ಪುತ್ತೂರು: ಇತಿಹಾಸ ಪ್ರಸಿದ್ದ ಮುಕೈ ಮಖಾಂ ಉರೂಸ್, ಮತಪ್ರಭಾಷಣ ಉದ್ಘಾಟನೆ ಜ.19ರಂದು ರಾತ್ರಿ ನಡೆಯಿತು.

ಅಸ್ಸಯ್ಯದ್ ಅಹ್ಮದ್ ಪೂಕೋಯ ತಂಜಳ್ ಪುತ್ತೂರು ದುವಾ ನೆರವೇರಿಸಿದರು. ಮುಕ್ವೆ ಮಸೀದಿಯ ಅಧ್ಯಕ್ಷ ಇಬ್ರಾಹಿಂ ಮುಲಾರ್‌ ಅಧ್ಯಕ್ಷತೆ ವಹಿಸಿದ್ದರು. ಉದ್ಘಾಟನೆ ನೆರವೇರಿಸಬೇಕಿದ್ದ ಸಯ್ಯಿದುಲ್ ಉಲಮಾ ಸಯ್ಯದ್ ಜಿಫ್ರಿ ಮುತ್ತುಕೊಯ ತಂಙಳ್ ಗೈರಾಗಿದ್ದರಿಂದ ತಲಂಗರ ಖತೀಬ್ ಅಬ್ದುಲ್ ಮಜೀದ್ ಬಾಖವಿ ಉದ್ಘಾಟಿಸಿದರು.

ಪ್ರಭಾಷಣ ನಡೆಸಿದ ಮುಕ್ವೆ ರಹ್ಮಾನಿಯಾ ಜುಮಾ ಮಸೀದಿಯ ಖತೀಬ್ ಇರ್ಶಾದ್ ಫೈಝಿ ಪಾಲ್ತಾಡ್ ಮಾತನಾಡಿ, ಕೆಡುಕಿನ ಕ್ಷೇತ್ರಗಳಿಂದ ದೂರವುಳಿಯುವ ಮೂಲಕ ಒಳಿತಿನ ಕ್ಷೇತ್ರಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು, ಅನಾಚಾರ, ಅತ್ಯಾಚಾರ, ಕೆಟ್ಟ ಆಚಾರ ವಿಚಾರಗಳು ಹೆಚ್ಚುತ್ತಿರುವುದು ಅಂತ್ಯ ದಿನದ ಲಕ್ಷಣವಾಗಿದೆ ಎಂದು ಇರ್ಶಾದ್ ಫೈಝಿ ಹೇಳಿದರು.

ಮುಕ್ವೆ ಮದ್ರಸದ ಸದರ್ ಮುಅಲ್ಲಿಂ ಅಬ್ದುಲ್ ಜಲೀಲ್ ದಾರಿಮಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಹಾಫಿಲ್ ಬಿಲಾಲ್ ಮುಕ್ವೆ ಖಿರಾಅತ್ ಪಠಿಸಿದರು.

ವೇದಿಕೆಯಲ್ಲಿ ಮುಕ್ವೆ ಮಸೀದಿಯ ಪ್ರ.ಕಾರ್ಯದರ್ಶಿ ಹಾಜಿ ಮುಹಮ್ಮದ್ ಕುಂಞ ದರ್ಖಾಸ್, ಮುಕ್ವೆ ಎಚ್.ಐ.ಎಂ ಮುಅಲ್ಲಿಂಗಳಾದ ಅಬ್ದುಲ್ಲ ಮುಸ್ಲಿಯಾರ್, ಮನ್ಸೂರ್ ಅಝರಿ, ಇಸಾಕ್ ಅರ್ಷದಿ, ಶರೀಫ್ ದಾರಿಮಿ, ಅಬ್ದುಲ್ ಮಾಜಿದ್ ಹಝತ್, ಯೂಸುಫ್ ಸಾಹಿರ್ ಯಮಾನಿ, ನೆರಿಗೇರಿ ಎಚ್.ಐ.ಎಂ ಮುಅಲ್ಲಿಂ ರಝಾಕ್ ದಾರಿಮಿ, ಮುಕ್ವೆ ಆರ್‌ಜೆಎಂ ಮ್ಯಾನೇಜರ್ ರಿಯಾಝ್ ಫೈಝಿ ಪಟ್ಟೆ, ಆರಿಫ್ ಇಂಜಿನಿಯರ್ ಬೆಳ್ಳಾರೆ, ಮುಕ್ವೆ ಮಸೀದಿ ಕೋಶಾಧಿಕಾರಿ ಉಮ್ಮರ್ ಹಾಜಿ ಪಟ್ಟೆ, ಮುಕ್ವೆ ಮಸೀದಿ ಮಾಜಿ ಅಧ್ಯಕ್ಷ ಹಸೈನಾರ್ ಹಾಜಿ, ಕೆ.ಎಂ ಬಾವ ಹಾಜಿ ಕೂರ್ನಡ್ಕ, ಎಸ್ಕೆಎಸ್ಸೆಸ್ಸೆಫ್ ಮುಕ್ವೆ ಶಾಖೆಯ ಅಧ್ಯಕ್ಷ ಮುಹಮ್ಮದ್ ರಫೀಕ್ ಉಪಸ್ಥಿತರಿದ್ದರು. ಶುಹೈಬ್‌ ಸವಣೂರು ಕಾರ್ಯಕ್ರಮ ನಿರೂಪಿಸಿದರು

Leave a Reply

Your email address will not be published. Required fields are marked *

Join WhatsApp Group
error: Content is protected !!