ಮಂಗಳೂರು : ಕೇರಳದ ಚೆಮ್ಮಾಡ್ ದಾರುಲ್ ಹುದಾ ಪಿ.ಜಿ.ಯ ಅಂತಿಮ ವರ್ಷದ ವಿದ್ಯಾರ್ಥಿ ಮುಹಿಯುದ್ದೀನ್ ತಬ್ಸೀರ್ ಹುದವಿ (23) ತೀವ್ರವಾದ ಜ್ವರ ಮೆದುಳಿಗೆ ಬಾದಿಸಿ ಸೋಮವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಮೂಡುಬಿದಿರೆ – ಕಾಶಿಪಟ್ನದ ದಾರುನ್ನೂರಿನಲ್ಲಿ ಹತ್ತು ವರ್ಷಗಳ ಅಧ್ಯಯನವನ್ನು ಪೂರ್ಣಗೊಳಿಸಿ ಪ್ರಸ್ತುತ ಕೇರಳದ ಚೆಮ್ಮಾಡ್ ದಾರುಲ್ ಹುದಾ ಪಿ.ಜಿ.ಯ ಅಂತಿಮ ವರ್ಷದ ಪದವಿ ಶಿಕ್ಷಣ ಪಡೆಯುತ್ತಿದ್ದ ಇವರಿಗೆ 10 ದಿವಸಗಳ ಹಿಂದೆ ಜ್ವರ ಭಾದಿಸಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮೃತಪಟ್ಟಿದ್ದಾರೆ.
 
    ಮೃತರು ತಂದೆ ಮೂಲತಃ ಬಂಟ್ವಾಳ ತಾಲೂಕು ಮಿತ್ತೂರು ನಿವಾಸಿ ಪ್ರಸ್ತುತ ಬಜ್ಪೆಯಲ್ಲಿ ವಾಸವಿರುವ ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಹಮೀದ್ ಮಿತ್ತೂರು ಸಹಿತ ತಾಯಿ, ಓರ್ವ ಸಹೋದರ, ಇಬ್ಬರು ಸಹೋದರಿಯರು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!