ಪ ಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ ಮಂಜುನಾಥ್ ರಾವ್ ಅವರ ಪತ್ನಿ ಪಲ್ಲವಿ ತಮ್ಮ ಪತಿಯ ಕೊಲೆಗೆ ಸಂಬಂಧಿಸಿದಂತೆ ಪ್ರಮುಖ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.

ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನ ಬೈಸಾರನ್ ಪ್ರದೇಶದಲ್ಲಿ ನಡೆದ ದಾಳಿಯಲ್ಲಿ 26 ಜನರು ಮೃತಪಟ್ಟಿದ್ದರು.

ಪಲ್ಲವಿ ಅವರು, ಭಯೋತ್ಪಾದಕರು ತಮ್ಮ ಪತಿ ಮಂಜುನಾಥ್ ಅವರನ್ನು ಕೊಲ್ಲುವ ಮೊದಲು ಅವರ ಧರ್ಮದ ಬಗ್ಗೆ ಪ್ರಶ್ನಿಸಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಮೊದಲು ರಾಷ್ಟ್ರೀಯ ಮಾಧ್ಯಮಗಳಲ್ಲಿ ನನ್ನ ಪತಿಯ ಧರ್ಮವನ್ನು ಕೇಳಿ ಬಳಿಕ ಕೊಂದರು ಎಂದು ಹೇಳಿಕೆಗಳನ್ನು ನೀಡಿದ್ದ ಪಲ್ಲವಿ ಇದೀಗ ಅಂತಹ ಪ್ರಶ್ನೆಯನ್ನು ಕೇಳಲಿಲ್ಲ ಎನ್ನುತ್ತಿರುವುದು ಸದ್ಯ ಭಾರೀ ಚರ್ಚೆಗೆ ಕಾರಣವಾಗುತ್ತಿದೆ.

ಆದರೆ, ಇತರ ಪ್ರವಾಸಿಗರ ಗುರುತನ್ನು ಪರಿಶೀಲಿಸಿ, ಧರ್ಮದ ಬಗ್ಗೆ ಕೇಳಿದ್ದರು ಎಂದು ಅಲ್ಲಿನವರು ತಿಳಿಸಿದರು ಎಂದು ಹೇಳಿದ್ದಾರೆ. ಈ ದಾಳಿಯ ಸಂದರ್ಭದಲ್ಲಿ ಪಲ್ಲವಿ ಮತ್ತು ಅವರ 18 ವರ್ಷದ ಮಗ ಭಯೋತ್ಪಾದಕರನ್ನು ಎದುರಿಸಿ, ಮಂಜುನಾಥ್ ಜೊತೆಗೆ ತಾವೂ ಸಾಯಲು ಸಿದ್ಧ ಎಂದು ಕೇಳಿಕೊಂಡಿದ್ದರು. ಆದರೆ, ಭಯೋತ್ಪಾದಕರು ಕೇವಲ ಪುರುಷರನ್ನೇ ಗುರಿಯಾಗಿಸಿದ್ದರು ಎಂದು ಪಲ್ಲವಿ ಹೇಳಿದ್ದಾರೆ.ಸಾಕು ಸರ್‌, ಇನ್ನು ನಾನು ಏನೂ ಮಾತನಾಡಲ್ಲ. ಈಗಾಗಲೇ ಹಲವಾರು ನೆಗೆಟಿವ್‌ ಕಾಮೆಂಟ್ಸ್‌ಗಳು ವಿನಾಕಾರಣ ಬಂದಿವೆ ಎಂದು ಬೇಸರ ವ್ಯಕ್ತಪಡಿಸಿದರು. ಈ ಘಟನೆಯು ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದ್ದು, ರಾಷ್ಟ್ರೀಯ ತನಿಖಾ ಸಂಸ್ಥೆ (NIA) ತಂಡವು ಪಲ್ಲವಿ ಕುಟುಂಬವನ್ನು ಭೇಟಿಯಾಗಲಿದೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!