ಕರಾವಳಿ ಭಾಗದಲ್ಲಿ ವರುಣಾರ್ಭಟಕ್ಕೆ ಜನ ತತ್ತರಿಸಿ ಹೋಗಿದ್ದಾರೆ. ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕಳೆದೆರಡು ದಿನಗಳಿಂದ ಎಡೆಬಿಡದೇ ಒಂದೇ ಸಮನೇ ಮಳೆ ಸುರಿಯುತ್ತಲೇ(Heavy Rain) ಇದೆ. ಇದೀಗ ಮಂಗಳೂರಿನಲ್ಲಿ ಭಾರಿ ಮಳೆಗೆ ಜಲ ಸ್ಫೋಟಗೊಂಡು ಖಾಸಗಿ ಆಸ್ಪತ್ರೆಯ ಗೋಡೆ ಒಂದು ಕುಸಿದು ಬಿದ್ದಿದ್ದು(Wall Collapsed), ಭಾರೀ ಅವಘಡವೊಂದು ಸಂಭವಿಸಿದೆ.

ಅದೃಷ್ಟವಶಾತ್‌ ಆಸ್ಪತ್ರೆಯಲ್ಲಿದ್ದ ಕುಟುಂಬವೊಂದು ಪಾರಾಗಿದೆ. ಕಂಕನಾಡಿ ಬಳಿಯ ಸುವರ್ಣ ಲೇನಲ್ಲಿ ಭಾರಿ ಅವಘಡ ಸಂಭವಿಸಿದೆ. ಖಾಸಗಿ ಆಸ್ಪತ್ರೆಯ ಕಾಂಪೌಂಡ್ ಗೋಡೆ ಕುಸಿದು ಅವಘಡ ಸಂಭವಿಸಿದೆ. ಧಾರಾಕಾರ ಮಳೆಗೆ ಕೊಡಿ ಕುಸಿದು ಮನೆಗಳಿಗೆ ನೀರು ನುಗ್ಗಿದೆ.

ಖಾಸಗಿ ಆಸ್ಪತ್ರೆ ಗೋಡೆ ಕುಸಿತ ಪರಿಣಾಮದಿಂದ ಕೂದಲೆಳೆ ಅಂತರದಲ್ಲಿ ಜ್ಯೋಕಿಂ ಡಿಸೋಜಾ ಎಂಬ ಕುಟುಂಬ ಪಾರಾಗಿದೆ. ಕುಟುಂಬದ ಆರು ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚರ್ಚ್ ಗೆ ಹೊರಡಲು ಮನೆಯಿಂದ ಹೊರ ಬರುತ್ತಿದ್ದಂತೆ ಖಾಸಗಿ ಆಸ್ಪತ್ರೆಯ ಗೋಡೆ ಕುಸಿದಿದೆ. ಅದೃಷ್ಟವಶಾತ್ ಡಿಸೋಜಾ ಕುಟುಂಬ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಹಲವು ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌

ರಾಜ್ಯದಲ್ಲಿ ಮುಂದಿನ ಐದು ದಿನ ಬಿರುಗಾಳಿ, ಗುಡುಗು ಸಹಿತ ಮಳೆ (Karnataka Weather) ಸುರಿಯುವ ಸಾಧ್ಯತೆ ಇದೆ. ಜೂನ್‌ 14ರಂದು ಕರಾವಳಿ ಜಿಲ್ಲೆಗಳು, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಸೇರಿ 6 ಜಿಲ್ಲೆಗಳಿಗೆ ಹವಾಮಾನ ಇಲಾಖೆಯು ರೆಡ್‌ ಅಲರ್ಟ್‌ (Red Alert) ಘೋಷಿಸಿದೆ. ಇನ್ನುಳಿದಂತೆ ಹಾಸನ, ಮೈಸೂರು, ಧಾರವಾಡ, ಬೆಳಗಾವಿ ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌ ಹಾಗೂ ಬೆಂಗಳೂರು ಸೇರಿ ಉಳಿದ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ನೀಡಲಾಗಿದೆ. ಇನ್ನು ಕರಾವಳಿ ಜಿಲ್ಲೆಗಳಲ್ಲಿ ಜೂನ್ 17ರವರೆಗೆ ಬಿರುಗಾಳಿಯು ಗಂಟೆಗೆ 55 ಕಿ.ಮೀ ವೇಗದಲ್ಲಿ ಬೀಸುವ ಸಾಧ್ಯತೆ ಹಿನ್ನೆಲೆಯಲ್ಲಿ ಮೀನುಗಾರರು ಸಮುದ್ರಕ್ಕಿಳಿಯದಂತೆ ಎಚ್ಚರಿಕೆ ನೀಡಲಾಗಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!