
ಪುತ್ತೂರು :ಪರಿಸರ ಸ್ವಚ್ಚತೆ ಕುರಿತು ಜಾಗೃತಿ ಕಾರ್ಯಕ್ರಮವು ಬೊಳ್ವಾರಿನ ಪ್ರಗತಿ ಆಸ್ಪತ್ರೆಯ ಅಂಗ ಸಂಸ್ಥೆಯಾದ ಪ್ರಗತಿ ಪ್ಯಾರಾಮೆಡಿಕಲ್ ಮತ್ತು ಅಲೈಡ್ ಹೆಲ್ತ್ ಸೈನ್ಸ್ ಕಾಲೇಜಿನಲ್ಲಿ
ಇತ್ತೀಚೆಗೆ ನಡೆಯಿತು. ಪ್ರಾಧ್ಯಪಕರಾದ ರಾಜೇಶ್ ಬೆಜ್ಜಂಗಳ ಅವರು ಸ್ವಚ್ಛತೆ ಕುರಿತಾಗಿ ಉಪನ್ಯಾಸ ನೀಡಿದರು. ಸಂಸ್ಥೆಯ ಆಡಳಿತಧಿಕಾರಿ ಪ್ರಿತಾ ಹೆಗ್ಡೆ ಅವರು ಸಭಾಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ಸಂಪನ್ಮೂಲ ಕೇಂದ್ರ ಪುತ್ತೂರು ಇದರ ಅಧ್ಯಕ್ಷ ರಫೀಕ್ ಮತ್ತು ವಿವೇಕಾನಂದ ಕಾನೂನು ಮಹಾವಿದ್ಯಾಲಯ ಪುತ್ತೂರು ಇದರ ಆಡಳಿತ ಮಂಡಳಿ ಸದಸ್ಯೆ ಪ್ರಮಿತಾ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡರು. ಉಪನ್ಯಾಸಕಿ ಮಾನಸ ಅವರು ಸ್ವಾಗತಿಸಿ ಸುಮಂಗಲ ಶೆಣೈ ವಂದಿಸಿದರು. ಉಪನ್ಯಾಸಕಿ ಚೈತ್ರ ಅವರು ಮುಖ್ಯ ಅತಿಥಿಯವರನ್ನು ಸಭೆಗೆ ಪರಿಚಯಿಸಿದರು. ಉಪನ್ಯಾಸಕರಾದ ದೀಕ್ಷಾ, ಭೂಮಿಕಾ, ವೃಂದಾ ಅವರು ಸಹಕರಿಸಿದರು ಉಪನ್ಯಾಸಕ ಶಶಿಕುಮಾರ್ ಅವರು ಕಾರ್ಯಕ್ರಮ ನಿರೂಪಿಸಿದರು.






