ಪುತ್ತೂರು: ನಗರದ ಪಡ್ಡಾಯೂರು ಪ್ರದೇಶದಲ್ಲಿ ಚರಂಡಿಗಳಲ್ಲಿ ಪ್ಲಾಸ್ಟಿಕ್, ಕಸ ಹಾಗೂ ಹೂಳು ತುಂಬಿಕೊಂಡ ಪರಿಣಾಮ ಮಳೆ ನೀರು ಸರಾಗವಾಗಿ ಹರಿಯದೆ ರಸ್ತೆಗೆ ಹರಿಯುತ್ತಿರುವ ಸಮಸ್ಯೆ ಉಂಟಾಗಿತ್ತು. ಈ ಬಗ್ಗೆ ಲೋಕೇಶ್ ಗೌಡ ಪಡ್ಡಾಯೂರು ಅವರು ಶಾಸಕ ಅಶೋಕ್ ಕುಮಾರ್ ರೈ ಅವರ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ನಗರಸಭೆ ವತಿಯಿಂದ ಚರಂಡಿ ಸ್ವಚ್ಛತಾ ಕಾರ್ಯ ಆರಂಭಿಸಲಾಯಿತು.
ಯಂತ್ರದ ಸಹಾಯದಿಂದ ಚರಂಡಿಗಳಲ್ಲಿದ್ದ ಕಸ ಹಾಗೂ ಹೂಳನ್ನು ತೆರವುಗೊಳಿಸಿ ಸ್ವಚ್ಛತೆ ನಡೆಸಲಾಯಿತು. ಇದರಿಂದ ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ.
ಸ್ವಚ್ಛತಾ ಕಾರ್ಯಕ್ಕೆ ಸಹಕಾರ ನೀಡಿದ ಶಾಸಕ ಅಶೋಕ್ ಕುಮಾರ್ ರೈ ಹಾಗೂ ಲೋಕೇಶ್ ಗೌಡ ಪಡ್ಡಾಯೂರು ಅವರಿಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ರಾಜೇಶ್ ಪಡ್ಡಾಯೂರು, ಹರೀಶ್ ಬಂಗೇರ, ದಿನೇಶ್ ನೆಲಪಾಲ್, ಯತೀಶ್ ನೆಲಪಾಲ್, ತೇಜಸ್ ಪಡ್ಡಾಯೂರು, ಪ್ರದೀಪ್ ಪಡ್ಡಾಯೂರು ಸೇರಿದಂತೆ ಟೀಮ್ ಲೋಕೇಶ್ ಪಡ್ಡಾಯೂರು ಸದಸ್ಯರು ಉಪಸ್ಥಿತರಿದ್ದರು.







