ಪುತ್ತೂರು: ರಸ್ತೆ ಅಗಲೀಕರಣ ಕಾಮಗಾರಿ ನಿಮಿತ್ತ 110/33/11 ಕೆವಿ ಪುತ್ತೂರು ವಿದ್ಯುತ್ ಕೇಂದ್ರದಿಂದ ಹೊರಡುವ ಕಾಂಚನ, ಉಪ್ಪಿನಂಗಡಿ ಎಕ್ಸ್‌ಪ್ರೆಸ್‌ ಮತ್ತು ವಾಟರ್ ಸಪ್ಪೆ ಫೀಡರ್ ನಲ್ಲಿ ಏ.5ರಂದು ಪೂರ್ವಾಹ್ನ 10 ಗಂಟೆಯಿಂದ ಅಪರಾಹ್ನ 5.30ರವರೆಗೆ ವಿದ್ಯುತ್‌ ನಿಲುಗಡೆ ಮಾಡಲಾಗುವುದು.

ಆದುದರಿಂದ 110/33/11 ಕೆವಿ ಪುತ್ತೂರು ವಿದ್ಯುತ್‌ ಕೇಂದ್ರದಿಂದ ಹೊರಡುವ ಮೇಲೆ ತಿಳಿಸಿದ ಫೀಡರ್‌ನಿಂದ ವಿದ್ಯುತ್‌ ಸರಬರಾಜಾಗುವ ಉಪ್ಪಿನಂಗಡಿ, ಬಜತ್ತೂರು, ಕೊಲ, ದಾರಂದಕುಕ್ಕು, ಸೇಡಿಯಾಪು ಮತ್ತು ಕೋಡಿಂಬಾಡಿ ಪರಿಸರದ ವಿದ್ಯುತ್‌ ಬಳಕೆದಾರರು ಗಮನಿಸಿ ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ತುರ್ತು ಕಾರ್ಯ ನಿಮಿತ್ತ 110/33/11 ໖ ಪುತ್ತೂರು ವಿದ್ಯುತ್‌ ಕೇಂದ್ರದಿಂದ ಹೊರಡುವ ರಾಮಕುಂಜ, ಉಪ್ಪಿನಂಗಡಿ ಓಲ್ಡ್, ಕೆಮ್ಮಾಯಿ (ಇಂಡಸ್ಟ್ರಿಯಲ್‌) ಫೀಡರ್ ನಲ್ಲಿ ಏ.5ರಂದು ಪೂರ್ವಾಹ್ನ 10 ರಿಂದ ಅಪರಾಹ್ನ 4ರವರೆಗೆ ವಿದ್ಯುತ್‌ ನಿಲುಗಡೆ ಮಾಡಲಾಗುವುದು.

ಆದುದರಿಂದ 110/33/11 ಕೆವಿ ಪುತ್ತೂರು ವಿದ್ಯುತ್‌ ಕೇಂದ್ರದಿಂದ ಹೊರಡುವ ಮೇಲೆ ತಿಳಿಸಿದ ಫೀಡರ್‌ನಿಂದ ವಿದ್ಯುತ್‌ ಸರಬರಾಜಾಗುವ ರಾಮಕುಂಜ, ಹಳೆನೇರಂಕಿ, ಹಿರೇಬಂಡಾಡಿ, ನೆಕ್ಕಿಲಾಡಿ, ದಾರಂದಕುಕ್ಕು, ಸೇಡಿಯಾಪು, ಕೆಮ್ಮಾಯಿ, ಕೇಪುಳು, ಬನ್ನೂರು, ಸಾಲ್ಮರ, ಸೂತ್ರಬೆಟ್ಟು, ನೆಕ್ಕರೆ, ಚಿಕ್ಕಮುಡ್ಯೂರು, ವಾಟರ್ ಸಪ್ಪೆ ಮತ್ತು ಕೋಡಿಂಬಾಡಿ ಪರಿಸರದ ವಿದ್ಯುತ್‌ ಬಳಕೆದಾರರು ಗಮನಿಸಿ ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!