ಉ ತ್ತರ ಪ್ರದೇಶದ ಹರ್ದೋಯ್ ಜಿಲ್ಲೆಯ ಸ್ಯಾಂಡಿ ರಸ್ತೆಯಲ್ಲಿರುವ ಪೆಟ್ರೋಲ್ ಪಂಪ್‌ನಲ್ಲಿ ಯುವತಿಯೊಬ್ಬಳು ವ್ಯಕ್ತಿಯ ಎದೆಗೆ ಬಂದೂಕು ಇಟ್ಟು ಬೆದರಿಕೆ ಹಾಕಿರುವ ಆಘಾತಕಾರಿ ಘಟನೆ ನಡೆದಿದೆ. ಈ ಘಟನೆ ಭಾನುವಾರ ಸಂಜೆ ನಡೆದಿದ್ದು ಘಟನೆ ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ಘಟನೆಯ ಸಿಸಿಟಿವಿ ದೃಶ್ಯಾವಳಿಯ ಆಧಾರದ ಮೇಲೆ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.

ಶಹಾಬಾದ್‌ನ ನಿವಾಸಿಯಾದ ಎಹ್ಮಾನ್ ಖಾನ್ ತನ್ನ ಪತ್ನಿ ಮತ್ತು ಮಗಳು ಅರಿಬಾಳ ಜೊತೆಗೆ ವಾಹನಕ್ಕೆ ಇಂಧನ ತುಂಬಿಸಲು ಪೆಟ್ರೋಲ್ ಪಂಪ್‌ಗೆ ಆಗಮಿಸಿದ್ದರು. ಆದರೆ, ಇಂಧನ ತುಂಬಿಸುವ ಸಂದರ್ಭದಲ್ಲಿ ಉಂಟಾದ ಗಲಾಟೆಯು ಗಂಭೀರ ಸ್ವರೂಪ ಪಡೆದುಕೊಂಡಿತು.

ಪೆಟ್ರೋಲ್ ತುಂಬಿಸುವಾಗ, ಪಂಪ್ ಉದ್ಯೋಗಿ ರಜನೀಶ್ ಕುಮಾರ್, ಎಹ್ಮಾನ್ ಖಾನ್‌ ಎಂಬುವವರಿಗೆ ಕಾರಿನಿಂದ ಕೆಳಗಿಳಿಯುವಂತೆ ಹೇಳಿದ್ದಾನೆ. ಉದ್ಯೋಗಿ ಹೇಳಿದ ತಕ್ಷಣ ಆರಂಭವಾದ ಮಾತಿನ ಚಕಮಕಿಯು ಕೆಲವೇ ಕ್ಷಣಗಳಲ್ಲಿ ತೀವ್ರ ವಾಗ್ವಾದಕ್ಕೆ ತಿರುಗಿತ್ತು. ಈ ಸಂದರ್ಭದಲ್ಲಿ ಎಹ್ಮಾನ್ ಖಾನ್‌ರ ಮಗಳು ಅರಿಬಾ ಕಾರಿನಿಂದ ಇಳಿದು ಬಂದು ರಜನೀಶ್‌ಗೆ ರಿವಾಲ್ವರ್ ತೋರಿಸಿ ಬೆದರಿಕೆ ಹಾಕಿದ್ದಾಳೆ. ಈ ಘಟನೆಯು ಪಂಪ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ದೃಶ್ಯಾವಳಿಯು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ, ಅರಿಬಾ ರಜನೀಶ್‌ಗೆ ಗನ್ ತೋರಿಸುವುದರ ಜೊತೆಗೆ, ‘ನಿನ್ನ ಕುಟುಂಬದವರು ಕಂಡುಹಿಡಿಯಲಾಗದಂತೆ ಗುಂಡುಗಳನ್ನು ನಿನ್ನ ದೇಹದ ಒಳಗೆ ಹಾಕುತ್ತೇನೆ’ ಎಂದು ಜೀವ ಬೆದರಿಕೆ ಹಾಕಿದ್ದಾಳೆ. ಈ ಘಟನೆಯಿಂದ ಪಂಪ್‌ನ ಇತರ ಉದ್ಯೋಗಿಗಳು ಮತ್ತು ಗ್ರಾಹಕರಲ್ಲಿ ಭಯದ ವಾತಾವರಣ ಸೃಷ್ಟಿಯಾಯಿತು. ರಜನೀಶ್ ಕುಮಾರ್‌ ತಕ್ಷಣವೇ ಪೊಲೀಸರಿಗೆ ದೂರು ಸಲ್ಲಿಸಲಾಯಿತು.

ಬಿಲ್ಲಾಮ್ ಪೊಲೀಸ್ ಠಾಣೆಯ ಉಸ್ತುವಾರಿ ರಾಕೇಶ್ ಕುಮಾರ್ ಅವರ ಪ್ರಕಾರ, ಎಹ್ಮಾನ್ ಖಾನ್, ಆತನ ಪತ್ನಿ ಮತ್ತು ಮಗಳು ಅರಿಬಾ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆ ಮತ್ತು ಕ್ರಿಮಿನಲ್ ಬೆದರಿಕೆ ಆರೋಪದಡಿ ಎಫ್‌ಐಆರ್ ದಾಖಲಿಸಲಾಗಿದೆ. ಘಟನೆಯಲ್ಲಿ ಬಳಸಲಾದ ರಿವಾಲ್ವರ್‌ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ತನಿಖೆಯು ತೀವ್ರಗೊಂಡಿದ್ದು, ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಯನ್ನು ವಿಶ್ಲೇಷಿಸಿ, ಘಟನೆಯ ಸಂಪೂರ್ಣ ವಿವರವನ್ನು ಸಂಗ್ರಹಿಸಲಾಗುತ್ತಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!