ಕೊಕ್ಕಡ:ಆಟೋ ರಿಕ್ಷಾ ಚಲಾಯಿಸುತ್ತಿದ್ದ ವೇಳೆ ಚಾಲಕ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಇಂದು ಬೆಳಿಗ್ಗೆ ಕೊಕ್ಕಡ ಸಮೀಪದ ಕೆಂಪಕೋಡಿನಲ್ಲಿ ನಡೆದಿದೆ.

ಕೆಂಪಕೋಡು ನಿವಾಸಿ ಶರತ್ ಕುಮಾರ್ ಕೆ (36) ಮೃತ ಚಾಲಕ. ಶರತ್ ಕುಮಾರ್ ಅವರು ಪ್ರತಿದಿನದಂತೆ ಇಂದು( ಜೂ.3) ಬೆಳಿಗ್ಗೆಯೂ ತಮ್ಮ ಆಟೋದಲ್ಲಿ ವಿದ್ಯಾರ್ಥಿಗಳನ್ನು ಶಾಲೆಗೆ ಬಿಟ್ಟು ವೇಳೆ ಮರಳುತ್ತಿದ್ದರು.

ಈ ವೇಳೆ ಅವರಿಗೆ ತೀವ್ರ ಹೃದಯಾಘಾತ ಸಂಭವಿಸಿದ್ದು, ರಿಕ್ಷಾ ಚಲಾಯಿಸುವ ನಡುವೆಯೇ ನಿಧನರಾದರು.

ಕೂಡಲೇ ಗಮನಿಸಿದ ಸ್ಥಳೀಯರು ಶರತ್‌ ಅವರನ್ನು ಕೊಕ್ಕಡ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಲುಪಿಸಿದರು. ಆದರೆ, ಅದಾಗಲೇ ಅವರು ನಿಧನ ಹೊಂದಿದ್ದರು.

ಕುಟುಂಬದ ಏಕೈಕ ಆಧಾರಸ್ತಂಭವಾಗಿದ್ದ ಶರತ್ ಕುಮಾರ್ ಅವರು ತಂದೆ ರಘುರಾಮ ಮಡಿವಾಳ, ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ

Leave a Reply

Your email address will not be published. Required fields are marked *

Join WhatsApp Group
error: Content is protected !!