
ಕೇಂದ್ರ ಸರ್ಕಾರವು ಒಂದು ರಾಜ್ಯ ಒಂದು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ನೀತಿಗೆ ಹಸಿರು ನಿಶಾನೆ ತೋರಿದ್ದು, i ನೀತಿಯ ಅನ್ವಯ ಮೇ 1 ರಿಂದ ಅಂದರೆ ಇಂದಿನಿಂದ ದೇಶದಲ್ಲಿ ಬ್ಯಾಂಕ್ ವ್ಯವಹಾರಕ್ಕೆ ಸಂಬಂಧಪಟ್ಟಂತೆ ಸಾಕಷ್ಟು ಬದಲಾವಣೆಗಳು ಜಾರಿಗೆ ಬರಲಿದೆ.
ಮೇ 1 ರಿಂದ 43 ಆರ್‌ಆರ್‌ಬಿ ಬ್ಯಾಂಕುಗಳಲ್ಲಿ 15 ವಿಲೀನಗೊಳ್ಳಲಿವೆ. ವಿಲೀನ ಪ್ರಕ್ರಿಯೆಯಿಂದಾಗಿ ದೇಶದಲ್ಲಿನ ಆರ್‌ಆರ್‌ಬಿ ಬ್ಯಾಂಕ್‌ಗಳ ಸಂಖ್ಯೆ 43 ರಿಂದ 28ಕ್ಕೆ ಇಳಿಕೆಯಾಗಲಿದೆ.
ಇನ್ನು ಈ ನೀತಿಯಿಂದಾಗಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಎಟಿಎಂ ವಹಿವಾಟಿಗೆ ಸಂಬಂಧಿಸಿದಂತೆ ಕೆಲವು ನಿಯಮಗಳು ಜಾರಿಗೆ ಬಂದಿದೆ. ಅದರಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ಇತರ ಬ್ಯಾಂಕುಗಳು ಎಟಿಎಂ ವಹಿವಾಟಿಗೆ ಹೊಸ ಶುಲ್ಕ ವಿಧಿಸುವ ನಿಯಮವನ್ನು ಇಂದಿನಿನಿಂದ ಅನುಷ್ಠಾನಗೊಳಿಸಲಿವೆ.
ಆರ್ ಬಿಐ ಮಾರ್ಗಸೂಚಿಯ ಅನ್ವಯ, ಎಟಿಎಂ ವಹಿವಾಟಿನಲ್ಲಿ ಉಚಿತ ಮಿತಿಯನ್ನು ಮೀರಿದ ನಂತರ ಪ್ರತಿ ವಹಿವಾಟಿಗೆ 23 ರೂಪಾಯಿ ಜಿಎಸ್ ಟಿ ಶುಲ್ಕ ಹೆಚ್ಚಿಸಲಾಗಿದೆ. ಈ ಹಿಂದೆ ಹೆಚ್ಚುವರಿ ವಹಿವಾಟಿಗೆ 21 ರೂಪಾಯಿ ಇತ್ತು..
ನಿಮ್ಮ ಬ್ಯಾಂಕ್‌ನ ATM ನಿಂದ ತಿಂಗಳಿಗೆ 5 ಉಚಿತ ವಹಿವಾಟುಗಳು ಲಭ್ಯವಿರುತ್ತವೆ. ಮೆಟ್ರೋ ನಗರಗಳಲ್ಲಿ ಇತರ ಬ್ಯಾಂಕ್‌ಗಳ ATM ನಿಂದ 3 ಉಚಿತ ವಹಿವಾಟುಗಳು ಮತ್ತು ಮೆಟ್ರೋ ಅಲ್ಲದ ನಗರಗಳಲ್ಲಿ 5 ಉಚಿತ ವಹಿವಾಟುಗಳ ಸೌಲಭ್ಯವನ್ನು ಒದಗಿಸಲಾಗುವುದು. ಆದರೆ, ಇದರ ನಂತರ ಪ್ರತಿ ವಹಿವಾಟಿಗೆ ಗ್ರಾಹಕರು ಹೆಚ್ಚಿನ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ಹೊಸ ನಿಯಮಗಳ ಪ್ರಕಾರ, ಉಚಿತ ವಹಿವಾಟಿನ ಮಿತಿಯನ್ನು ಮೀರಿದ ನಂತರ 1 ಮೇ ರಿಂದ ಪ್ರತಿ ATM ವಹಿವಾಟಿಗೆ ಗ್ರಾಹಕರು 23 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ಪ್ರಸ್ತುತ ಈ ಶುಲ್ಕ 21 ರೂಪಾಯಿಗಳಾಗಿದೆ. ಅಂದರೆ, ಪ್ರತಿ ಹೆಚ್ಚುವರಿ ವಹಿವಾಟಿಗೆ 2 ರೂಪಾಯಿಗಳ ಹೆಚ್ಚಿನ ಶುಲ್ಕವನ್ನು ಪಾವತಿಸಬೇಕಾಗುತ್ತದೆ.






