ಕರ್ನಾಟಕದಲ್ಲಿ ಸೂಪರ್ ಕಾಪ್, ಆಂಧ್ರ ಪ್ರದೇಶದಲ್ಲಿ ಸಿಂಗಂ ಎಂದು ಬಿರುದು ಪಡೆದಿರುವ ಐಪಿಎಸ್ ಅಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಕೋಮು ದ್ವೇಷದ ದಳ್ಳುರಿಗೆ ತುತ್ತಾಗಿರುವ ಮಂಗಳೂರಿಗೆ ಆಗಮಿಸಿದ್ದಾರೆ. ಮಂಗಳೂರು ನಗರ ಪೊಲೀಸ್‌ ಕಮಿಷನ‌ರ್ ಆಗಿ ರಾಜ್ಯ ಸರಕಾರ ಗುರುತರ ಜವಾಬ್ದಾರಿ ನೀಡಿದ್ದು, ಶುಕ್ರವಾರ ಸಂಜೆ 7 ಗಂಟೆಗೆ ಮಂಗಳೂರಿಗೆ ಆಗಮಿಸಿ ಅಧಿಕಾರ ಸ್ವೀಕರಿಸಿದ್ದಾರೆ.

ನಿರ್ಗಮನ ಆಯುಕ್ತ ಅನುಪಮ್ ಅಗರ್‌ವಾಲ್ ಅವರಿಂದ ಅಧಿಕಾರ ಸ್ವೀಕರಿಸಿರುವ ಸುಧೀರ್ ಕುಮಾರ್ ರೆಡ್ಡಿ 2010ರ ಬ್ಯಾಚ್‌ನ ಅಧಿಕಾರಿಯಾಗಿದ್ದರು.ಗುಪ್ತಚರ ಇಲಾಖೆಯ ಡಿಐಜಿ ಆಗಿ ಕಾರ್ಯನಿರ್ವಹಿಸಿದ್ದರು. ಆಂಧ್ರಪ್ರದೇಶದ ಗುಂಟೂರು ಮೂಲದ ಸುಧೀರ್ ಕುಮಾರ್ ರೆಡ್ಡಿ 2017-18ರಲ್ಲಿ ದ.ಕ.ಜಿಲ್ಲಾ ಎಸ್ಪಿಯಾಗಿ ಕಾರ್ಯನಿರ್ವಹಿಸಿದ್ದರು.

ಕಾನೂನು ಏನು ಹೇಳುತ್ತದೋ ಅದರ ಪ್ರಕಾರವೇ ನಾನು ನಡೆಯುವುದು:ಸುಧೀರ್ ಕುಮಾರ್ ರೆಡ್ಡಿ

ನನಗೆ ಗೊತ್ತಿರುವುದು ಒಂದೇ ‘ಅದು ಕಾನೂನು’. ಅದರಲ್ಲಿ ಒಬ್ಬರಿಗೆ ಒಂದು ರೀತಿ, ಇನ್ನೊಬ್ಬರಿಗೆ ಇನ್ನೊಂದು ರೀತಿ ಎಂದಿಲ್ಲ, ಅದು ಎಲ್ಲರಿಗೂ ಒಂದೇ ಎಂದು ನೂತನ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಹೇಳಿದರು.

ಮಂಗಳೂರು ನಗರ ನೂತನ ಪೊಲೀಸ್ ಆಯುಕ್ತರಾಗಿ ಶುಕ್ರವಾರ ಸಂಜೆ ನಿರ್ಗಮಿತ ಕಮಿಷನರ್ ಅನುಪಮ್ ಅಗ್ರವಾಲ್ ಅವರಿಂದ ಅಧಿಕಾರ ಸ್ವೀಕರಿಸಿದ ಬಳಿಕ ಅವರು ಮಾತನಾಡಿದರು. ಈಗತಾನೇ ಅಧಿಕಾರವಹಿಸಿಕೊಂಡಿದ್ದೇನೆ. ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮೊದಲು ಮಾಡುತ್ತೇನೆ. ನಗರದ ಜನತೆಗೆ ಯಾವ ಅನುಮಾನವೂ ಬೇಡ. ಕಾನೂನು ಏನು ಹೇಳುತ್ತದೋ ಅದರ ಪ್ರಕಾರವೇ ನಾನು ನಡೆಯುವುದು. ಬೇರೇನೂ ನನಗೆ ಗೊತ್ತಿಲ್ಲ ಎಂದರು.

Leave a Reply

Your email address will not be published. Required fields are marked *

Join WhatsApp Group
error: Content is protected !!