
ತೆಂಕಪೇಟೆಯ ಹೋಟೆಲ್ ವೊಂದರ ಮಾಲಕ ಅಜಿತ್ ಕುಮಾರ್(48) ನಾಪತ್ತೆಯಾಗಿದ್ದು, ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತೆಂಕಪೇಟೆಯಲ್ಲಿ ಶ್ರೀರಾಮ ಭವನ ಎಂಬ ಹೆಸರಿನ ಹೋಟೆಲ್ ವ್ಯವಹಾರವನ್ನು ನಡೆಸುತ್ತಿದ್ದರು. ಎ.12ರಂದು ಸಂಜೆ ತಿಂಡಿಯನ್ನು ಪಾರ್ಸೆಲ್ ನೀಡಲೆಂದು ಸ್ಕೂಟರ್‌ನಲ್ಲಿ ಹೋದವರು ವಾಪಾಸು ಬಂದಿರಲಿಲ್ಲ.
ಪತ್ನಿ ಅವರ ಮೊಬೈಲ್‌ಗೆ ಕರೆ ಮಾಡಿದಾಗ ಸ್ವಿಚ್ ಆಫ್ ಬಂದಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.






