ರಾತ್ರಿ ವೇಳೆ ಕೃಷಿ ತೋಟಕ್ಕೆ ಲಗ್ಗೆ ಇಟ್ಟು ಕೃಷಿ ಹಾನಿ ಮಾಡುತ್ತಿದ್ದ ಕಾಡಾನೆ ಹಿಂಡು ಜನರ ಕಣ್ಣಿಗೆ ಬಿದ್ದಿದ್ದು, ಕಾಡಾನೆ ಹಿಂಡು ಸುಳ್ಯ ಸಮೀಪ ರಸ್ತೆ ದಾಟುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

ಮಾಣಿ-ಮೈಸೂರು ಹೆದ್ದಾರಿಯ ಅರಂಬೂರು ಬಳಿ ಸುಮಾರು 7 ಕಾಡಾನೆಗಳಿದ್ದ ಗುಂಪು ಸುರಿಯುತ್ತಿರುವ ಮಳೆಯ ಮದ್ಯೆ ಹೆದ್ದಾರಿ ದಾಟಿ ಅರಣ್ಯ ಪ್ರದೇಶದತ್ತ ತೆರಳಿದ ದೃಶ್ಯ ಶುಕ್ರವಾರ ಮುಂಜಾನೆ ನಡೆದಿದೆ.

ರಾತ್ರಿ ಪೂಮಲೆಯಿಂದ ಇಳಿದು ಬಂದು ಕೃಷಿ ತೋಟಗಳಿಗೆ ಕಾಡಾನೆ ಹಿಂಡು ಲಗ್ಗೆ ಇಟ್ಟಿದ್ದು, ಬಳಿಕ ಮುಂಜಾನೆ ಅರಂಬೂರು ಬಳಿ ಹೆದ್ದಾರಿ ದಾಟಿ ಪೂಮಲೆ ಕಾಡಿಗೆ ಮತ್ತೆ ತೆರಳಿರುವುದಾಗಿ ವರದಿಯಾಗಿದೆ. ಅರಂಬೂರಿನ ಎಸ್‌.ಎನ್‌.ಜಯರಾಮ, ಎಸ್‌.ಎನ್‌. ಮೋಹನ್‌ರಾಂ, ಎಸ್‌.ಎನ್‌. ಸೀತಾರಾಮ, ರವಿ ಬೆಳ್ಳಿಪ್ಪಾಡಿ ಮೊದಲಾದವರ ಕೃಷಿ ತೋಟಕ್ಕೆ ಲಗ್ಗೆ ಇಟ್ಟು ಕೃಷಿ ಹಾನಿ ಮಾಡಿದ್ದು, ಭಾಗ್ಯರಾಜ್‌ ಎಂಬವರ ಗೇಟ್‌ಗೂ ಹಾನಿ ಮಾಡಿದೆ

Leave a Reply

Your email address will not be published. Required fields are marked *

Join WhatsApp Group
error: Content is protected !!