
ಪುತ್ತೂರು; ಪುತ್ತೂರಿನ ನಗರಸಭೆಗೆ ಇದೊಂದು ಮುಗಿಯದ ಗೋಳು. ಕಳೆದ 3 ವರ್ಷಗಳಿಂದ ಈ ಸಮಸ್ಯೆ ಕಾಡುತ್ತಲೇ ಇದೆ. ನಗರಸಭೆಯ ಇಂಜಿನಿಯರ್ ಗಳಿಗೆ ಇದೊಂದು ದೊಡ್ಡ ಸವಾಲು.. ಪರಿಹಾರವೇ ಇಲ್ಲದ ಈ ಸಮಸ್ಯೆಗೆ ಪರಿಹಾರ ಹೇಗೆ ಎಂದು ತಲೆ ತುರಿಸಿಕೊಳ್ಳುವ ಸ್ಥಿತಿ ನಗರಸಭೆಯ ಅಧಿಕಾರಿಗಳದ್ದಾಗಿದೆ. ಅಷ್ಟಕ್ಕೂ ಇದೇನು ಅಂತಹ ಬ್ರಹ್ಮಾಂಡ ಸಮಸ್ಯೆ ಅನ್ನುತ್ತೀರಾ..!
ಇಲ್ಲಿದೆ ನೋಡಿ ಸಮಸ್ಯೆ. ಇದು ಪುತ್ತೂರಿನ ಗೂಡಂಗಡಿಯೊಂದರ ಸಮಸ್ಯೆ. ಕಳೆದ 3 ವರ್ಷಗಳಲ್ಲಿ ಈ ಗೂಡಂಗಡಿ ಎಷ್ಟು ಸಲ ಮುಳುಗಡೆಯಾಗಿದೆಯೋ ಯಾರೂ ಲೆಕ್ಕ ಇಟ್ಟಿಲ್ಲ. ಆದರೆ ಮಳೆಗಾಲ ಬಂತೆAದರೆ ಸಾಕು. ಈ ಗೂಡಂಗಡಿ ಸುದ್ದಿಯಾಗುತ್ತದೆ. ಗೂಡಂಗಡಿ ಮುಳುಗಡೆ ಎಂದು ಮಾದ್ಯಮಗಳು ಸದಾ ಪ್ರಚಾರ ಮಾಡುತ್ತವೆ. ಆದರೆ ಪಾಪ ನಗರಸಭೆಯ ಅಧಿಕಾರಿಗಳಿಗೆ ಈ ಗೂಡಂಗಡಿಗೊAದು ಶಾಶ್ವತ ಪರಿಹಾರ ಮಾಡಲು ಈ ತನಕ ಸಾಧ್ಯವಾಗಿಲ್ಲ ಎಂಬುವುದೇ ದೊಡ್ಡ ಸಮಸ್ಯೆ..!
ಈ ಜಗತ್ತಿನಲ್ಲಿ ಎಂತೆAಥಾ ಸಮಸ್ಯೆಗಳಿದ್ದರೂ ಪರಿಹಾರ ಕಂಡುಕೊಳ್ಳಲಾಗುತ್ತದೆ. ಆದರೆ ಪುತ್ತೂರು ನಗರಸಭೆಗೆ ಮಾತ್ರ ಇದು ಸಾಧ್ಯವಾಗಿಲ್ಲ. 3 ವರ್ಷಗಳಿಂದ ಸಂಶೋಧನೆ ಮಾಡಿದರೂ ಇಲ್ಲಿನ ಇಂಜಿನಿಯರ್ ಗಳಿಗೆ ಈ ತನಕ ಇದಕ್ಕೊಂದು ಮಾರ್ಗ ಸಿಕ್ಕಿಲ್ಲ. ಎಪಿಎಂಸಿ ರಸ್ತೆಯ ಬದಿಯಲ್ಲಿಯೇ ಇರುವ ಈ ಬಡ ವ್ಯಕ್ತಿಯ ಗೂಡಂಗಡಿ ಮುಳುಗಡೆಯಾಗದಂತೆ ಶಾಶ್ವತ ಪರಿಹಾರ ಕಂಡುಹುಡುಕಿ ಕೊಟ್ಟವರಿಗೆ `ಬಹುಮಾನ’ ಘೋಷಣೆ ಮಾಡುವ ಸ್ಥಿತಿಯಲ್ಲಿದೆಯಂತೆ ನಗರಸಭೆ ಎಂಬ ಸುದ್ದಿ ಸತ್ಯವೋ ಸುಳ್ಳೋ ಗೊತ್ತಿಲ್ಲ. ಆದರೆ ಸ್ಥಿತಿ ಮಾತ್ರ ಹಾಗೇ ಇದೆ. ಒಂದು ವೇಳೆ ನಗರಸಭೆಯಿಂದ ಇಂತಹ ಬಹುಮಾನದ ಘೋಷಣೆಯಾದರೆ ನೀವು ಕೂಡಾ ಟ್ರೆöÊ ಮಾಡಬಹುದು. ರೆಡಿಯಾಗಿರಿ…!






