
ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ(Air India Plane) ವಿಮಾನ ಗುರುವಾರ ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ಅಪಘಾತಕ್ಕೀಡಾಗುವ(Ahmedabad Plane Crash) ಕೆಲವೇ ಕ್ಷಣಗಳ ನಂತರ, ವಿಮಾನದ ಪೈಲಟ್ ವಾಯು ಸಂಚಾರ ನಿಯಂತ್ರಣಕ್ಕೆ ಮೇಡೇ ಕರೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ನಾಗರಿಕ ವಿಮಾನಯಾನ ನಿರ್ದೇಶನಾಲಯದ (ಡಿಜಿಸಿಎ) ಹೇಳಿಕೆಯ ಪ್ರಕಾರ, ಇದಾದ ನಂತರ ಎಟಿಸಿ ಮಾಡಿದ ಕರೆಗಳಿಗೆ ವಿಮಾನದ ಕ್ಯಾಪ್ಟನ್ ಪ್ರತಿಕ್ರಿಯಿಸಲಿಲ್ಲ ಎಂದು ತಿಳಿದುಬಂದಿದೆ.
ಇನ್ನು ವಿಮಾನದಲ್ಲಿ 200ಕ್ಕೂ ಅಧಿಕ ಪ್ರಯಾಣಿಕರು ಮೃತಪಟ್ಟಿರುವ ಭೀತಿ ಎದುರಾಗಿದೆ. ಈ ವಿಮಾನದಲ್ಲಿ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ(Vijay Rupani) ಇದ್ದರು ಎನ್ನಲಾಗಿದೆ. ಅವರು ಅಹ್ಮದಾಬಾದ್‌ನಿಂದ ಲಂಡನ್‌ಗೆ ಪ್ರಯಾಣ ಬೆಳೆಸಿದ್ದರು. ಇದೀಗ ಸಂಭವಿಸಿರುವ ದುರಂತದಲ್ಲಿ ಅವರೂ ಕೂಡ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಏರ್ ಇಂಡಿಯಾ 171 ವಿಮಾನ ಅಹ್ಮದಾಬಾದ್‌ನಿಂದ ಲಂಡನ್‌ನ ಗಟ್ವಿಕ್‌ಗೆ ಹೊರಡಿತ್ತು. ಟೇಕ್ ಆಫ್ ಆದ ಐದೇ ನಿಮಿಷದಲ್ಲಿ 825 ಅಡಿ ಎತ್ತರದಿಂದ ವಿಮಾನ ಪತನಗೊಂಡು ಬೆಂಕಿಗೆ ಆಹುತಿಯಾಗಿತ್ತು. ಇನ್ನು ವಿಮಾನದಲ್ಲಿ ಇಬ್ಬರು ಪೈಲೆಟ್,10 ಕ್ಯಾಬಿನ್ ಸಿಬ್ಬಂದಿ, 169ಭಾರತೀಯರು, 53ಬ್ರಿಟೀಷ್ ಪ್ರಜೆಗಳು ಓರ್ವ ಕೆನಡಾ ಪ್ರಜೆ ಮತ್ತು7 ಪೋರ್ಚಿಗೀಸ್ ಪ್ರಜೆಗಳು ವಿಮಾನದಲ್ಲಿದ್ದರು ಎನ್ನಲಾಗಿದೆ.






