
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಲವಾರು ದೇಶಗಳ ಮೇಲೆ ವ್ಯಾಪಕ ಆಮದು ಸುಂಕಗಳನ್ನು ವಿಧಿಸಿದನಂತರ, ಚೀನಾ ಸರ್ಕಾರವು ಎಪ್ರಿಲ್ 10 ರಿಂದ ಎಲ್ಲಾ ಅಮೆರಿಕದ ಆಮದುಗಳ ಮೇಲೆ 34% ಸುಂಕವನ್ನುವಿಧಿಸುವ ಮೂಲಕ ಪ್ರತೀಕಾರ ತೀರಿಸಿಕೊಂಡಿದೆ
ಟ್ರಂಪ್ ಅವರು ಎಲ್ಲಾ ರಾಷ್ಟ್ರಗಳ ಮೇಲೆ 10% ಆಮದು ಸುಂಕವನ್ನು ಮತ್ತು ಚೀನಾ ಹಾಗೂ ಯುರೋಪಿಯನ್ ಯೂನಿಯನ್ ಸೇರಿದಂತೆ ಪ್ರಮುಖ ವ್ಯಾಪಾರ ಪಾಲುದಾರರನ್ನು ಒಳಗೊಂಡ ಹಲವಾರು ನಿರ್ದಿಷ್ಟ ದೇಶಗಳ ಆಮದುಗಳ ಮೇಲೆ ಇನ್ನೂ ದೊಡ್ಡ ಪ್ರಮಾಣದ ಶುಲ್ಕಗಳನ್ನು ವಿಧಿಸಿದ್ದರು.
ಟ್ರಂಪ್ ಅವರ ‘ಲಿಬರೇಷನ್ ಆರ್ಮಿ’ ಎಂಬ ಈ ಕ್ರಮವು ಜಾಗತಿಕ ಮಾರುಕಟ್ಟೆಗಳಲ್ಲಿ ಆಘಾತವನ್ನುಂಟುಮಾಡಿತು.
ಟ್ರಂಪ್ ಕಳೆದ ತಿಂಗಳು ಚೀನಾದ ಮೇಲೆ ವಿಧಿಸಿದ್ದ 20% ದರದ ಮೇಲೆ ಹೆಚ್ಚುವರಿಯಾಗಿ 34% ಸುಂಕವನ್ನು ವಿಧಿಸಿದ್ದಾರೆ. ಇದರಿಂದಾಗಿ, ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯಿಂದ ಆಮದಾಗುವ ಸರಕುಗಳ ಮೇಲೆ ಟ್ರಂಪ್ ಆಡಳಿತವು ವಿಧಿಸಿದ ಒಟ್ಟು ಹೆಚ್ಚುವರಿ ಸುಂಕವು 54% ತಲುಪಿದೆ.






