ಪುತ್ತೂರು: ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವಂ|ಡಾ|ಪೀಟರ್ ಪಾವ್ಲ್ ಸಲ್ದಾನ್ಹಾ ಅವರ ಆದೇಶದಂತೆ, ಪುತ್ತೂರಿನ ಮಾಯ್ ದೆ ದೇವುಸ್ ಚರ್ಚ್‌ನ ನೂತನ ಪ್ರಧಾನ ಧರ್ಮಗುರುಗಳಾಗಿ ವಂ|ಡಾ|ಜಾನ್ ಬಾಪ್ಟಿಸ್ಟ್ ಸಲ್ದಾನಾರವರು ಮೇ 19ರಂದು ಅಧಿಕಾರ ಸ್ವೀಕರಿಸಿದರು.

ಈ ಹಿಂದೆ ಬಿಜೈ ಸಂತ ಫ್ರಾನ್ಸಿಸ್ ಝೇವಿಯರ್ ಚರ್ಚ್‌ನ ಪ್ರಧಾನ ಧರ್ಮಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದ ಅವರು, ವಾಮಂಜೂರು ಚರ್ಚ್‌ಗೆ ವರ್ಗಾವಣೆಗೊಂಡ ವಂ|ಲಾರೆನ್ಸ್ ಮಸ್ಕರೇನಸ್ ಅವರ ಸ್ಥಾನವನ್ನು ಭರ್ತಿ ಮಾಡಿದ್ದಾರೆ.
ಚರ್ಚ್ ದ್ವಾರದ ಬಳಿ ನಿರ್ಗಮಿತ ಪ್ರಧಾನ ಧರ್ಮಗುರು ವಂ| ಲೋರೆನ್ಸ್ ಮಸ್ಕರೇನಸ್ ಹೂಹಾರ ಹಾಕಿ ನೂತನ ಧರ್ಮಗುರುರನ್ನು ಸ್ವಾಗತಿಸಿದರು. ಬಳಿಕ ಬ್ಯಾಂಡ್ ವಾದ್ಯಘೋಷದೊಂದಿಗೆ ಪ್ರಾರ್ಥನಾ ಮಂದಿರಕ್ಕೆ ಮೆರವಣಿಗೆ ನಡೆಸಲಾಯಿತು.
ಅಧಿಕಾರ ಹಸ್ತಾಂತರ ಕಾರ್ಯಕ್ರಮವನ್ನು ಸುಳ್ಯ ಸಂತ ಬ್ರಿಜಿಡ್ ಚರ್ಚ್‌ನ ಪ್ರಧಾನ ಧರ್ಮಗುರು ವಂ|ಅಲ್ವಿನ್ ಎಡ್ವರ್ಡ್ ಡಿಕುನ್ನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿಸಿದರು.
ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ವಂ|ಡಾ|ಜಾನ್ ಬಾಪ್ಟಿಸ್ಟ್ ಸಲ್ದಾನಾ, “ಪ್ರೀತಿಯಿಂದ ಸೇವೆ ಮಾಡುವ ಅವಕಾಶ ದೊರೆತಿದ್ದು, ಎಲ್ಲರ ಸಹಕಾರದೊಂದಿಗೆ ಚರ್ಚ್ ಅಭಿವೃದ್ಧಿಗೆ ಶ್ರಮಿಸುತ್ತೇನೆ” ಎಂದರು.
ನಿರ್ಗಮಿತ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನಸ್ ಮಾತನಾಡಿ, ಪುತ್ತೂರು ಚರ್ಚ್‌ನಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡಿದ ಭಕ್ತರಿಗೆ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಸಹಾಯಕ ಧರ್ಮಗುರು ವಂ|ಮರ್ವಿನ್ ಪ್ರವೀಣ್ ಲೋಬೋ, ವಿವಿಧ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಚರ್ಚ್ ಪಾಲನಾ ಸಮಿತಿ ಸದಸ್ಯರು, ಧರ್ಮಭಗಿನಿಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Join WhatsApp Group
error: Content is protected !!