ಪುತ್ತೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಸರಕರ ಆಡಳಿತಕ್ಕೆ ಬಂದ ಪಂಚ ಗ್ಯಾರಂಟಿ ಯೋಜನೆ ಯಸಶ್ವಿಯಾಗಿ ಮುನ್ನಡೆಯುತ್ತಿದ್ದು ಇದರಿಂದ ಬಿಜೆಪಿ ವಿಚಲಿತಗೊಂಡಿದ್ದು ಮಾತ್ರವಲ್ಲದೆ ಗ್ಯಾರಂಟಿ ನೀಡಿದ್ದರಿಂದ ಇತರೆ ಅಭಿವೃದ್ದಿ ಕೆಲಸಗಳು ಆಗುತ್ತಿಲ್ಲ ಎಂಬ ಸುಳ್ಳು ಆರೋಪವನ್ನು ಮಾಡುತ್ತಿದೆ, ಕೇವಲ ಗೃಹಲಕ್ಷ್ಮಿ ಯೋಜನೆಯಿಂದ ಪ್ರತೀ ಕುಟುಂಬದ  ಯಜಮಾನಿಯ ಖಾತೆಗೆ ೪೨ ಸಾವಿರ ರೂ ಜಮೆಯಾಗಿದೆ ಎಂದು ಸಾಸಕ ಅಶೋಕ್ ರೈ ಹೇಳಿದರು.

ಅವರು ಮಾಡ್ನೂರು ಗ್ರಾಮದಲ್ಲಿ ಸುಮಾರು ೧.೬೬ ಕೋಟಿ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ನೆರವೇರಿಸಿದ ಬಳಿಕ ಕಾವು ಸಮುದಾಯ ಭವನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು.

ಕಾಂಗ್ರೆಸ್ ಸರಕಾರ ಬಂದ ಮೇಲೆ ಬಡವರು, ಮಧ್ಯಮವರ್ಗದ ಜನರು ನೆಮ್ಮದಿಯ ಜೀವನ ನಡೆಸುವಂತಾಗಿದೆ. ಏನಿಲ್ಲದಿದ್ದರೂ ತಿಂಗಳಿಗೆ ಬರುವ ೨೦೦೦ ರೂ ಗೃಹಲಕ್ಷ್ಮಿ ಹಣ ಮಹಿಳೆಯನ್ನು ಸ್ವಾವವಲಂಬಿಯನ್ನಾಗಿಸಿದೆ. ಜನತೆ ಅಭಿವೃದ್ದಿಯಾಗುತ್ತಿದ್ದಾರೆ, ನೆಮ್ಮದಿಯಲ್ಲಿರುವುದನ್ನು ಬಿಜೆಪಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ ಈ ಕಾರಣಕ್ಕೆ ಪಂಚ ಗ್ಯಾರಂಟಿ ಯೋಜನೆಯ ಬಗ್ಗೆ ಅಪಪ್ರಚಾರ ಮಾಡುತ್ತಾ ಅದನ್ನು ರದ್ದು ಮಾಡಬೇಕು ಎಂದು ಒತ್ತಾಯವನ್ನು ಮಾಡುತ್ತಿದೆ ಎಂದು ಆರೋಪಿಸಿದರು.



ರಾಜಕೀಯ ಮಾಡಬೇಡಿ

ನಾನು ಶಾಸಕನಾದ ಮೇಲೆ ಅಭಿವೃದ್ದಿಯಲ್ಲಿ ತಾರತಮ್ಯ ಮಾಡಿಲ್ಲ. ಕಾಂಗ್ರೆಸ್, ಬಿಜೆಪಿ ಎಂದು ಯಾವತ್ತೂ ರಾಜಕೀಯ ಮಾಡಿಲ್ಲ. ನ್ಯಾಯ ಕೇಳಿ ಬಂದ ಎಲ್ಲರಿಗೂ ನ್ಯಾಯ ಕೊಡಿಸುವ ಕೆಲಸವನ್ನು ಮಾಡಿದ್ದೇನೆ, ಅನುದಾನ ಹಂಚಿಕೆಯಲ್ಲೂ ರಾಜಕೀಯ ಮಾಡಿಲ್ಲ ಎಂದು ಹೇಳಿದ ಶಾಸಕರು ಬಿಜೆಪಿ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನೋಡಿ ಕಲಿಯುವಂತದ್ದು ತುಂಬಾ ಇದೆ ಅವರು ಅನುದಾನ ಹಂಚಿಕೆಯಲ್ಲಿ ಯಾವ ಶಾಸಕರಿಗೂ ಪಕ್ಷಪಾತ ಮಾಡಿಲ್ಲ ಎಂದು ಹೇಳಿದರು.





ಯುವಕರ ಕೈಗೆ ಉದ್ಯೋಗ ಕೊಡಿಸಿ

ಯುವ ಸಮೂಹವನ್ನು ಉತ್ತಮ ಕಾರ್ಯಗಳಿಗೆ ಬಳಸಬೇಕು. ಅವರಿಗೆ ವಿದ್ಯೆ , ಉದ್ಯೋಗವನ್ನು ಕೊಡಿಸುವ ಕೆಲಸ ರಾಜಕಾರಣಿಗಳು ಮಾಡಬೇಕು. ಕೆಟ್ಟ ಕೆಲಸಗಳಿಗೆ ಅವರನ್ನು ಬಳಸಿ ಅದರಿಂದ ಲಾಭಪಡೆಯುವ ಕೆಲಸ ರಾಜಕಾರಣಿಗಳು ಮಾಡಬಾರದು. ಜಿಲ್ಲೆಯಲ್ಲಿ ನಡೆಯುತ್ತಿರುವ ಅಹಿತಕರ ಘಟನೆಯ ಹಿಂದೆ ರಾಜಕೀಯ ಷಡ್ಯಂತ್ರ ಇದ್ದೇ ಇದೆ. ಯಾರದ್ದೋ ಮಕ್ಕಳನ್ನು ಬಲಿಪಡೆದು ಆ ಮೂಲಕ ತಮ್ಮ ರಾಜಕೀಯ ಬೇಳೆ ಬೇಯಿಸಿ ಬಡವರ ಮಕ್ಕಳನ್ನು ಜೈಲಿಗೆ ತಳ್ಳುವ ಕೆಲಸ ನಿರಂತರ ನಡೆಯುತ್ತಿದೆ. ತಾಯಂದಿರು ತಮ್ಮ ಮಕ್ಕಳನ್ನು ದುಷ್ಟ ಶಕ್ತಿಗಳ ಜೊತೆ ಸೇರದಂತೆ ತಡೆಯುವ ಕೆಲಸವನ್ನು ಮಾಡಬೇಕು. ಇಲ್ಲಿ ಧರ್ಮ ಧರ್ಮಗಳ ನಡುವೆ ಅಶಾಂತಿಯ ವಾತಾವರಣ ಉಂಟಾಗುವುದು ನಿಂತರೆ ಜಿಲ್ಲೆ ತನ್ನಿಂತಾನೆ ಅಭಿವೃದ್ದಿಯಾಗುತ್ತದೆ ಎಂದು ಹೇಳಿದರು.





ಹೇಳಿದ್ದನ್ನು ಮಾಡಿದ್ದೇನೆ

ಕಳೆದ ಚುನಾವಣಾ ಸಮಯದಲ್ಲಿ ನಾನು ನನ್ನ ಕ್ಷೇತ್ರದ ಜನತೆಗೆ ಏನು ಹೇಳಿದ್ದೇನೋ ಅದನ್ನು ಮಾಡಿದ್ದೇನೆ. ಮೆಡಿಕಲ್ ಕಾಲೇಜು ಮ್ತತು ಕುಡಿಯುವ ನೀರಿಗೆ ಮೊದಲ ಅಧ್ಯತೆ ನೀಡಿದ್ದೇನೆ. ಪುತ್ತೂರಿಗೆ ಮೆಡಿಕಲ್ ಕಾಲೇಜು ಬಂದರೆ ಜನರಿಗೆ ಪ್ರಯೋಜನವಾಗುತ್ತದೆ, ಬಡವರಿಗೆ ನೆರವಾಗುತ್ತದೆ. ದಿನದ ೨೪ ಗಂಠೆ ಕುಡಿಯುವ ನೀರು ಪೂರೈಕೆ ಮಾಡಿದರೆ ಜನರಿಗೆಪ್ರಯೋಜನವಾಗಲಿದೆ. ಬಡ ಹಾಗೂ ಮಧ್ಯಮ ವರ್ಗಕ್ಕೆ ನೆರವಾಗುವ ಪ್ರತೀಯೊಂದು ಯೋಜನೆಯನ್ನೂ ಪುತ್ತೂರಿಗೆ ತಂದೇ ತರುತ್ತೇನೆ ಎಂದು ಶಾಸಕರು ಹೇಳಿದರು. ಟೀಕಿಸುವವರು ಈ ಹಿಂದೆ ಅಧಿಕಾರದಲ್ಲಿದ್ದಾಗ ಜನರಿಗೆ ಏನು ಮಾಡಿದ್ದರು ಎಂಬುದನ್ನು ಒಮ್ಮೆ ಅವಲೋಕನ ಮಾಡಿಕೊಳ್ಳಲಿ ಎಂದು ಶಾಸಕರು ಹೇಳಿದರು.



ಕಾಲನಿಗಳ ಅಭಿವೃದ್ದಿ ಮಾಡಿಯೇ ಸಿದ್ದ

ಇಂದಿಗೂ ಕೆಲವೊಂದು ದಲಿತ ಕಾಲನಿಗಳು, ಅಲ್ಪಸಂಖ್ಯಾತ ಕಾಲನಿಗಳು ಅಭಿವೃದ್ದಿ ಕಂಡಿಲ್ಲ. ಕೇವಲ ವೋಟಿಗೋಸ್ಕರ ಅವರನ್ನು ಬಳಕೆ ಮಾಡುತ್ತಿದ್ದ ರಾಜಕೀಯ ಪಕ್ಷಗಳು ಕಾಲನಿಗೆ ತೆರಳುವ ರಸ್ತೆ, ಅವರ ವಾಸದ ಮನೆಯನ್ನು ಅಭಿವೃದ್ದಿ ಮಾಡಿಕೊಟ್ಟಿಲ್ಲ. ಬಡವರು ಬಡವರಾಗಿಯೇ ಉಳಿದರೆ ಇವರ ರಾಜಕೀಯ ಬೇಳೆ ಬೇಯಿಸಲು ಸುಲಭವಾಗುತ್ತದೆ ಎಂದು ಕಾಲನಿಗಳ ಬಡ ಜನತೆಯನ್ನು ಹಿಂದಿನವರು ಮರೆತುಬಿಟ್ಟಿದ್ದಾರೆ. ಕ್ಷೇತ್ರದ ಎಲ್ಲಾ ಕಾಲನಿಗಳ ಜನರ ಕಷ್ಟ , ಸುಖಗಳಲ್ಲಿ ಭಾಗಿಯಾಗುವ ಮೂಲಕ ಸದಾ ಅವರ ಸೇವೆಯನ್ನಿ ತನ್ನನ್ನು ತೊಡಗಿಸಿಕೊಳ್ಳುವೆ ಎಂದು ಶಾಸಕರು ಹೇಳಿದರು.





ಅಶೋಕ್ ರೈ ಕರ್ನಾಟಕದ ನಂಬರ್ ೧ ಶಾಸಕ: ಹೇಮನಾಥ ಶೆಟ್ಟಿ

ಅಶೋಕ್ ರೈ ಅವರು ಕರ್ನಾಟಕದ ನಂಬರ್ ೧ ಶಾಸಕರಾಗಿ ಮೆರೆಯುತ್ತಿದ್ದಾರೆ, ವಿಧಾನಸಭೆಯ ಚೊಚ್ಚಲ ಅಧಿವೇಶನದಲ್ಲೇ ಬಡವರಪರ, ಅಭಿವೃದ್ದಿ ಪರ ೧೩ ಪ್ರಶ್ನೆಗಳನ್ನು ಕೇಳುವ ಮೂಲಕ ಅದಕ್ಕೆ ಪರಿಹಾರವನ್ನು ಕಂಡುಕೊಂಡ ಏಕೈಕ ಶಾಸಕರಾಗಿದ್ದಾರೆ ಎಂದು ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿ ಹೇಳಿದರು. ಏನೆಲ್ಲಾ ನಿರೀಕ್ಷೆಯನ್ನು ಜನ ಇಟ್ಟಿಕೊಂಡಿದ್ದರೋ ಅದಕ್ಕೆಇಂತ ಹೆಚ್ಚೇ ಅಭಿವೃದ್ದಿ ಕೆಲಸವನ್ನು ಮಾಡಿದ್ದಾರೆ. ಶಾಸಕರಾಗುವ ಮೊದಲು ಅಶೋಕ್ ರೈ ಬಗ್ಗೆ ಅಪಪ್ರಚಾರ ಮಾಡಿದವರು ಈಗ ತಲೆಮೇಲೆ ಕೈಇಟ್ಟುಕೊಳ್ಳುವ ಂತೆ ಅಭಿವೃದ್ದಿ ಕೆಲಸವನ್ನು ಮಾಡಿದ್ದಾರೆ. ೪೦ ಎಕ್ರೆ ಜಾಗ ಮಾಡಿಟ್ಟರೆ ಮೆಡಿಕಲ್ ಕಾಲೇಜು ಆಗುವುದಿಲ್ಲ, ಮೆಡಿಕಲ್ ಕಾಲೇಜು ಆಗಬೇಕೆಂಬ ಮನಸ್ಸು ಕೂಡಾ ಜನಪ್ರತಿನಿಧಿಗಳಲ್ಲಿ ಇರಬೇಕಿತ್ತು. ಆದರೆ ಈ ಹಿಂದಿನ ಯಾವ ಶಾಸಕರಿಗೂ ಇಲ್ಲದ ಶಕ್ತಿ ಅಶೋಕ್ ರೈ ಅವರಲ್ಲಿದೆ ಆ ಕಾರಣಕ್ಕೆ ಪುತ್ತೂರಿಗೆ ಮೆಡಿಕಲ್ ಕಾಲೇಜು ಮಂಜೂರಾಗಿದೆ ಎಂದು ಹೇಳಿದರು. ಮಾಡ್ನೂರು ಗ್ರಾಮಕ್ಕೆ ಇದುವರೆಗಿನ ಯಾವ ಶಾಸಕರೂ ಇಷ್ಟೊಂದು ಪ್ರಮಾಣದಲ್ಲಿ ಅನುದಾನವನ್ನು ನೀಡಿರಲಿಲ್ಲ. ಇಲ್ಲಿನ ಬಹುತೇಕ ರಸ್ತೆಗಳು ಈಗ ಅಭಿವೃದ್ದಿಯಾಗಿದೆ. ಪುತ್ತೂರು ವಿಧಾನಸಭಾ ಕ್ಷೇತ್ರದ ಪ್ರತೀ ಗ್ರಾಮಗಳಲ್ಲೂ ಅಭಿವೃದ್ದಿ ಕೆಲಸಗಳು ನಡೆಯುತ್ತಲೇ ಇದೆ. ಜನ ನಡೆದಾಡಲು ಸಾಧ್ಯವಾಗದ ರಸ್ತೆಗಳು ಇಂದು ಕಾಂಕ್ರೀಟ್‌ಗೊಂಡು ಅಭಿವೃದ್ದಿಯಾಗಿದೆ ಇದಕ್ಕೆಲ್ಲಾ ಶಾಸಕರ ಇಚ್ಚಾಶಕ್ತಿಯೇ ಕಾರಣವಾಗಿದೆ. ಮುಂದಿನ ಐದು ವರ್ಷದೊಳಗೆ ಪುತ್ತೂರಿನ ಚಿತ್ರಣವೇ ಬದಲಾಗಲಿದೆ. ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನಗಳು ಅಭಿವೃದ್ದಿಯಗಲಿದ್ದು ,ಎಲ್ಲರನ್ನೂ ಜೊತೆಯಾಗಿಸಿ ಮುಂದುವರೆಯುವ ಅಶೋಕ್ ರೈ ಹಿಂದುತ್ವವೇ ನಿಜವಾದ ಹಿಂದುತ್ವ ಎಂದು ಹೇಮನಾಥ ಶೆಟ್ಟಿ ಹೇಳಿದರು.



ಕಾವು ಸರಕಾರಿ ಶಾಲಾ ಬಸ್ ಲೋಕಾರ್ಪಣೆ

ಇದೇ ಸಂದರ್ಭದಲ್ಲಿ ಕಾವು ಸರಕಾರಿ ಹಿ ಪ್ರಾ ಶಾಲೆಗೆ ಬಸ್ ವ್ಯವಸ್ಥೆಯನ್ನು ಆರಂಭ ಮಾಡಲಾಗಿದ್ದು ಶಾಸಕರು ನೂತನ ಬಸ್ ಲೋಕಾರ್ಪಣೆ ಮಾಡಿದರು. ಸ್ಥಳೀಯವಾಗಿ ಶಾಲಾ ಮಕ್ಕಳನ್ನು ಕರೆತರಲು ಈ ಬಸ್ ವ್ಯವಸ್ಥೆಯನ್ನು ಪ್ರಾರಂಭ ಮಾಡಲಾಗಿದೆ. ಶಾಲೆಯನ್ನು ದತ್ತುತೆಗೆದುಕೊಂಡಿರುವ ಕಾವು ಹೇಮನಾಥ ಶೆಟ್ಟಿಯವರು ನೂತನ ಬಸ್ ವ್ಯವಸ್ಥೆಯ ರುವಾರಿಗಳಾಗಿರುತ್ತಾರೆ.



ಕಾಮಗಾರಿಗಳ ವಿವರ: ಕಾವಿನಲ್ಲಿ ರಿಕ್ಷಾ ತಂದುದಾಣ ಉದ್ಘಾಟನೆ, ಕೊಳ್ತಿಗೆ ಬದಿಯಡ್ಕ ಅಲ್ಪಸಂಖ್ಯಾತ ಕಾಲನಿ ರಸ್ತೆ ಶಿಲಾನ್ಯಾಸ, ಕಾವು ಉಜಿರುಗುಳಿ ದಲಿತ ಕಾಲನಿ ರಸ್ತೆ ಶಿಲಾನ್ಯಾಸ, ಕಾವು ಸಸ್ಪೆಟ್ಟಿ ರಸ್ತೆ ಉದ್ಘಾಟನೆ, ಮಾಡನ್ನೂರು ಅಂಕೊತ್ತಿಮಾರ್ ರಸ್ತೆ ಉದ್ಘಾಟನೆ, ಕಾವಿ ಮಿನೋಜಿಕಲ್ಲು ರಸ್ತೆಯ ಕಾಂಕ್ರಿಟೀಕರಣ



ವೇದಿಕೆಯಲ್ಲಿ ಜಿಪಂ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಕೊಳ್ತಿಗೆ ಗ್ರಾಪಂ ಅಧ್ಯಕ್ಷೆ ಅಕ್ಕಮ್ಮ, ಪುಡಾ ಅಧ್ಯಕ್ಷರಾದ ಅಮಲರಾಮಚಂದ್ರ, ಸದಸ್ಯರಾದ ಲ್ಯಾನ್ಸಿ ಮಸ್ಕರೇನಸ್, ನಿಹಾಲ್ ಪಿ ಶೆಟ್ಟಿಅರಿಯಡ್ಕ ಗ್ರಾಪಂ ಸದಸ್ಯರಾದ ಸೆಲ್ಮಾ, ಮೋನಪ್ಪ ಪೂಜಾರಿ, ವಿನಯಕುಮಾರ್, ಜಯಂತಿಪಟ್ಟುಮೂಲೆ, ನೆಟ್ಟಣಿಗೆ ಮುಡ್ನೂರು ಗ್ರಾಪಂ ಅಧ್ಯಕ್ಷೆ ಫೌಝಿಯಾ ಉಪಸ್ಥಿತರಿದ್ದರು.

ಗ್ರಾಪಂ ಸದಸ್ಯರಾದ ದಿವ್ಯನಾಥ ಶೆಟ್ಟಿ ಸ್ವಾಗತಿಸಿ, ವಲಯ ಕಾಂಗ್ರೆಸ್ ಅಧ್ಯಕ್ಷರಾದ ಇಬ್ರಾಹಿಂ ವಂದಿಸಿದರು.

Leave a Reply

Your email address will not be published. Required fields are marked *

Join WhatsApp Group
error: Content is protected !!