


ಪ್ಯಾನ್ ಇಂಡಿಯಾದಲ್ಲಿ ಬಿಗ್ ಹಿಟ್ ಆಗಿ ಹತ್ತಾರು ದಾಖಲೆಗಳನ್ನು ಉಡೀಸ್ ಮಾಡಿದ ಅಲ್ಲು ಅರ್ಜುನ್ ಅವರ ‘ಪುಷ್ಪ-2’ ಕಿರುತೆರೆಯಲ್ಲಿ ಪ್ರಸಾರ ಕಾಣಲು ಸಿದ್ದವಾಗಿದೆ.
ಐಕಾನ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ‘ಪುಷ್ಪರಾಜ್’ ಆಗಿ ದೊಡ್ಡ ಸ್ಕ್ರೀನ್ ನಲ್ಲಿ ಅಬ್ಬರಿಸಿದ ‘ಪುಷ್ಪ-2’ ಬಾಕ್ಸಾಫೀಸ್ ನಲ್ಲಿ ಸಾವಿರ ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ 2024ರ ಅತೀ ಹೆಚ್ಚು ಗಳಿಕ ಕಂಡ ಚಿತ್ರವಾಗಿ ಹೊರಹೊಮ್ಮಿತು.
ಥಿಯೇಟರ್ ನಲ್ಲಿ ತಿಂಗಳುಗಟ್ಟಲೆ ಯಶಸ್ವಿಯಾಗಿ ಪ್ರದರ್ಶನ ಕಂಡ ನಂತರ ಓಟಿಟಿಯಲ್ಲೂ ದಾಖಲೆ ಬರೆದಿತ್ತು.
ಪ್ಯಾನ್ ಇಂಡಿಯಾದಲ್ಲಿ ಹಲವು ಭಾಷೆಯಲ್ಲಿ ಏಕಕಾಲದಲ್ಲಿ ರಿಲೀಸ್ ಆಗಿದ್ದ ‘ಪುಷ್ಪ-2’ ಕಿರುತೆರೆಯಲ್ಲೂ ಅದೇ ರೀತಿಯಲ್ಲಿ ಪ್ರಿಮಿಯರ್ ಆಗಲು ದಿನಾಂಕ ನಿಗದಿಯಾಗಿದೆ. ಆ ಮೂಲಕ ಭರ್ಜರಿ ಟಿಆರ್ ಪಿ ತಂದುಕೊಡಲು ಪ್ಲ್ಯಾನ್ ಹಾಕಿಕೊಂಡಿದೆ
ಕನ್ನಡ, ತಮಿಳು, ತೆಲುಗು ಸೇರಿದಂತೆ ಪ್ಯಾನ್ ಇಂಡಿಯಾದಲ್ಲಿನ ಭಾಷೆಯಲ್ಲಿ ಇದೇ ಏಪ್ರಿಲ್ 13 ರಂದು ‘ಪುಷ್ಪ-2’ ಟಿವಿಯಲ್ಲಿ ಪ್ರಿಮಿಯರ್ ಆಗಲಿದೆ. ವಿಶೇಷವೆಂದರೆ ಒಂದೇ ದಿನ ಒಂದೇ ಸಮಯದಲ್ಲಿ ವಿವಿಧ ವಾಹಿನಿಗಳಲ್ಲಿ ‘ಪುಷ್ಪ-2’ ಪ್ರಸಾರವಾಗಲಿದೆ.
ಓಟಿಟಿ ರಿಲೀಸ್ ವೇಳೆ ಭರ್ಜರಿ ಪ್ರಚಾರ ಮಾಡಿದ ಚಿತ್ರತಂಡ ಟಿವಿಯಲ್ಲಿನ ಪ್ರಿಮಿಯರ್ ಗಾಗಿಯೂ ವಿಶೇಷ ಜಾಹೀರಾತು ಮಾಡಿ ಪ್ರಚಾರ ಮಾಡಲಾಗುತ್ತಿದೆ.ಕಲರ್ಸ್ ಕನ್ನಡ ವಾಹಿನಿಯಲ್ಲಿ ಏಪ್ರಿಲ್ 13 ರ ಸಂಜೆ 7 ಗಂಟೆಗೆ ‘ಪುಷ್ಪ 2’ ಸಿನಿಮಾ ಕನ್ನಡದಲ್ಲಿ ಪ್ರಸಾರವಾಗಲಿದೆ. ತೆಲುಗಿನಲ್ಲಿ ‘ಪುಷ್ಪ 2’ ಸ್ಟಾರ್ ಮಾನಲ್ಲಿ ಪ್ರದರ್ಶನಗೊಳ್ಳಲಿದೆ. ಅದೇ ದಿನ ತಮಿಳು, ಮಲಯಾಳಂ, ಹಿಂದಿ ಭಾಷೆಗಳಲ್ಲಿಯೂ ಸಹ ‘ಪುಷ್ಪ 2’ ಸಿನಿಮಾ ಟಿವಿಯಲ್ಲಿ ಪ್ರಸಾರವಾಗಲಿದೆ.
ಸುಕುಮಾರ್ ನಿರ್ದೇಶನದ ‘ಪುಷ್ಪ-2’ ನಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ,ಫಾಸಿಲ್, ಜಗಪತಿ ಬಾಬು, ಸುನಿಲ್, ಅನುಪಮಾ ಮುಂತಾದವರು ನಟಿಸಿದ್ದಾರೆ.
