ಡಿಜಿಐಜಿಪಿ ಓಂಪ್ರಕಾಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ತನಿಖೆ ವೇಳೆ ಕೊಲೆಗೆ ಹಲವು ಕಾರಣಗಳು ಬಹಿರಂಗವಾಗಿದೆ. ಕೌಟುಂಬಿಕ ಕಾರಣಗಳಿಂದ ಪತಿಯನ್ನ ಪಲ್ಲವಿ ಕ್ರೂರವಾಗಿ ಕೊಂದಿದ್ದಾರೆ. ಸಿಸಿಬಿ ತನಿಖೆ‌ ವೇಳೆ ಕೊಲೆಗೆ ಪ್ರಮುಖ ಕಾರಣಗಳು ಪತ್ತೆಯಾಗಿದೆ.

ಗಂಡನ ಮೇಲೆ ಪತ್ನಿ ಪಲ್ಲವಿ ವಿಪರೀತ ಕೋಪ ಹೊಂದಿದ್ದರು. ಮಗಳಿಗೆ ಮದುವೆ ಮಾಡ್ತಿಲ್ಲ ಅಂತಾ ಕೋಪಗೊಂಡಿದ್ದರಂತೆ. ಅಲ್ಲದೇ ಅಷ್ಟು ದೊಡ್ಡ ಮನೆಯಲ್ಲಿದ್ರೂ ಪಲ್ಲವಿ ಕೈಯಲ್ಲಿ ಹಣ ಕೊಡ್ತಿರಲಿಲ್ಲ.. ಹಣದ ವ್ಯವಹಾರ ಎಲ್ಲಾ ತಾನೇ ನೋಡಿಕೊಳ್ತಿದ್ದರಂತೆ. ಅಲ್ಲದೇ ತನ್ನ ಸ್ವಂತ ಕುಟುಂಬಕ್ಕಿಂತಲೂ ತಂಗಿ ಕುಟುಂಬಕ್ಕೆ ಓಂಪ್ರಕಾಶ್ ಹೆಚ್ಚು ಒತ್ತು ಕೊಡ್ತಿದ್ದರಂತೆ. ಹೀಗಾಗಿ ತನ್ನ ಸ್ವಂತ ಕುಟುಂಬದ ಬಗ್ಗೆ ತಲೆ ಕೆಡಿಸಿಕೊಳ್ತಿಲ್ಲ ಅಂತಾ ಪಲ್ಲವಿ ಕೋಪಗೊಂಡಿದ್ದರು. ಈ ಎಲ್ಲಾ ಕಾರಣಗಳಿಂದ ಗಂಡನ ಮೇಲೆ ಪಲ್ಲವಿಗೆ ಧ್ವೇಷ ಹುಟ್ಟಿಸಿಕೊಂಡಿತು. ಅಲ್ಲದೇ ಎಲ್ಲಾ ವಿಚಾರಗಳಿಂದ ಮಾನಸಿಕವಾಗಿ ಡಿಸ್ಟರ್ಬ್ ಆಗಿದ್ಲು.. ಸಿಸಿಬಿ ಪೊಲೀಸರ ತನಿಖೆ ವೇಳೆ ಈ ಎಲ್ಲಾ ಕಾರಣಗಳಿಂದ ಕೊಲೆ ನಡೆದಿರೋದು ಪತ್ತೆಯಾಗಿದೆ.

ತನಿಖೆ ವೇಳೆ ಮಗಳು ಕೃತಿಯ ಬಗ್ಗೆ ಯಾವುದೇ ಸಾಕ್ಷ್ಯ ಇಲ್ಲ..ಕೊಲೆ‌ ವೇಳೆ ಮನೆಯಲ್ಲೇ ಇದ್ರೂ ಪ್ರಕರಣದಲ್ಲಿ ಭಾಗಿಯಾಗಿಲ್ಲ ಅನ್ನೋದು ಪತ್ತೆಯಾಗಿದೆ. ಸದ್ಯ ಪ್ರಕರಣ ತನಿಖೆಯನ್ನು ಸಿಸಿಬಿ ಪೊಲೀಸರು ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!