
ಆರ್‌ಸಿಬಿ ಸಂಭ್ರಮಾಚರಣೆಯ ವೇಳೆ ಸಂಭವಿಸಿದ ಕಾಲ್ತುಳಿದಲ್ಲಿ 11 ಮಂದಿ ಮೃತಪಟ್ಟಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಪೊಲೀಸ್ ಅಧಿಕಾರಿಗಳ ತಲೆದಂಡವೂ ಆಗಿತ್ತು. ಈ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅವರ ರಾಜಕೀಯ ಕಾರ್ಯದರ್ಶಿ ಕೆ.ಗೋವಿಂದ ರಾಜ್ ಅವರಿಗೂ ಸಹ ಸಿಎಂ ಮನೆಯ ದಾರಿ ತೋರಿಸಿದ್ದಾರೆ.
ಸಧ್ಯ ಪೊಲೀಸರಿಂದ ಬಂಧಿತರಾಗಿರುವ ಆರ್‌ಸಿಬಿ ಮಾರ್ಕೆಟಿಂಗ್ ಮ್ಯಾನೇಜರ್ ನಿಖಿಲ್ ಸೋಸಲೆ ಅವರನ್ನು ಬಿಡುವಂತೆ ಪೊಲೀಸರಿಗೆ ನಿರ್ದೇಶನ ನೀಡಿದ್ದೇ ಸಿಎಂ ಸಿದ್ದರಾಮಯ್ಯ ಅವರ ಪಿತ್ತ ಕೆರಳುವಂತೆ ಮಾಡಿದೆಯನ್ನಲಾಗಿದೆ.
ಅವಸರದಲ್ಲಿ ಕಾರ್ಯಕ್ರಮ ನಿಯೋಜಿಸಿ ಅವಘಡಕ್ಕೆ ಕಾರಣರಾಗಿದ್ದ ಗೋವಿಂದ ರಾಜು ಅವರನ್ನು ಹುದ್ದೆಯಿಂದ ಕೆಳಗಿಳಿಸಲು ಹಲವು ಸಚಿವರು ಒತ್ತಾಯಿಸಿದ್ದರು. ಆದರೆ ಸಿಎಂ ಸಮ್ಮತಿಸದೇ ಹುದ್ದೆಯಲ್ಲಿಯೇ ಮುಂದುವರೆಸಿದ್ದರು. ಆದರೆ ನಿಖಿಲ್ ಸೋಸಲೆ ಬಿಡುಗಡೆಗೆ ಗೋಂವಿದ್ ರಾಜ್ ಪೊಲೀಸರ ಬಳಿ ತೀವ್ರ ಒತ್ತಡ ಹೇರಿದ್ದರು. ಬಳಿಕ ಪೊಲೀಸ್ ಉನ್ನತಾಧಿಕಾರಿಗಳು ಇದನ್ನು ಸಿಎಂ ಗಮನಕ್ಕೆ ತಂದಿದ್ದರು. ಕೂಡಲೇ ಸಿಎಂ ಸಿದ್ದರಾಮಯ್ಯ, ಕೆ ಗೋವಿಂದರಾಜ್ ಅವರ ಮೇಲೆ ಸಿಎಂ ಕಚೇರಿಯಿಂದ ಅರ್ಧಚಂದ್ರ ಪ್ರಯೋಗ ಮಾಡಿದ್ದಾರೆ.






