ಬೆಳ್ತಂಗಡಿ :- ಗೇರುಕಟ್ಟೆಯಲ್ಲಿ ಕಾರ್ಯಾಚರಿಸುತ್ತಿರುವ ಸಯ್ಯದ್ ಉಮರ್ ಅಸ್ಸಖಾಫ್ ತಂಙಳ್ ನೇತೃತ್ವದ ಮನ್ ಶರ್ ವಿದ್ಯಾಸಂಸ್ಥೆಯ ಪಿಯು ಕಾಲೇಜು ವಿದ್ಯಾರ್ಥಿಗಳಿಂದ ಜೂನ್ 26  ಗುರುವಾರ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಹಾಗೂ ಕಳ್ಳಸಾಗಾಣಿಕೆ ವಿರೋಧಿ ದಿನ ಆಚರಣೆ ನಡೆಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಮನ್ ಶರ್ ವಿದ್ಯಾಸಂಸ್ಥೆಯ ಜನರಲ್ ಮ್ಯಾನೇಜರ್ ಹೈದರ್ ಮರ್ದಾಳ ಮಾತನಾಡಿ, “ವಿದ್ಯಾರ್ಥಿಗಳು ದೇಶದ ಕೀರ್ತಿಯ ಬೆನ್ನೆಲುಬು ಅಂತಹ ಅದ್ಭುತ ಜೀವಗಳು ಮಾದಕ ವಸ್ತುಗಳಿಗೆ ಬಲಿಯಾಗಿ ದೇಶದ ಬಲವನ್ನು ಕುಗ್ಗಿಸುವಂತವರಾಗಬಾರದು, ಅವರಿಂದ ಅದ್ಭುತ ನಾಳೆಗಳ ಭರವಸೆಯು ಸಾಧ್ಯ” ಎಂಬ ಸಂದೇಶವನ್ನು ನೀಡಿದರು.ಹಾಗೆಯೇ ಪಿಯುಸಿ ವಿಭಾಗದ ಪ್ರಾಂಶುಪಾಲರಾದ ಹಂಸಶ್ರೀ ಬಿ.ಆರ್ ಅವರು ಮಾತನಾಡಿ “ದೇಶದ ಸದೃಢ  ಯುವಜನಾಗಿರುವ ಕಾಲೇಜು  ವಿದ್ಯಾರ್ಥಿಗಳಿಂದ ಊರು, ಜಿಲ್ಲೆ, ರಾಜ್ಯ ಮಾತ್ರವಲ್ಲದೇ ಇಡೀ ದೇಶವನ್ನು ಮಾದಕ ದ್ರವ್ಯ ಹಾಗೂ ಕಳ್ಳಸಾಗಾಣಿಕೆ ತಡೆಯುವಂತಹ ಶಕ್ತಿಯಾಗಿ ಪರಿವರ್ತಿಸಬಹುದು ಆ ನೆಲೆಯಲ್ಲಿ ಈ ಅಭಿಯಾನವು ಮುನ್ನುಗ್ಗಬೇಕು” ಎಂಬ ಆಶಯವನ್ನು ವ್ಯಕ್ತಪಡಿಸಿದರು.  ಪಿಯು ಕಾಲೇಜು ಉಪಪ್ರಾಂಶುಪಾಲರಾದ ಮಹಮ್ಮದ್ ತೌಫೀಕ್ ಪುತ್ತೂರು ಇವರು ಈ ಅಭಿಯಾನದ ಪ್ರತಿಜ್ಞಾ ವಿಧಿಯನ್ನು ವಿದ್ಯಾರ್ಥಿಗಳಿಗೆ ಬೋಧಿಸಿ ಅವರಲ್ಲಿ ಅಭಿಯಾನದ ದೃಢಸಂಕಲ್ಪದೊಂದಿಗೆ ಜಾಗೃತಿಯನ್ನು ಮೂಡಿಸಿದರು.

  ಪಿಯು  ವಿಭಾಗದ ಉಪನ್ಯಾಸಕರಾದ ಗೌತಮಿ ಶರಣ್, ಸುವೈಬತುಲ್ ಅಸ್ಲಾಮಿಯ,ನಿಶಾ, ಸುಪ್ರಿಯಾ ಜಾಧವ್, ಕಾವ್ಯಶ್ರೀ, ನಿರುಪಮಾ ಹಾಗೂ ಶಿಕ್ಷಕೇತರ ಸಿಬ್ಬಂದಿಗಳಾದ ಶಬೀರ್ ಮಾವಿನಕಟ್ಟೆ, ಅಬ್ದುಲ್ಲ ಪುಂಜಾಲಕಟ್ಟೆ, ತಸ್ಕೀನ ಹಾಗೂ ಮುಹ್ಸೀನ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Join WhatsApp Group
error: Content is protected !!