
ಪುತ್ತೂರು: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಗೌರಿ ಹೊಳೆ ತುಂಬಿ ಹರಿಯುತ್ತಿದ್ದು ಇದರಿಂದಾಗಿ ಮಂಜೇಶ್ವರ – ಕಾಣಿಯೂರು ರಾಷ್ಟ್ರೀಯ ಹೆದ್ದಾರಿ ಬಂದ್ ಆದ ಘಟನೆಯೂ ವರದಿಯಾಯಿತು.
ಸರ್ವೆ ಸೇತುವೆ ಸಂಪೂರ್ಣ ಮುಳುಗಡೆ ಹೊಂದಿದ ಪರಿಣಾಮ ಸವಣೂರು ಸಂಪರ್ಕ ಸಂಪೂರ್ಣ ಕಡಿತ ಗೊಂಡಿದೆ.
ವಾಹನ ಸವಾರರು ಪ್ರಯಾಣಿಕರು ಪರದಾಡುವ ಪರಿಸ್ಥಿತಿ ಉಂಟಾಗಿದೆ.






