆ. 1993-94ರಲ್ಲಿ ರಾಯಚೂರು ಜಿಲ್ಲಾಧಿಕಾರಿಯಾಗಿದ್ದ ಐ.ಆರ್ ಪೆರುಮಾಳ್ ಅವರು ಈಗ ಸನ್ಯಾಸಿಯಾಗಿ ಮಹಾಕುಂಭಮೇಳದಲ್ಲಿ…

ಅತ್ಯಾಚಾರಕ್ಕೊಳಗಾಗಿ ಭೀಕರವಾಗಿ ಹತ್ಯೆಯಾಗಿದ್ದ ಕು. ಸೌಜನ್ಯ ತಂದೆ ನಿಧನ

ಹನ್ನೆರಡು ವರ್ಷಗಳ ಹಿಂದೆ ಧರ್ಮಸ್ಥಳದ ನೇತ್ರಾವತಿ ಸ್ನಾನ ಘಟ್ಟದ ಬಳಿಯ ಕಾಡಂಚಿನಲ್ಲಿ ಅತ್ಯಾಚಾರಕ್ಕೊಳಗಾಗಿ ಭೀಕರವಾಗಿ ಹತ್ಯೆಯಾಗಿದ್ದ ಕುಮಾರಿ ಸೌಜನ್ಯ ಅವರ ತಂದೆ ಇಂದು ನಿಧನರಾಗಿದ್ದಾರೆ. ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮದ ಪಾಂಗಾಳ ನಿವಾಸಿ ಚಂದಪ್ಪ ಗೌಡ (58)ರವರು ಅಲ್ಪಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು.…

ಬಂಟ್ವಾಳ : ಲಾರಿ ಚಾಲಕ- ಟೋಲ್ ಸಿಬಂದಿ ಗಲಾಟೆ – ವಿಡಿಯೋ ವೈರಲ್

ಟೋಲ್ ಹಣ ನೀಡಿಲ್ಲ ಎಂಬ ಕಾರಣಕ್ಕಾಗಿ ಟೋಲ್ ಸಿಬ್ಬಂದಿ ಲಾರಿ ಚಾಲಕನ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದ ಮೂಲಕ ಹರಿದಾಡುತ್ತಿದೆ. ಇದು ಬಂಟ್ವಾಳ ತಾಲೂಕಿನ ಬ್ರಹ್ಮರಕೂಟ್ಲು ಎಂಬಲ್ಲಿರುವ ವಿವಾದಾತ್ಮಕ ಟೋಲ್ ಗೇಟ್ ನಲ್ಲಿ ನಡೆದ ಘಟನೆಯಾಗಿದ್ದು, ಈವರೆಗೆ ಸ್ಥಳೀಯ…

Join WhatsApp Group
error: Content is protected !!