
ಇತ್ತೀಚೆಗೆ ಯುವ ಜನತೆ ರೀಲ್ಸ್ ಗಾಗಿ ಎನು ಬೇಕಾದರೂ ಮಾಡುತ್ತಾರೆ, ಇದೀಗ ಹೈದರಾಬಾದ್‌ನ ಬಂಜಾರಾ ಹಿಲ್ಸ್‌ನ ವ್ಯಕ್ತಿಯೋರ್ವ ತೆರೆದ ಜೀಪಿನಲ್ಲಿ ಏರ್ ಗನ್ ಹಿಡಿದುಕೊಂಡು ಮೆಹಬೂಬಾ ಹಾಡಿಗೆ ರೀಲ್ಸ್ ಮಾಡಿ ಪೇಚಿಗೆ ಸಿಲುಕಿದ್ದಾನೆ.
21 ವರ್ಷದ ಅಫೀಜುದ್ದೀನ್ ಎಂಬ ಯುವಕ ತೆರೆದ ಜೀಪಿನಲ್ಲಿ ಡ್ಯಾಶ್‌ಬೋರ್ಡ್‌ನಲ್ಲಿ ಏರ್ ರೈಫಲ್ ಹಿಡಿದುಕೊಂಡು, 1975 ರ ಶೋಲೆ ಚಿತ್ರದ ‘ಮೆಹಬೂಬಾ ಮೆಹಬೂಬಾ’ ಹಾಡನ್ನು ಹಿನ್ನೆಲೆಯಲ್ಲಿ ನುಡಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಈಗ ವೈರಲ್ ಆಗಿದೆ.
ಹೈದರಾಬಾದ್‌ನ ಬಂಜಾರಾ ಹಿಲ್ಸ್‌ನ ರಸ್ತೆ ಸಂಖ್ಯೆ 1 ರಲ್ಲಿರುವ ಸರ್ವಿ ಹೋಟೆಲ್ ಬಳಿ ಅಫೀಜುದ್ದೀನ್ ಹಾಗೂ ಆತನ ಸಹಚರ ಜೀಪಿನಲ್ಲಿ ನಡುರಸ್ತೆಯಲ್ಲಿ ರೀಲ್ಸ್ ಮಾಡಿ ಶೋಕಿ ಮಾಡಿದ್ದು, ಸಾರ್ವಜನಿಕರಿಗೆ ಕಿರಿ ಕಿರಿ ಸೃಷ್ಟಿಸಿದಕ್ಕಾಗಿ ಇಬ್ಬರ ವಿರುದ್ಧ ದೂರು ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ಸದ್ಯ ಇಬ್ಬರನ್ನೂ ಪೊಲೀಸರು ಬಂಧಿಸಿದ್ದು, ರೀಲ್ಸ್ ಗಾಗಿ ಉಪಯೋಗಿಸಿದ ಜೀಪ್ ಹಾಗೂ ಏರ್ ಗನ್ ಅನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಯು ವೃತ್ತಿಯಲ್ಲಿ ವಿಡಿಯೋಗ್ರಾಫರ್ ಆಗಿದ್ದು, ಆಗಾಗ್ಗೆ ರೀಲ್‌ಗಳನ್ನು ತಯಾರಿಸಲು ಏರ್ ಗನ್ ಬಳಸುತ್ತಾನೆ ಎಂದು ಪೊಲೀಸರು ತಿಳಿಸಿದ್ದಾರೆ.






