ನಿರೀಕ್ಷೆಯಂತೆಯೇ ರಾಜ್ಯ ಸರ್ಕಾರ ಹಾಗೂ ಶಿಕ್ಷಣ ಇಲಾಖೆ, ಪೋಷಕರಿಗೆ ಗುಡ್‌ ನ್ಯೂಸ್‌ ನೀಡಿದೆ. ಅದರ ಪ್ರಕಾರ 5 ವರ್ಷ 5 ತಿಂಗಳಾಗಿರುವ ಮಕ್ಕಳಿಗೆ ಇನ್ನು 1 ನೇ ತರಗತಿಗೆ ದಾಖಲಾತಿ ಮಾಡಲು ಸಾಧ್ಯವಾಗಲಿದೆ. ಇದಕ್ಕೂ ಮುನ್ನ ರಾಜ್ಯ ಪಠ್ಯಕ್ರಮದಲ್ಲಿ 1ನೇ ತರಗತಿಗೆ ಮಕ್ಕಳನ್ನು ದಾಖಲಾತಿ ಮಾಡಿಕೊಳ್ಳಲು 6 ವರ್ಷ ಆಗಿರಬೇಕಾಗಿರುವುದು ಕಡ್ಡಾಯವಾಗಿತ್ತು.

ಸಮಗ್ರ ಶಿಕ್ಷಣ ಇಲಾಖೆಯಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ನಡೆದ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ್ದಾರೆ. ಅದರೊಂದಿಗೆ ಶಾಲಾ ಮಕ್ಕಳ ವಯೋಮಿತಿ ಗೊಂದಲಕ್ಕೆ ತೆರೆ ಬಿದ್ದಂತಾಗಿದೆ.

1 ನೇ ತರಗತಿಗೆ ವಯೋಮಿತಿ ಸಡಲಿಕೆ ‌ಮಾಡುವ ಸಾಧ್ಯತೆ ಬಗ್ಗೆ ಸಾಕಷ್ಟು ವರದಿಗಳು ಬಂದಿದ್ದವು. ಈಗಾಗಲೇ ಎಸ್‌ಇಪಿ ಸಮಿತಿಯಿಂದ ಸರ್ಕಾರಕ್ಕೆ ವರದಿ ಕೂಡ ಸಲ್ಲಿಕೆಯಾಗಿತ್ತು. 1ನೇ ತರಗತಿಗೆ 6 ವರ್ಷ ಕಡ್ಡಾಯ ನಿಯಮದಿಂದ ವಾರ್ಷಿಕವಾಗಿ 5 ಲಕ್ಷ ಮಂದಿ ಮಕ್ಕಳಿಗೆ ಶಾಲಾ ದಾಖಲಾತಿ ಮಾಡುವ ವೇಳೆ ಸಮಸ್ಯೆ ಆಗುತ್ತಿತ್ತು ಎನ್ನಲಾಗುದೆ.

ಇದೀಗ SEP ಸಮಿತಿ 5 ವರ್ಷ 10 ತಿಂಗಳಿಗೆ ಶಿಫಾರಸ್ಸು ಮಾಡಿ ವರದಿ ಸಲ್ಲಿಕೆ ಮಾಡಿತ್ತು. ಆದರೆ, ಶಿಕ್ಷಣ ಇಲಾಖೆ 5 ವರ್ಷ 5 ತಿಂಗಳು ಆಗಿರುವ ಮಕ್ಕಳಿಗೂ 1ನೇ ತರಗತಿಗೆ ದಾಖಲಾತಿ ಮಾಡಿಕೊಳ್ಳಲು ಅವಕಾಶ ನೀಡಿದೆ

ಈ ವರ್ಷಕ್ಕೆ ಮಾತ್ರ ಅನ್ವಯ: 1 ನೇ ತರಗತಿಗೆ ಸೇರಿಸಲು ಜೂನ್ 1 ಕ್ಕೆ 6 ವರ್ಷ ಕಡ್ಡಾಯ. ಪೋಷಕರು ಮಕ್ಕಳ‌ ಮೇಲೆ ಒತ್ತಡ ಹಾಕಬಾರದು. ಪೋಷಕರು ವಯಸ್ಸಿನ ಗೊಂದಲಕ್ಕೆ ಸಿಲುಕಿದ್ದಾರೆ. ದೇಶದಲ್ಲಿ ಎಲ್ಲಾ ಕಡೆ ಕೂಡ 6 ವರ್ಷ ಕಡ್ಡಾಯ ಮಾಡಲಾಗಿದೆ. ಈ ವರ್ಷಕ್ಕೆ ಮಾತ್ರ ವಯಸ್ಸು ಸಡಿಲಿಕೆ ‌ಮಾಡಿದ್ದೇವೆ. ಈ ವರ್ಷಕ್ಕೆ ‌ಮಾತ್ರ ವಯೋಮಿತಿ ಸಡಲಿಕೆ ಮಾತ್ರ ಅನ್ವಯವಾಗಲಿದೆ. ಮುಂದಿನ ವರ್ಷದಿಂದ 6 ವರ್ಷ ಕಡ್ಡಾಯ ಇರಲಿದೆ. 5 ವರ್ಷ 5 ತಿಂಗಳು ಆಗಿರಬೇಕು ಇದು ಈ ವರ್ಷಕ್ಕೆ ಮಾತ್ರ ಅನ್ವಯ ಎಂದು ಮಾಹಿತಿ ನೀಡಿದ್ದಾರೆ.

ವಯಸ್ಸಿನ ಮಿತಿ ಬಗ್ಗೆ ಎಲ್ಲರೂ ಒತ್ತಡವನ್ನ ನೀಡುತ್ತಿದ್ದರು. ಪೋಷಕರಿಗೆ ಮನವಿಯನ್ನ ಮಾಡುತ್ತೇನೆ. ಮಕ್ಕಳನ್ನ ಮಿಷನ್ ತರ ಓದಿಸಬೇಡಿ.. ಇದರಿಂದ ಮಕ್ಕಳಲ್ಲಿ ಒತ್ತಡ ಹೆಚ್ಚಾಗುತ್ತೆ. ಪೋಷಕರು ಗೊಂದಲದಲ್ಲಿದ್ದಾರೆ. ದೇಶದಲ್ಲಿ ಎಲ್ಲಕಡೆ ಆರು ವರ್ಷವೇ ಇದೆ. ನಮ್ಮದು ಎಸ್‌ಇಪಿ ಇರೋದರಿಂದ ಅವರ ಹತ್ರ ಮಾತನಾಡಿದಾಗ, ಮಕ್ಕಳು ಕಡಿಮೆ ವಯಸ್ಸಿನಲ್ಲೇ ಸೇರಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದರು ಎಂದಿದ್ದಾರೆ.





Leave a Reply

Your email address will not be published. Required fields are marked *

Join WhatsApp Group
error: Content is protected !!