ಸುಹಾಸ್‌ ಶೆಟ್ಟಿ ಹ*ತ್ಯೆ ಪ್ರಕರಣ ಚರ್ಚೆಯಲ್ಲಿರುವಾಗಲೇ ಮತ್ತೊಬ್ಬ ಹಿಂದೂ ಕಾರ್ಯಕರ್ತನಿಗೆ ಜೀವ ಬೆದರಿಕೆಯನ್ನು ಹಾಕಲಾದ ಪೋಸ್ಟ್‌ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಹಿಂದೂ ಕಾರ್ಯಕರ್ತನಾಗಿರುವ ಭರತ್ ಕುಮ್ಡೇಲು ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮೂಲಕ ಜೀವ ಬೆದರಿಕೆಯನ್ನು ಹಾಕಲಾಗಿದೆ.

ʼಮೇ 5 ರಂದು ರಾತ್ರಿ 9:30ಕ್ಕೆ ನಿನ್ನ ಸ್ಥಳದಲ್ಲೇ ಬಂದು ಕೊ*ಲೆ ಮಾಡುತ್ತೇವೆʼ ಎಂದು ಜೀವ ಬೆದರಿಕೆವುಳ್ಳ ಬರಹವನ್ನು ಹಾಕಿ ಪೋಸ್ಟ್‌ ಮಾಡಲಾಗಿದೆ.

ಸುಹಾಸ್ ಶೆಟ್ಟಿ ಫೋಟೋಗೆ ರೈಟ್ ಮಾರ್ಕ್ ಹಾಕಿ ಪೋಸ್ಟ್ ಹಾಕಿದ್ದು, ಅದರ ಬದಿಯಲ್ಲಿ ಭರತ್‌ ಅವರ ಫೋಟೋವನ್ನು ಹಾಕಲಾಗಿದೆ.

ಭರತ್ ಕುಮ್ಡೇಲು ಎಸ್‌ಡಿಪಿಐ ಮುಖಂಡ ಅಶ್ರಫ್ ಕಲಾಯಿ ಹ*ತ್ಯೆಯ ಆರೋಪಿಯಾಗಿದ್ದಾರೆ.

ಭರತ್‌ ಮಾತ್ರವಲ್ಲದೆ, ಸುಹಾಸ್‌ ಹ*ತ್ಯೆ ಬಳಿಕ ಹಿಂದೂ ಮುಖಂಡ ಶರಣ್ ಪಂಪ್ ವೆಲ್ ಸೇರಿದಂತೆ 3 ರಿಂದ 5 ಮಂದಿ ಹಿಂದೂ ಮುಖಂಡರಿಗೆ ಜೀವ ಬೆದರಿಕೆಯನ್ನು ಹಾಕಲಾಗಿದೆ ಎನ್ನಲಾಗಿದೆ.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಜೀವ ಬೆದರಿಕೆಯ ಪೋಸ್ಟ್‌ ವೈರಲ್‌ ಆಗಿದ್ದು, ಪೊಲೀಸರು ಸಂಬಂಧ ಪಟ್ಟವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.‌

ಸುಹಾಸ್‌ ಶೆಟ್ಟಿ ಪ್ರಕರಣ ಸಂಬಂಧ ಪೊಲೀಸರು 8 ಮಂದಿ ಆರೋಪಿಗಳನ್ನು ಈಗಾಗಲೇ ಬಂಧಿಸಿದ್ದಾರೆ

Leave a Reply

Your email address will not be published. Required fields are marked *

Join WhatsApp Group
error: Content is protected !!